Tag: Somwarpet

ಸಾಲಬಾಧೆ: ರೈತ ಆತ್ಮಹತ್ಯೆ
ಕೊಡಗು

ಸಾಲಬಾಧೆ: ರೈತ ಆತ್ಮಹತ್ಯೆ

September 26, 2018

ಸೋಮವಾರಪೇಟೆ:  ಸಾಲಬಾಧೆಯಿಂದ ರೈತನೋರ್ವ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಬಗ್ಗನ ಪಿ.ಕುಶಾಲಪ್ಪ(73) ಆತ್ಮಹತ್ಯೆ ಮಾಡಿ ಕೊಂಡವರು. ಸೋಮವಾರ ಬೆಳಿಗ್ಗೆ 6.40ರ ಸುಮಾರಿಗೆ ತಮ್ಮ ಮಲಗುವ ಕೋಣೆಯಲ್ಲಿ ಕೋವಿಯಿಂದ ಎದೆ ಭಾಗಕ್ಕೆ ಗುಂಡು ಹಾರಿಸಿ ಕೊಂಡು ಮೃತಪಟ್ಟಿದ್ದಾರೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘ, ಕೆಲ ಖಾಸಗಿ ಬ್ಯಾಂಕ್‍ಗಳಲ್ಲಿ ಸಾಲವಿದ್ದು, ಕೈಸಾಲ ಸೇರಿದಂತೆ ಪಟ್ಟು 24 ಲಕ್ಷ ರೂ. ಸಾಲವಿತ್ತು. ಪ್ರಕೃತಿ ವಿಕೋಪದಿಂದ ಕಾಫಿ…

ವಿದ್ಯಾರ್ಥಿನಿ ಆತ್ಮಹತ್ಯೆ
ಕೊಡಗು

ವಿದ್ಯಾರ್ಥಿನಿ ಆತ್ಮಹತ್ಯೆ

September 26, 2018

ಸೋಮವಾರಪೇಟೆ: ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಇಲ್ಲಿಗೆ ಸಮೀಪದ ತಣ್ಣೀರುಹಳ್ಳ ಗ್ರಾಮದ ಅಣ್ಣಪ್ಪ ಎಂಬುವವರ ಪುತ್ರಿ ಟಿ.ಎ. ಜೀವಿತ(17) ನರಿಮೊಗರು ಸರ್ಕಾರಿ ಹಿಂದುಳಿದ ವರ್ಗದವರ ಹಾಸ್ಟೆಲ್‍ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಸೋಮವಾರ ಎಂದಿನಂತೆ ಕಾಲೇಜಿಗೆ ತೆರಳಿದ್ದ ಜೀವಿತ, ಮಧ್ಯಾಹ್ನದ ವೇಳೆಗೆ ಕಾಲೇಜಿನಿಂದ ಹಾಸ್ಟೆಲ್‍ಗೆ ತೆರಳಿ ತನ್ನ ಕೋಣೆ ಯಲ್ಲಿ ವೇಲ್‍ನಿಂದ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಡುಗೆ ಯವರು ಕೋಣೆಯ ಕಿಟಿಕಿ ಬಾಗಿಲು ತೆರೆದು…

ಕ್ರಿಕೆಟ್: ಸೋಮವಾರಪೇಟೆ ರೋಟರಿ ಹಿಲ್ಸ್ ತಂಡ ಪ್ರಥಮ
ಮೈಸೂರು

ಕ್ರಿಕೆಟ್: ಸೋಮವಾರಪೇಟೆ ರೋಟರಿ ಹಿಲ್ಸ್ ತಂಡ ಪ್ರಥಮ

September 25, 2018

ಸೋಮವಾರಪೇಟೆ: ರೋಟರಿ ಹಿಲ್ಸ್ ಆಶ್ರಯದಲ್ಲಿ ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ನಡೆದ ರೋಟರಿ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಯನ್ನು ಅತಿಥೇಯ ಸೋಮವಾರಪೇಟೆ ರೋಟರಿ ಹಿಲ್ಸ್ ತಂಡ ಪಡೆಯಿತು. ರೋಟರಿ ಶನಿವಾರಸಂತೆ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಜೇತ ತಂಡ, 8 ಓವರ್‍ಗಳಲ್ಲಿ 72 ರನ್‍ಗಳನ್ನು ಪೇರಿಸಿತು. ಗುರಿ ಬೆನ್ನ ತ್ತಿದ ಶನಿವಾರಸಂತೆ ತಂಡ 8 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 60 ರನ್‍ಗಳನ್ನು…

ಮಾದಾಪುರ-ಮಡಿಕೇರಿ ರಸ್ತೆ ಕಾಮಗಾರಿ ಪ್ರಗತಿ
ಕೊಡಗು

ಮಾದಾಪುರ-ಮಡಿಕೇರಿ ರಸ್ತೆ ಕಾಮಗಾರಿ ಪ್ರಗತಿ

September 24, 2018

ಸೋಮವಾರಪೇಟೆ: ಮಾದಾಪುರ-ಮಡಿಕೇರಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುವು ಮಾಡಿಕೊಟ್ಟಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಹಟ್ಟಿಹೊಳೆಯಿಂದ ಮುಂದೆ ಕಾಂಡನಕೊಲ್ಲಿ ತಿರುವಿನಲ್ಲಿ ಬರೆ ಕುಸಿತಕ್ಕೆ ಒಳಗಾದ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿತ್ತು. ಇಲ್ಲಿ ರಸ್ತೆಯ ಪುನರ್ ನಿರ್ಮಾಣ ಕಾರ್ಯ ಸಾಗುತ್ತಿದ್ದು, ಕುಸಿದಿರುವ ರಸ್ತೆಗೆ ತಡೆಗೋಡೆಯ ಕಾಮಗಾರಿ ನಡೆಯುತ್ತಿದೆ. ಶಾಸಕ ಅಪ್ಪಚ್ಚು ರಂಜನ್ ಕಾಮಗಾರಿ ನಡೆಯುತ್ತಿರುವ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತಾ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಪ್ರವಾಹ ಹಾಗೂ ಬರೆ ಕುಸಿತದಿಂದ ಹಾನಿಗೊಳಗಾದ ರಸ್ತೆಗಳನ್ನು…

ಸೋಮವಾರಪೇಟೆಯಲ್ಲಿ ಗಣಪತಿ ವಿಸರ್ಜನೆ
ಕೊಡಗು

ಸೋಮವಾರಪೇಟೆಯಲ್ಲಿ ಗಣಪತಿ ವಿಸರ್ಜನೆ

September 24, 2018

ಸೋಮವಾರಪೇಟೆ:  ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಬ್ರಾಹ್ಮಣರ ಸಮಾಜದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ಸ್ಥಳೀಯ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು. ಬೆಳಗ್ಗಿನಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ನಂತರ ಸಂಜೆ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಮೂರ್ತಿಗಳನ್ನು ಇಟ್ಟು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾದ್ಯಗೋಷ್ಟಿಗ ಳೊಂದಿಗೆ ಮೆರವಣಿಗೆಯ ನಂತರ ಅನೆಕೆರೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ವಿಜೇತ್, ಮಾತಾ ಬಳಗದ ಅಧ್ಯಕ್ಷೆ ಪಂಕಜಾ ಶ್ಯಾಮ್‍ಸುಂದರ್, ದೇವಿ ಬಳಗದ ಅಧ್ಯಕ್ಷೆ ವಸಂತಾ ರಮೇಶ್, ಎನ್.ಎಸ್….

ನಿಂತಿದ್ದ ಕ್ರೇನ್‍ಗೆ ಬೈಕ್ ಡಿಕ್ಕಿ; ಸವಾರ ಸಾವು
ಕೊಡಗು

ನಿಂತಿದ್ದ ಕ್ರೇನ್‍ಗೆ ಬೈಕ್ ಡಿಕ್ಕಿ; ಸವಾರ ಸಾವು

September 16, 2018

ಸೋಮವಾರಪೇಟೆ:  ನಿಂತಿದ್ದ ಕ್ರೇನ್ ಒಂದಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಸವಾರ ಸಾವಿಗೀಡಾಗಿರುವ ಘಟನೆ ಪಟ್ಟಣದ ಆನೆಕೆರೆ ಸಮೀಪ ಸಂಭವಿಸಿದೆ. ತಾಕೇರಿ ಗ್ರಾಮದ ಕಾಫಿ ಬೆಳೆಗಾರ ಶಿವಕುಮಾರ್ ಮೃತಪಟ್ಟವರು. ಬುಧವಾರ ಮದ್ಯರಾತ್ರಿ ದುರ್ಘಟನೆ ಸಂಭವಿಸಿದೆ. ಮೃತರು ಪತ್ನಿ ಹಾಗು 6 ವರ್ಷದ ಪುತ್ರನನ್ನು ಅಗಲಿದ್ದಾರೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರವೇ ತಾಲೂಕು ಅಧ್ಯಕ್ಷ ಸೇರಿ ಮೂವರ ವಿರುದ್ಧ ಜಾತಿ ನಿಂದನೆ ಕೇಸ್
ಕೊಡಗು

ಕರವೇ ತಾಲೂಕು ಅಧ್ಯಕ್ಷ ಸೇರಿ ಮೂವರ ವಿರುದ್ಧ ಜಾತಿ ನಿಂದನೆ ಕೇಸ್

September 9, 2018

ಸೋಮವಾರಪೇಟೆ: ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯ ಮೇಲಿನ ದೌರ್ಜನ್ಯ ಆರೋಪದ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್.ದೀಪಕ್, ಮಹಿಳಾ ಘಟಕದ ಅಧ್ಯಕ್ಷೆ ರೂಪ ಹಾಗು ಅವರ ಪತಿ ಸುರೇಶ್ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಪ್ರಕರಣ ಪಟ್ಟಣದ ಠಾಣೆಯಲ್ಲಿ ದಾಖಲಾಗಿದೆ. ಮಳೆಹಾನಿ ಸಂತ್ರಸ್ತರಾದ ಮಸಗೋಡು ಗ್ರಾಮದ ಪರಿಶಿಷ್ಟಜಾತಿಗೆ ಸೇರಿದ ದಂಪತಿಗೆ, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ನೀಡಿದ ಹಣವನ್ನು ಕಸಿದುಕೊಂಡು, ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ…

ಅಸ್ಸಾಂ ಮೂಲದ ಯುವತಿ ಆತ್ಮಹತ್ಯೆ
ಕೊಡಗು

ಅಸ್ಸಾಂ ಮೂಲದ ಯುವತಿ ಆತ್ಮಹತ್ಯೆ

August 31, 2018

ಸೋಮವಾರಪೇಟೆ:  ಅಸ್ಸಾಂ ಮೂಲದ ಯುವತಿಯೋರ್ವಳು ನೇಣಿಗೆ ಶರಣಾಗಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಅಸ್ಸಾಂ ಮೂಲಕ ಕಾರ್ಮಿಕ ಷಾಆಲಿ ಅವರ ಮಗಳು ರುಕಿಯಾ ಬೇಗಂ(20) ಆತ್ಮಹತ್ಯೆ ಮಾಡಿ ಕೊಂಡವಳು. ಕಿರಗಂದೂರು ಗ್ರಾಮದ ಕಾಫಿ ಬೆಳೆಗಾರ ಶಿವಕುಮಾರ್ ಅವರ ಲೈನ್‍ಮನೆ ಯಲ್ಲಿ ವಾಸವಿದ್ದ ಕಾರ್ಮಿಕ ಕುಟುಂಬದ ಸದ ಸ್ಯರು ಎಂದಿನಂತೆ ಬುಧವಾರ ಕೆಲಸಕ್ಕೆ ಹೋಗಿ ದ್ದರು. ಆದರೆ ರುಕಿಯಾ ಹೋಗಿರಲಿಲ್ಲ ಎನ್ನ ಲಾಗಿದ್ದು, ಸಂಜೆ ಪೋಷಕರು ಮನೆಗೆ ಬಂದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಸೋಮವಾರ…

ಸೋಮವಾರಪೇಟೆ; ಮತ್ತೆ ಭೂ ಕುಸಿತ ಭೀತಿ
ಕೊಡಗು

ಸೋಮವಾರಪೇಟೆ; ಮತ್ತೆ ಭೂ ಕುಸಿತ ಭೀತಿ

August 28, 2018

ಸೋಮವಾರಪೇಟೆ: ಈಗಾಗಲೇ ಮಕ್ಕಂದೂರು, ಮೂವತೊಕ್ಲು, ಮೇಘತಾಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂ ಕುಸಿತ ಸಂಭವಿಸಿ ಸಾಕಷ್ಟು ಹಾನಿಯಾದ ಬೆನ್ನಲ್ಲೇ, ಇದೀಗ ಶಾಂತಳ್ಳಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ಭೂ ಕುಸಿತ ಉಂಟಾಗುತ್ತಿರುವ ಕುರಿತು ಗ್ರಾಮಸ್ಥರು ತಿಳಿಸಿದ್ದಾರೆ. ತಾಲೂಕಿನ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ, ಬಾಚಳ್ಳಿ ಮತ್ತು ಮಲ್ಲಳ್ಳಿ ಸಮೀಪ ಕೆಲವೆಡೆ ಭೂ ಕುಸಿತ ಉಂಟಾಗುತ್ತಿದ್ದು, ಹಲವು ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ….

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಕೊಡಗು

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

August 27, 2018

ಸೋಮವಾರಪೇಟೆ:  ಜೀವನ ದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ಸಂಜೆ ಸಮೀಪದ ಯಡವಾರೆ ಗ್ರಾಮದಲ್ಲಿ ಸಂಭವಿಸಿದೆ. ಯಡವಾರೆ ಗ್ರಾಮ ಸಜ್ಜಳ್ಳಿ ನಿವಾಸಿ ನಾಗವೇಣಿ ಎಂಬವರ ಪತಿ ಕಲ್ಲಗದ್ದೆ ಕೆ. ಬಾಲಕೃಷ್ಣ (70) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕುತ್ತಿಗೆ ಭಾಗಕ್ಕೆ ಕೋವಿ ಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ನಡೆಯಿತು. ಮೃತರು ಪತ್ನಿ ಸೇರಿದಂತೆ ಈರ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು…

1 2 3 4 5 8
Translate »