ವಿರಾಜಪೇಟೆಯಲ್ಲಿ ಗಣಪತಿ ವಿಸರ್ಜನೋತ್ಸವ ಸಂಭ್ರಮ
ಕೊಡಗು

ವಿರಾಜಪೇಟೆಯಲ್ಲಿ ಗಣಪತಿ ವಿಸರ್ಜನೋತ್ಸವ ಸಂಭ್ರಮ

September 24, 2018

ವಿರಾಜಪೇಟೆ:  ಇಲ್ಲಿನ ಇತಿ ಹಾಸ ಪ್ರಸಿದ್ಧ ಗೌರಿ-ಗಣೇಶ ವಿಸರ್ಜ ನೋತ್ಸವವು ಸೆ.21 ವಿದ್ಯುತ್ ಅಲಂಕೃತ ಮಂಟಪಗಳ ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಮೆರ ವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾ ಣದ ಬಳಿಯಿರುವ ಪವಿತ್ರವಾದ ಗೌರಿ ಕೆರೆಯಲ್ಲಿ ವಿಸರ್ಜನೆ ನಡೆಯಿತು.

ಗೌರಿ-ಗಣೇಶ ವಿಸರ್ಜನೋತ್ಸವಕ್ಕಾಗಿ 21 ಉತ್ಸವ ಸಮಿತಿಗಳು ವಿರಾಜಪೇಟೆಯ ವಿವಿಧ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇ ಶನ ಮೆರವಣಿಗೆ ಸಾಗಿತು. ಯಾವುದೇ ಅದ್ದೂರಿಯ ಕಾರ್ಯಕ್ರಮಗಳಿರಲಿಲ್ಲ. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಅನೇಕರು ಮನೆ ಆಸ್ತಿ ಕಳೆದುಕೊಂಡು ಸಂತ್ರಸ್ತರಾಗಿರುವುದರಿಂದ ಸಮಿತಿಗಳು ಸರಳ ರೀತಿಯಾಗಿ ಗಣೇಶೋತ್ಸವವನ್ನು ಅಚರಿಸಲು ತೀರ್ಮಾನಿಸಿದ್ದರು.

ಪಟ್ಟಣದ ಗಡಿಯಾರ ಕಂಬದ ಬಳಿ ಯಿರುವ ಗಣಪತಿ ದೇವಾಲಯದ ಶ್ರೀ ಮಹಾ ಗಣಪತಿ ಉತ್ಸವ ಮೂರ್ತಿಯು ವಿದ್ಯುತ್ ಹಾಗೂ ಹೂವಿನ ಮಂಟಪದಲ್ಲಿ ವಿಶೇಷ ವಾದ್ಯಗೋಷ್ಠಿಯೊಂದಿಗೆ ಪ್ರಥಮ ವಾಗಿ ಮೆರವಣಿಗೆ ಹೊರಟು ಶ್ರೀ ಬಸ ವೇಶ್ವರ ದೇವಾಲಯ ತಲುಪಿದಾಗ ಬಸ ವೇಶ್ವರ ದೇವಾಲಯದ ಗೌರಿ-ಗಣೇಶ ಮಂಟಪ ಹೊರಟಾಗ ಇತರ ವಿದ್ಯುತ್ ಅಲಂಕೃತ ಮಂಟಪಗಳು ಸರತಿ ಸಾಲಿ ನಲ್ಲಿ ಶ್ರೀ ಮಹಾ ಗಣಪತಿ ದೇವಾಲಯದ ಮಂಟಪವನ್ನು ಹಿಂಬಾಲಿಸಿದವು. ಸರದಿ ಪ್ರಕಾರ 21 ಮಂಟಪಗಳು ಮೆರವಣಿ ಗೆಯಲ್ಲಿ ಭಾಗವಹಿಸಿದ್ದವು.

ಮೆರವಣಿಗೆಯು ಪಟ್ಟಣದ ಸಿದ್ದಾಪುರ ರಸ್ತೆಯ ತಿರುವಿನಿಂದ ಹಿಂತಿರುಗಿ ಮುಖ್ಯ ರಸ್ತೆಯಾದ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಮಾರ್ಗವಾಗಿ ಗಡಿ ಯಾರ ಕಂಬದ ಬಳಿಯಿಂದ ಮತ್ತೆ ಸಾಗಿ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಪವಿತ್ರ ಗೌರಿ ಕೆರೆಯನ್ನು ತಲುಪಿದವು. ಗಣೇಶೋತ್ಸವದ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಸರ್ಜನೋತ್ಸವದಲ್ಲಿ ಶ್ರೀ ಮಹಾ ಗಣ ಪತಿ ದೇವಾಲಯದ ಉತ್ಸವ ಮೂರ್ತಿ, ಬಸವೇಶ್ವರ ದೇವಾಲಯದ ಗೌರಿ-ಗಣೇಶ ಉತ್ಸವ ಸಮಿತಿ, ಅರಸುನಗರದ ಶ್ರೀ ವಿಘ್ನೇ ಶ್ವರ ಸೇವಾ ಸಮಿತಿ, ಅಂಗಳ ಪರಮೇಶ್ವರಿ ವಿನಾಯಕ ಯುವಕ ಭಕ್ತ ಮಂಡಳಿ, ದಖ್ಖನಿ ಮೊಹಲ್ಲಾದ ವಿಜಯ ವಿನಾ ಯಕ ಸೇವಾ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ನೆಹರು ನಗರದ ನೇತಾಜಿ ಯುವಕ ಸಂಘ ಗಣೇಶೋತ್ಸವ ಸಮಿತಿ, ಗಣಪತಿ ಬೀದಿಯ ಮಹಾ ಗಣಪತಿ ಸೇವಾ ಸಮಿತಿ, ಪಂಜಾರುಪೇಟೆಯ ಮಹಾ ಗಣಪತಿ ಸೇವಾ ಸಮಿತಿ, ಚಿಕ್ಕಪೇಟೆಯ ಜಲದರ್ಶಿನಿ ವಿನಾ ಯಕ ಸೇವಾ ಸಮಿತಿ, ಗಾಂಧಿ ನಗರದ ಗಣಪತಿ ಸೇವಾ ಸಮಿತಿ, ಸುಂಕದ ಕಟ್ಟೆಯ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ಯುವಕ ಸಂಘ, ಕೆ.ಬೋಯಿಕೇರಿಯ ವಿಘ್ನೇಶ್ವರ ಸೇವಾ ಸಮಿತಿ, ಅಬ್ದುಲ್ ಕಲಾಂ ರಸ್ತೆಯ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಕುಕ್ಲೂರುವಿನ ವಿಘ್ನೇ ಶ್ವರ ಸೇವಾ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಸೇವಾ ಸಮಿತಿ, ಗೌರಿ ಕರೆ ಗಣಪತಿ ಸೇವಾ ಸಮಿತಿ, ಅಯ್ಯಪ್ಪ ಬೆಟ್ಟದ ವರದ ವಿನಾಯಕ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಂ ಜಾನೆಯ ವಿನಾಯಕ ಉತ್ಸವ ಸಮಿತಿ, ಪಟ್ಟಣ ಪಂಚಾಯಿತಿ ಪೌರ ಸೇವಾ ನೌಕರರ ಸಂಘ ಗಣಪತಿ ಸೇವಾ ಸಮಿ ತಿಯ ವಿದ್ಯುತ್ ಅಲಂಕೃತ ಮಂಟಪಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವು. ಗಣೇಶೋತ್ಸವದ ಸಂದರ್ಭ ಅನೇಕ ಸಮಿ ತಿಗಳು ಅನ್ನಸಂತರ್ಪಣೆ ಕಾರ್ಯಕ್ರಮ ವನ್ನು ಏರ್ಪಡಿಸಿದ್ದವು.

ಗೌರಿ-ಗಣೇಶೋತ್ಸವದ ಪ್ರಯುಕ್ತ ಪಟ್ಟಣ ಪಂಚಾಯಿತಿಯಿಂದ ಪವಿತ್ರ ಗೌರಿ ಕೆರೆಯನ್ನು ಸ್ವಚ್ಚಗೊಳಿಸಿ ಅಲಂಕಾರ ಗೊಳಿಸಲಾಗಿತ್ತು. ಗಣೇಶನ ವಿಸರ್ಜನೆಗೆ ಗೌರಿಕರೆಯಲ್ಲಿ ಈಜುಗಾರರನ್ನು ಹಾಗೂ ತೆಪ್ಪದ ವ್ಯವಸ್ಥೆ ಮಾಡಲಾಗಿತ್ತು. ಛತ್ರಕೆರೆ ಸುತ್ತಲು ವಿದ್ಯುತ್ ದೀಪಲಂಕಾರ ಮಾಡಿ ದ್ದರು. ಗೌರಿ-ಗಣೇಶ ವಿಸರ್ಜನೋತ್ಸವ ದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

Translate »