ಸ್ವಯಂಪ್ರೇರಿತ ಬಂದ್‍ಗೆ ವರ್ತಕರಿಗೆ ಮನವಿ
ಹಾಸನ

ಸ್ವಯಂಪ್ರೇರಿತ ಬಂದ್‍ಗೆ ವರ್ತಕರಿಗೆ ಮನವಿ

May 28, 2018

ಬೇಲೂರು: ರಾಜ್ಯದ ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ರೈತರ ಹಿತದೃಷ್ಟಿಯಿಂದ ವರ್ತಕರು ಸ್ವಯಂ ಪ್ರೇರಿತರಾಗಿ ಸೋಮವಾರ ಬಂದ್ ಆಚರಿಸಿ ಸಹಕಾರ ನೀಡುವಂತೆ ವರ್ತಕರಲ್ಲಿ ಮನವಿ ಮಾಡಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕೊರಟಿಕೆರೆ ಪ್ರಕಾಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಬದುಕು ಹಸನಾಗಿದ್ದರೆ ನಾಡಿನ ಪ್ರತಿಯೊಬ್ಬರ ಬದುಕು ಉತ್ತಮ ವಾಗಿರುತ್ತದೆ. ರೈತರ ಆರ್ಥಿಕತೆ ಅಚ್ಚುಕಟ್ಟಾ ಗಿದ್ದರೆ ವರ್ತಕರ ವ್ಯವಹಾರವೂ ಉತ್ತಮ ವಾಗಿರುತ್ತದೆ. ಇದನ್ನು ಅರಿತು ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ದೇವೆ. ಇದಕ್ಕೆ ಪೂರಕವಾಗಿ ರೈತರ ಮೇಲಿನ ವಿಶ್ವಾಸ ಹಾಗೂ ಅವರ ಹಿತಾಸಕ್ತಿ ಹೊಂದಿರುವ ವರ್ತಕ ಸಮುದಾಯಕ್ಕೆ ಸೋಮವಾರ ಸ್ವಯಂಪ್ರೇರಿತರಾಗಿ ಬಂದ್ ಆಚರಿಸಲು ಕೋರಿದ್ದೇವೆ ಎಂದು ಹೇಳಿದರು.

Translate »