ಮಾದಾಪುರ-ಮಡಿಕೇರಿ ರಸ್ತೆ ಕಾಮಗಾರಿ ಪ್ರಗತಿ
ಕೊಡಗು

ಮಾದಾಪುರ-ಮಡಿಕೇರಿ ರಸ್ತೆ ಕಾಮಗಾರಿ ಪ್ರಗತಿ

September 24, 2018

ಸೋಮವಾರಪೇಟೆ: ಮಾದಾಪುರ-ಮಡಿಕೇರಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುವು ಮಾಡಿಕೊಟ್ಟಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.

ಹಟ್ಟಿಹೊಳೆಯಿಂದ ಮುಂದೆ ಕಾಂಡನಕೊಲ್ಲಿ ತಿರುವಿನಲ್ಲಿ ಬರೆ ಕುಸಿತಕ್ಕೆ ಒಳಗಾದ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿತ್ತು. ಇಲ್ಲಿ ರಸ್ತೆಯ ಪುನರ್ ನಿರ್ಮಾಣ ಕಾರ್ಯ ಸಾಗುತ್ತಿದ್ದು, ಕುಸಿದಿರುವ ರಸ್ತೆಗೆ ತಡೆಗೋಡೆಯ ಕಾಮಗಾರಿ ನಡೆಯುತ್ತಿದೆ. ಶಾಸಕ ಅಪ್ಪಚ್ಚು ರಂಜನ್ ಕಾಮಗಾರಿ ನಡೆಯುತ್ತಿರುವ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತಾ, ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಪ್ರವಾಹ ಹಾಗೂ ಬರೆ ಕುಸಿತದಿಂದ ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿ ಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಬಹುತೇಕ ಗ್ರಾಮಗಳ ರಸ್ತೆಗಳಲ್ಲಿ ತುಂಬಿದ್ದ ಬರೆ ಕುಸಿತದ ಮಣ್ಣನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಹಾಗೆಯೇ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಪರ್ಕದ ಪೈಪುಗಳು ಕೂಡ ಕೊಚ್ಚಿಹೋಗಿದ್ದು, ಅಂತಹ ಗ್ರಾಮಗಳಲ್ಲಿ ನೀರಿನ ಸಂಪರ್ಕ ಸರಿಪಡಿಸಲು ಪೈಪ್‍ಗಳನ್ನು ಖರೀದಿಸಿ ನೀಡಲಾಗಿದೆ ಎಂದರು.

Translate »