ಕರ್ನಾಟಕ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ
ಚಾಮರಾಜನಗರ

ಕರ್ನಾಟಕ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

May 28, 2018
  •  ಗುಂಡ್ಲುಪೇಟೆಯಲ್ಲಿ ಉತ್ತಮ
  •  ಉಳಿದೆಡೆ ಪ್ರತಿಭಟನೆಗೆ ಮಾತ್ರ ಸೀಮಿತ
  •  ಎಂದಿನಂತೆ ಸಂಚರಿಸಿದ ವಾಹನಗಳು
  •   ಸಾಲ ಮನ್ನಾಕ್ಕೆ ಬಿಜೆಪಿ ಮುಖಂಡರಿಂದ ಆಗ್ರಹ

ಚಾಮರಾಜನಗರ: ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಬಿಜೆಪಿಯಿಂದ ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಾಮರಾಜ ನಗರದಲ್ಲಿ ಬಿಜೆಪಿ ಮುಖಂಡರು ಪ್ರತಿ ಭಟನಾ ಮೆರವಣ ಗೆ ನಡೆಸಿದರು. ಕೊಳ್ಳೇಗಾಲದಲ್ಲಿ ಬೈಕ್ ರ್ಯಾಲಿ ನಡೆಸಲಾ ಯಿತು. ಹನೂರಿನಲ್ಲಿ ಪರಿಮಳಾ ನಾಗಪ್ಪ ಅವರ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು.

ಗುಂಡ್ಲುಪೇಟೆಯಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹೊಟೇಲ್, ಕ್ಯಾಂಟೀನ್, ಅಂಗಡಿ ಮಾಲೀಕರು ಬಂದ್‍ಗೆ ಬೆಂಬಲ ಸೂಚಿಸಿ ಅಂಗಡಿಗಳನ್ನು ಬಂದ್ ಮಾಡಿದರು. ಈ ಮೂಲಕ ಜಿಲ್ಲೆಯಲ್ಲಿ ಬಂದ್ ಗುಂಡ್ಲುಪೇಟೆ ಹೊರತುಪಡಿಸಿ ಉಳಿದೆಡೆ ಬಿಜೆಪಿ ಮುಖಂಡರ ಪ್ರತಿ ಭಟನೆಗೆ ಮಾತ್ರ ಸೀಮಿತವಾಯಿತು.

ಚಾಮರಾಜನಗರ ವರದಿ(ಎಸ್‍ಎಸ್): ಜಿಲ್ಲಾ ಕೇಂದ್ರದಲ್ಲಿ ಬಂದ್‍ನ ಯಾವುದೇ ಕುರುಹುವೇ ಇಲ್ಲದಂತೆ ಇತ್ತು. ಜನ ಜೀವನ, ವಾಹನ ಸಂಚಾರದಲ್ಲಿ ಯಾವುದೇ ಬದಲಾವಣೆಗಳು ಆಗಿರಲಿಲ್ಲ. ಗುಂಡ್ಲು ಪೇಟೆ ವೃತ್ತದಲ್ಲಿ ಕೆಲವು ವರ್ತಕರು ಅಂಗಡಿ ಗಳನ್ನು ಬಂದ್ ಮಾಡಿದನ್ನು ಹೊರತು ಪಡಿಸಿದರೆ ಬಂದ್‍ಗೆ ಯಾವುದೇ ರೀತಿ ಯಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ.

ಚಾಮರಾಜನಗರದಲ್ಲಿ ಬಾಗಿಲು ತೆರೆದಿದ್ದ ಅಂಗಡಿ-ಮುಂಗಟ್ಟುಗಳು.

ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಮಾಡ ಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಘಟಕದಿಂದ ಕರ್ನಾಟಕ ಬಂದ್‍ಗೆ ಕರೆ ನೀಡಿತ್ತು. ಆದರೆ, ಜಿಲ್ಲೆಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಬಂದ್ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಚಾರ ನಡೆಸಲಿಲ್ಲ. ಹಾಗಾಗಿ, ಜಿಲ್ಲೆಯ ವಿವಿಧೆಡೆ ಬಂದ್‍ನ ಯಾವುದೇ ವಾತಾವರಣ ಕಂಡು ಬರಲಿಲ್ಲ. ಜಿಲ್ಲಾ ಕೇಂದ್ರದಲ್ಲಿ ಎಂದಿ ನಂತೆ ಅಂಗಡಿ-ಮುಂಗಟ್ಟುಗಳು, ಹೊಟೇಲ್, ಕ್ಯಾಂಟೀನ್ ಬಾಗಿಲು ತೆರೆದಿದ್ದವು. ಕೆಎಸ್ ಆರ್‍ಟಿಸಿ ಹಾಗೂ ಖಾಸಗಿ ಬಸ್‍ಗಳು ಸಂಚರಿಸಿದವು. ಪೆಟ್ರೋಲ್ ಬಂಕ್, ಚಿತ್ರ ಮಂದಿರಗಳು ಕಾರ್ಯನಿರ್ವಹಿಸಿದವು. ಶಾಲಾ-ಕಾಲೇಜುಗಳಿಗೆ ಸೋಮವಾರ ದವರೆಗೂ ಬೇಸಿಗೆ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ಶಾಲೆಗಳತ್ತ ಸುಳಿಯಲಿಲ್ಲ. ಶಿಕ್ಷಕರು ಮಾತ್ರ ಶಾಲೆಗೆ ತೆರಳಿ ಮಂಗಳ ವಾರ ಶಾಲೆಗಳನ್ನು ಪ್ರಾರಂಭಗೊಳ್ಳುವ ಕಾರಣ ಸಿದ್ಧತೆ ಕೈಗೊಂಡರು. ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲ ರೀತಿಯ ವಾಹನ ಗಳ ಸಂಚಾರ ಸಾಮಾನ್ಯವಾಗಿತ್ತ್ತು.

ಮುಖಂಡರ ವಶ: ಚಾಮರಾಜ ನಗರದಲ್ಲಿ ಬಿಜೆಪಿಯ ಇಪ್ಪತ್ತಕ್ಕೂ ಅಧಿಕ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡು ನಂತರ ಬಿಡುಗಡೆಗೊಳಿಸಿದರು.

ನಗರದ ಮೇಘಾ ಕಾಂಪ್ಲೆಕ್ಸ್‍ನಲ್ಲಿ ಇರುವ ಪಕ್ಷದ ಕಚೇರಿಯಲ್ಲಿ ಮುಖಂಡರು ಜಮಾಯಿಸಿದರು. ನಂತರ ಅಲ್ಲಿಂದ ಮೆರವಣ ಗೆ ಆರಂಭಿಸಿ ದಾರಿಯುದ್ದಕ್ಕೂ ತೆರೆದಿದ್ದ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡುತ್ತಾ ತೆರಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಮುಂಜಾಗ್ರತ ಕ್ರಮವಾಗಿ ಇಪ್ಪತ್ತಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆದರು. ಅವರನ್ನು ಜಿಲ್ಲಾ ಸಶಸ್ತ್ರ ಮೀಸಲುಪಡೆಗೆ ಕರೆತಂದು ಬಳಿಕ ಬಿಡುಗಡೆಗೊಳಿಸಿದರು.

ಈ ವೇಳೆ ಮುಖಂಡರಾದ ಎಸ್. ಬಾಲಸುಬ್ರಮಣ್ಯಂ, ಕೆಲ್ಲಂಬಳ್ಳಿ ಸೋಮ ನಾಯಕ, ಬಸವಣ್ಣ, ಸುಂದರ್‍ರಾಜ್, ಆರ್.ವಿ.ಮಹದೇವಸ್ವಾಮಿ, ಮೂಡ್ಲಪುರ ನಂದೀಶ್, ಚಂದ್ರಶೇಖರ್, ನಾಗೇಶ್‍ನಾಯ್ಕ್, ಪುರುಷೋತ್ತಮ್ ಇತರರು ಇದ್ದರು.

ಕೊಳ್ಳೇಗಾಲ ವರದಿ (ನಾಗೇಂದ್ರ): ಕರ್ನಾಟಕ ಬಂದ್ ಬೆಂಬಲಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ಜಾಥಾ ನಡೆಸಿ ಹಕ್ಕೊತ್ತಾಯಗಳ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.

ಪಟ್ಟಣದ ಬಸ್ ನಿಲ್ದಾಣದಿಂದ ಬೈಕ್ ಜಾಥಾ ಆರಂಭಿಸಿದ ಕಾರ್ಯಕರ್ತರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಘೋಷಣೆ ಕೂಗಿದರು. ಬಳಿಕ, ನಾಗಪ್ಪ ವೃತ್ತದಲ್ಲಿ ಮಾನವ ಸರ ಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಕೊಳ್ಳೇಗಾಲದಲ್ಲಿ ಬಿಜೆಪಿ ಮುಖಂಡರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಜಿ.ಪಂ.ಸದಸ್ಯ ನಾಗರಾಜು (ಕಮಲ್), ಮುಖಂಡರಾದ ಕೂಡ್ಲೂರು ಶ್ರೀಧರ್‍ಮೂರ್ತಿ, ಬೂದಿತಿಟ್ಟು ಶಿವ ಕುಮಾರ್, ಜಿ.ಪಿ.ಶಿವಕುಮಾರ್, ನಂಜಪ್ಪ, ಉಷಾರಾಣ , ಶಂಕರ್, ಮಹದೇವಪ್ಪ ಹಾಜ ರಿದ್ದರು. ಬಂದ್‍ಗೆ ನಗರದ ಜನರಿಂದ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ. ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿಗಳು ತೆರೆದಿದ್ದವು. ಚಲನಚಿತ್ರ ಮಂದಿರಗಳು, ಹೊಟೇಲ್, ಶಾಲಾ- ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬಸ್ ಸಂಚಾರ ಸಾಮಾನ್ಯವಾಗಿತ್ತು.

ಹನೂರು ವರದಿ(ಸೋಮ): ಬಂದ್ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹನೂರು ಪಟ್ಟಣದ ಪೆಟ್ರೋಲ್ ಬಂಕ್ ನಿಂದ ಮೆರವಣ ಗೆ ಹೊರಟು ಅಂಬೇಡ್ಕರ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿ ಸಿದರು. ನಂತರ ವಿಶೇಷ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವದ ವಹಿಸಿದ್ದ ಮಾಜಿ ಶಾಸಕಿ ಪರಿಮಳನಾಗಪ್ಪ ಮಾತ ನಾಡಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವಲ್ಲಿ ವಿಫಲರಾಗಿದ್ದಾರೆ. ದಿನಕ್ಕೂಂದು ಹೇಳಿಕೆ ನೀಡುವ ಮೂಲಕ ಇದು ಸಮ್ಮಿಶ್ರ ಸರ್ಕಾರ, ಇದು ನನ್ನ ತಿರ್ಮಾನವಲ್ಲ, ಎಲ್ಲರ ಅಭಿಪ್ರಾಯ ಪಡೆದು ಸಾಲ ಮನ್ನಾ ಮಾಡಬೇಕು ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ವನ್ನು ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದು ಹೇಳಿತ್ತಿದ್ದರು. ಆದರೆ, ಅವರು ಅಧಿಕಾರಕ್ಕೆ ಬಂದರೂ ಸಾಲ ಮನ್ನಾ ಮಾಡಿಲ್ಲ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸಲು ವಿಫಲ ರಾಗಿದ್ದಾರೆ ಎಂದು ದೂರಿದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬೂದುಬಾಳು ವೆಂಕಟಸ್ವಾಮಿ ಮಾತ ನಾಡಿದರು. ಈ ವೇಳೆ ಮುಖಂಡರಾದ ಉದ್ದನೂರು ಪ್ರಸಾದ್, ಹನೂರು ನಂಜಪ್ಪ, ಪುಟ್ಟರಾಜು, ಶಿವರಾಮು, ಜೈರಾಮ್, ಸುರೇಶ್, ಶಂಕರಪ್ಪ, ವೃಷಭೇಂದ್ರ, ಕಣ್ಣೂರು ಬಸವರಾಜಪ್ಪ, ಶಾಗ್ಯ ರಾಚಪ್ಪ, ಒಡೆಯರಪಾಳ್ಯ ಬಸವಣ್ಣ ಇದ್ದರು.

ಗುಂಡ್ಲುಪೇಟೆಯಲ್ಲಿ ಯಶಸ್ವಿ

ಗುಂಡ್ಲುಪೇಟೆ:  ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಕರೆ ನೀಡಿದ ಕರ್ನಾಟಕ ಬಂದ್‍ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು.

ಬೆಳಿಗ್ಗೆ ಸಾರಿಗೆ ಬಸ್‍ಗಳು ಎಂದಿನಂತೆ ಸಂಚರಿಸಿದರೂ ಪ್ರಯಾಣ ಕರ ಸಂಖ್ಯೆ ಇಳಿಮುಖವಾಗಿತ್ತು. ಬಂದ್ ಆದರೆ, ತೊಂದರೆಯಾಗಲಿದೆ ಎಂಬ ಭಾವನೆಯಿಂದ ಗ್ರಾಮಾಂತರ ಪ್ರದೇಶದ ಜನರು ಆಗಮಿಸಲಿಲ್ಲ. ಅಂಚೆ ಕಚೇರಿ, ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದವು. ಪೆಟ್ರೋಲ್ ಬಂಕ್, ಹೊಟೇಲ್, ಟೀ ಕ್ಯಾಂಟೀನ್ ಹಾಗೂ ಅಂಗಡಿಗಳ ಮಾಲೀಕರು ಬಾಗಿಲು ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸಿದ್ದರು. ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸುತ್ತಿದ್ದಂತೆಯೇ ಅಲ್ಲಲ್ಲಿ ಬಾಗಿಲು ತೆರೆದಿದ್ದ ಅಂಗಡಿಗಳು ಕೂಡ ಬಾಗಿಲು ಮುಚ್ಚಿದವು. ಈ ಸಂದರ್ಭದಲ್ಲಿ ತೆರೆದಿದ್ದ ಪೆಟ್ರೋಲ್ ಬಂಕ್ ಮುಚ್ಚಿಸಲು ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮುಂದದಾಗ ಸರ್ಕಲ್ ಇನ್‍ಸ್ಪೆಕ್ಟರ್ ಜಗದೀಶ್ ಅವರನ್ನು ತಡೆದರು. ಈ ವೇಳೆ ಕೆಲಹೊತ್ತು ಮುಖಂಡರು ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಬಳಿಕ, ಬಂಕ್ ಬಾಗಿಲು ಮುಚ್ಚಿಸಲಾಯಿತು.

ಪೆಟ್ರೋಲ್ ಹಾಗೂ ಡೀಸೆಲ್ ದೊರೆಯದೆ ವಾಹನ ಸವಾರರು ಪರದಾಡಿದರೆ, ಇನ್ನೊಂದೆಡೆ ಹೊಟೇಲ್‍ಗಳು ಬಾಗಿಲು ಮುಚ್ಚಿದ್ದರಿಂದ ಊಟ, ತಿಂಡಿ ದೊರೆಯದೆ ಸಾರ್ವಜನಿಕರು ಪರಿತಪಿಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ಅಲ್ಲದೆ ತಾವು ಕಾಂಗ್ರೆಸ್ ಮುಲಾಜಿನಿಂದ ಮುಖ್ಯಮಂತ್ರಿ ಯಾಗಿರುವುದಾಗಿ ಹೇಳಿ ಮತದಾರರಿಗೆ ಅವಮಾನ ಮಾಡಿದ್ದಾರೆ. ಕೂಡಲೇ, ಅವರು ರಾಜ್ಯದ ಜನತೆಯ ಕ್ಷಮೆ ಯಾಚಿಸÀಬೇಕು. ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಂಗಳ ಪ್ರಣಯ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ನಂದೀಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಎಸ್.ಗೋವಿಂದರಾಜನ್, ರಮೇಶ್, ಕುಮಾರ್, ಮುಖಂಡರಾದ ಎನ್.ಮಲ್ಲೇಶ್, ಹುಚ್ಚೇಗೌಡ, ನಾಗೇಂದ್ರ, ಮಲ್ಲಿಕಾರ್ಜುನ್, ಎಸ್.ಸಿ. ಮಂಜುನಾಥ್, ಸತೀಶ್, ಮಡಹಳ್ಳಿರಾಜಣ್ಣ, ನಾಗರಾಜು, ಉದಯ್, ಕಿರಣ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಬಂದ್‍ನ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಕಚೇರಿಗಳು, ಬಸ್‍ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸರ್ಕಲ್‍ಇನ್‍ಸ್ಪೆಕ್ಟರ್ ಜಗದೀಶ್ ಮತ್ತು ಸಬ್‍ಇನ್‍ಸ್ಪೆಕ್ಟರ್ ಶಿವರುದ್ರ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತು.

Translate »