ರಾಮನಾಥಪುರ: ನಾನು ಎಂದೂ ಅಧಿಕಾರದ ಹಿಂದೆ ಹೋದವನಲ್ಲ, ಹಣದ ಅಮಿಷಕ್ಕೆ ಒಳಗಾದವನಲ್ಲ. ಪ್ರಾಮಾ ಣ ಕವಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ನೂತನ ಕ್ಷೇತ್ರದ ಶಾಸಕ ಡಾ. ಎ.ಟಿ.ರಾಮಸ್ವಾಮಿ ತಿಳಿಸಿದರು.
ರಾಮನಾಥಪುರ ಬಸವೇಶ್ವರ ವೃತ್ತದಲ್ಲಿ ನಡೆದ ಅಭಿನಂದನಾ ಪೂರ್ವಕ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತ ಬಾಂಧವರು ಹೆಚ್ಚಿನ ರೀತಿ ಮತ ನೀಡಿರುವು ದಕ್ಕೆ ಅಭಿನಂದನೆ. ಹಣ, ಹೆಂಡ, ಜಾತಿ, ಯಾವುದನ್ನು ಲೆಕ್ಕಿಸದೆ ನನಗೆ ನೀವು ನೀಡಿರುವ ಈ ಅವಕಾಶಕ್ಕೆ ವಿಶ್ವಾಸವಿಟ್ಟು ಪಕ್ಷಭೇದ ಮರೆತು ಪ್ರಾಮಾಣ ಕವಾಗಿ ಕೆಲಸ ಮಾಡುತ್ತೇನೆ ಎಂದರು.
ಎಲ್ಲರೂ ನಮ್ಮೊಂದಿಗೆ ಸೇರಿ ಶ್ರಮವಹಿಸಿ ದರೆ ಹಲವು ಸಂಕಷ್ಟಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಈ ಕುರಿತು ತಾಲೂಕು ಅಧಿಕಾರಿಗಳ ಜೊತೆ ಮಾತನಾಡಿ, ತಾಲೂಕಿನ ಬಗ್ಗೆ ಒಂದು ಚಿತ್ರಣವನ್ನು ಪಡೆದು ಅದನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣ ಕ ಪ್ರಯತ್ನ ಮಾಡುತ್ತೇನೆ. ನೀವೆ ಲ್ಲರೂ 5 ವರ್ಷಗಳ ಕಾಲ ಇದೇ ರೀತಿ ವಿಶ್ವಾಸ ನೀಡಿ ನಮ್ಮೊಂದಿಗೆ ಸಹಕರಿ ಸಬೇಕು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಯಶಸ್ವಿಯಾಗಿ 5 ವರ್ಷ ಪೂರೈಸ ಲಿದ್ದು, ಉತ್ತಮ ಅಡಳಿತ ನೀಡಲಿದೆ. ರಾಜ್ಯದ ಜನಾದೇಶ ಪಡೆದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಅಡಳಿತ ಸಮ್ಮಿಶ್ರ ಸರ್ಕಾರ ಜಾತ್ಯತೀತ ಮತ್ತು ಸಮಾನ ನಾಯಕರಿಂದ ಕೂಡಿದೆ. ಅಲ್ಲದೆ ಕುಮಾರಸ್ವಾಮಿಯವರು ರೈತರ ಪರ ಇದ್ದಾರೆ. ಹೀಗಾಗಿ ಎಲ್ಲರೂ ಒಟ್ಟಾಗಿ ಸರ್ಕಾರವನ್ನು ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಹೋಗಲಿ ದ್ದಾರೆ ಎಂದು ಭರವಸೆ ನೀಡಿದರು.
ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ರಾಜಕೀಯಕ್ಕೆ ನಾನು ಬಂದಿದ್ದೇನೆ. ನಾನು ನಿಮ್ಮೆಲ್ಲರ ವಿಶ್ವಾಸಕ್ಕೆ ಹಿಂದೆಯೂ ಕೇಡು ಬಯಸಿಲ್ಲ. ಮುಂದೆಯೂ ಬಯಸು ವುದಿಲ್ಲ. ಹೀಗಾಗಿ ಈ ಬಾರಿ ಎಲ್ಲರೂ ನನ್ನನ್ನು ಆಶೀರ್ವದಿಸಿದ್ದೀರಿ. ನಾನು ಈ ಕ್ಷೇತ್ರದ ಘನತೆ ಹಾಗೂ ಗೌರವವನ್ನು ರಾಜ್ಯ ತಿರುಗಿ ನೋಡುವಂತೆ ನಾನು ಮಾಡಿ ತೋರಿಸುತ್ತೇನೆ. ಮುಂದೆಯೂ ಸಹ ಅದೇ ಹಾದಿಯಲ್ಲಿ ನಡೆಯುತ್ತೇನೆ. ಈ ಬಾರಿ ಮತದಾರರು ನನ್ನನ್ನು ಹೆಚ್ಚಿನ ರೀತಿಯಲ್ಲಿ ಆಶೀರ್ವದಿಸಿ ವಿಧಾನಸಭೆಗೆ ಕಳುಹಿಸಿದ್ದು, ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸು ವುದಾಗಿ ಅವರು ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜನಾರ್ದನ ಗುಪ್ತ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಜಿಪಂ ಮಾಜಿ ಸದಸ್ಯ ಹೆಚ್.ಎಸ್. ಶಂಕರ್, ಮುಖಂಡರಾದ ಪೀರ್‍ಸಾಬ್, ರಾಮೇಗೌಡ, ಸೋಮಣ್ಣ, ಕೃಷ್ಣೇಗೌಡ, ಮುದ್ದನ ಹಳ್ಳಿ ರಮೇಶ್, ಎಂ.ಎಚ್. ಕೃಷ್ಣಮೂರ್ತಿ, ಉಪಾರಿಕೇಗೌಡ, ಪ್ರಭಾಕರ್, ಆರ್.ಟಿ.ರಮೇಶ್, ಮುನವರ್, ಗೋವಿಂದೇಗೌಡ ಇತರರಿದ್ದರು.