ಸೋಮವಾರಪೇಟೆಯಲ್ಲಿ ಗಣಪತಿ ವಿಸರ್ಜನೆ
ಕೊಡಗು

ಸೋಮವಾರಪೇಟೆಯಲ್ಲಿ ಗಣಪತಿ ವಿಸರ್ಜನೆ

September 24, 2018

ಸೋಮವಾರಪೇಟೆ:  ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಬ್ರಾಹ್ಮಣರ ಸಮಾಜದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ಸ್ಥಳೀಯ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು.

ಬೆಳಗ್ಗಿನಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ನಂತರ ಸಂಜೆ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಮೂರ್ತಿಗಳನ್ನು ಇಟ್ಟು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾದ್ಯಗೋಷ್ಟಿಗ ಳೊಂದಿಗೆ ಮೆರವಣಿಗೆಯ ನಂತರ ಅನೆಕೆರೆಯಲ್ಲಿ ವಿಸರ್ಜಿಸಲಾಯಿತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ವಿಜೇತ್, ಮಾತಾ ಬಳಗದ ಅಧ್ಯಕ್ಷೆ ಪಂಕಜಾ ಶ್ಯಾಮ್‍ಸುಂದರ್, ದೇವಿ ಬಳಗದ ಅಧ್ಯಕ್ಷೆ ವಸಂತಾ ರಮೇಶ್, ಎನ್.ಎಸ್. ಶ್ಯಾಮ್‍ಸುಂದರ್, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »