ಮುತ್ತಿನಮುಳಸೋಗೆ ಗ್ರಾಮದಲ್ಲಿ ಮೊಸಳೆ ಮೊಟ್ಟೆಗಳು ಪತ್ತೆ
ಮೈಸೂರು

ಮುತ್ತಿನಮುಳಸೋಗೆ ಗ್ರಾಮದಲ್ಲಿ ಮೊಸಳೆ ಮೊಟ್ಟೆಗಳು ಪತ್ತೆ

May 28, 2018

ಬೆಟ್ಟದಪುರ:  ಮುತ್ತಿನಮುಳಸೋಗೆ ಗ್ರಾಮದಲ್ಲಿ ಮೊಸಳೆಯ ಮೊಟ್ಟೆಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೆರೆಯ ದಡದಲ್ಲಿಯೇ 21 ಮೊಸಳೆಯ ಮೊಟ್ಟೆ ಗಳು ಪತ್ತೆಯಾಗಿರುವುದರಿಂದ ಮೊಸಳೆಯ ಕುರುಹು ಪತ್ತೆ ಹಚ್ಚಿ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಆವರ್ತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಮುತ್ತಿನಮುಳ್ಳು ಸೋಗೆ ಗ್ರಾಮಕ್ಕೆ ಸೇರಿದ ಚೌಡಿಕಟ್ಟೆ ಕೆರೆಯ ದಡದಲ್ಲಿ ಮೊಸಳೆ ಇಟ್ಟ 5 ಮೊಟ್ಟೆಯಿಂದ ಹೊರಬಂದ ಮೊಸಳೆ ಮರಿಗಳು ಕಾಣ ಸಿ ಕೊಂಡಿವೆ ಎಂದು ಸಾರ್ವಜನಿಕರ ಮಾಹಿತಿ ಮೇರೆಗೆ ಕೊಪ್ಪ ಉಪವಲಯ ಅರಣ್ಯಾಧಿ ಕಾರಿ ಕೆ.ಟಿ.ರವೀಂದ್ರ ಹಾಗೂ ಬೆಟ್ಟದಪುರ ಪೊಲೀಸ್ ಠಾಣಾಧಿಕಾರಿ ಜೈಸ್ವಾಮಿ ನೇತೃತ್ವ ದಲ್ಲಿ 5 ಮರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಕೆ.ಟಿ. ರವೀಂದ್ರ ಮಾತನಾಡಿ, ಸಾರ್ವಜನಿಕರ ಮಾಹಿತಿ ಮೇರೆಗೆ ಠಾಣಾಧಿಕಾರಿ ಜೈಸ್ವಾಮಿ ಮತ್ತು ನಾನು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ 5 ಮೊಸಳೆ ಮರಿಗಳು ಪತ್ತೆಯಾಗಿರುವುದು ಹಾಗೂ ಇವುಗಳ ತಾಯಿ ಮೊಸಳೆಯು ಸಹ ಇಲ್ಲೇ ಇರು ವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಹಿರಿಯ ಅರಣ್ಯ ಅಧಿಕಾರಿಗಳ ಮಾಹಿತಿ ಮೇರೆಗೆ ಈ 5 ಮೊಸಳೆ ಮರಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲಾಗುತ್ತದೆ ಹಾಗೂ ಇದೇ ಕೆರೆಯಲ್ಲಿರುವ ತಾಯಿ ಮೊಸಳೆಯನ್ನು ಸಹ ಪತ್ತೆಹಚ್ಚಿ ಸಂರಕ್ಷಿಸ ಲಾಗುವುದು ಎಂದು ತಿಳಿಸಿದರು.

ಮೊಟ್ಟೆಗಳನ್ನು ತೆಗೆಯುವಾಗ 5 ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿದ್ದು, ಎಲ್ಲಾ ಮರಿಗಳನ್ನು ಹಾಗೂ ಉಳಿದ ಮೊಟ್ಟೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸ ಲಾಯಿತು. ಈ ಸಂದರ್ಭದಲ್ಲಿ ಬೆಟ್ಟದ ಪುರ ಪಿಎಸ್‍ಐ ಡಿ.ಆರ್. ಜಯಸ್ವಾಮಿ, ಸ್ವಾಮಿ, ಸಿಬ್ಬಂದಿ ಅರುಣಕುಮಾರ್ ಹಾಗೂ ಭಾಸ್ಕರ್ ಇದ್ದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅರಣ್ಯ ರಕ್ಷಕ ಪೊನ್ನಪ್ಪ, ಕೊಟ್ರೇಶ್ ಪೂಜಾರ್ ಹಾಗೂ ಗ್ರಾಮಸ್ಥರುಗಳು ಹಾಜರಿದ್ದರು.

Translate »