ವಿಶೇಷ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಸುತ್ತೂರು ಶ್ರೀ ಭಗವಾನ್ ಬಾಹುಬಲಿಗೆ ಅಭಿಷೇಕ
ಹಾಸನ

ವಿಶೇಷ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಸುತ್ತೂರು ಶ್ರೀ ಭಗವಾನ್ ಬಾಹುಬಲಿಗೆ ಅಭಿಷೇಕ

May 28, 2018

ಶ್ರವಣಬೆಳಗೊಳ:  ಜೈನಕಾಶಿ ಶ್ರವಣ ಬೆಳಗೊಳದಲ್ಲಿ ಇಂದು ನಡೆದ ವಿಶೇಷ ಮಹಾಮಸ್ತಕಾ ಭಿಷೇಕ ಮಹೋತ್ಸವದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಶ್ರೀವೀರ ಸಿಂಹಾಸನ ಮಹಾ ಸಂಸ್ಥಾನ ಪೀಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಪಾಲ್ಗೊಂಡು ಭಗವಾನ್ ಬಾಹುಬಲಿ ಸ್ವಾಮಿಗೆ ಅಭಿಷೇಕ ನೇರವೇರಿಸಿದರು.

ವಿಂಧ್ಯಗಿರಿ ಬೆಟ್ಟದ ತಪ್ಪಲಿನಲ್ಲಿರುವ ಸ್ವಾಗತ ಕಚೇರಿಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿದ ಸ್ವಾಮೀಜಿಯವರಿಗೆ ಪಾದಪೂಜೆ ಮಾಡುವ ಮೂಲಕ ಸ್ವಾಗತಿಸಿ, ನೆನಪಿನ ಕಾಣ ಕೆಗಳನ್ನು ನೀಡಿ ಗೌರವಿಸಲಾಯಿತು. ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ ಡೋಲಿಯ ಮೂಲಕ ಬೆಟ್ಟವೇನ್ನೇರಿ ಬಾಹುಬಲಿ ಮೂರ್ತಿಗೆ ಅಭಿಷೇಕ ಮಾಡಿದರು. ನಂತರ ಆಶೀರ್ವಚನ ನೀಡಿ ಮಾತನಾಡಿ ಸುತ್ತೂರು ಶ್ರೀಗಳು, ಭಗವಾನ್ ಬಾಹು ಬಲಿ ಸ್ವಾಮಿಯ ತ್ಯಾಗ, ಶಾಂತಿ ಮತ್ತು ಅಹಿಂಸಾ ತತ್ವಗಳು ಇಡೀ ಪ್ರಪಂಚಕ್ಕೆ ಮಾದರಿಯಾಗಿವೆ. ಇಡೀ ಪ್ರಪಂಚವನ್ನೇ ಗೆದ್ದು, ಸರ್ವವನ್ನು ತ್ಯಜಿಸಿದ ಗೊಮ್ಮಟೇಶ್ವರ ಸ್ವಾಮಿಯು ಕಠಿಣ ತಪಸ್ಸು ಮಾಡಿ ಮುಕ್ತಿ ಹೊಂದಿದಂಥವರು, ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ಬಹಳ ಸಂತೋಷ ವಾಗಿದೆ. ನಮಗೆ ತಿಳಿದಂತೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ಇತಿಹಾಸದಲ್ಲಿಯೇ ಪ್ರÀಥಮ ವಾಗಿ 4ನೇ ಬಾರಿಗೆ ಮಹಾಮಸ್ತಕಾಭಿಷೇಕ ಮಹೋ ತ್ಸವÀದ ಜವಾಬ್ದಾರಿ ಹೊತ್ತು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾಮಸ್ತಕಾಭಿಷೇಕ ಮಹೋತ್ಸವವು ಫೆಬ್ರವರಿ ತಿಂಗಳಿನಿಂದ ಆರಂಭವಾಗಿ ಪ್ರತಿ ಭಾನುವಾರವು ಬಹಳ ವಿಜೃಂಭಣೆಯಿಂದ ಸಾಗುತ್ತಿದ್ದು, ಇಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ವತಿಯಿಂದ ಮಹಾಮಸ್ತಕಾಭಿಷೇಕ ಮಹೋತ್ಸವದ ಸೇವೆಯು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.

Translate »