ಶಿಕ್ಷಕರ ಸಮಸ್ಯೆ ಕಡೆಗಣ ಸುತ್ತಿರುವ ಎಂಎಲ್‍ಸಿಗಳು; ಆರೋಪ
ಮೈಸೂರು

ಶಿಕ್ಷಕರ ಸಮಸ್ಯೆ ಕಡೆಗಣ ಸುತ್ತಿರುವ ಎಂಎಲ್‍ಸಿಗಳು; ಆರೋಪ

May 28, 2018

ಮೈಸೂರು:  ಶಿಕ್ಷಣ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಆಯ್ಕೆ ಯಾದವರು ಶಿಕ್ಷಕರ ಸಮಸ್ಯೆ ಕಡೆಗಣ ಸು ತ್ತಿದ್ದಾರೆಂದು ಕರ್ನಾಟಕ ಸಾಮಾಜಿಕ ನ್ಯಾಯ ರಕ್ಷಣಾ ವೇದಿಕೆ ಸಂಚಾಲಕ ಹಂ. ಲಕ್ಕೇಗೌಡ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಶಿಕ್ಷಕರು ಅನೇಕ ಸಮಸ್ಯೆ ಎದುರಿಸುತ್ತಿದ್ದರೂ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವವರು ಆ ಬಗ್ಗೆ ಗಮನ ಹರಿಸದಿರುವುದರಿಂದಾಗಿ ಅವರನ್ನು ಕೇಳುವ ವರು ಯಾರೂ ಇಲ್ಲದಂತಾಗಿದೆ.

ಇದೇ ವೇಳೆ ಶಿಕ್ಷಣ ಇಲಾಖೆ ಕಚೇರಿ ಗಳಲ್ಲಿ ಭ್ರಷ್ಟಾಚಾರ ಮೇರೆ ಮೀರಿದ್ದು, ಅನೇಕ ವರ್ಷಗಳಿಂದ ಭ್ರಷ್ಟ ಸಿಬ್ಬಂದಿ ಒಂದೇ ಕಡೆ ಇದ್ದರೂ ಅವರ ವರ್ಗಾವಣೆ ನಡೆ ದಿಲ್ಲ. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಗುಣ ಮಟ್ಟ ಕುಸಿದಿರುವ ಕಾರಣ ಸಂಬಂಧ ಪಟ್ಟವರು ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಶಂಕರ್, ಬಿ.ಎಚ್.ಗೋವಿಂದೇ ಗೌಡ ಉಪಸ್ಥಿತರಿದ್ದರು.

Translate »