ಸೋಮವಾರಪೇಟೆ: ನ.10ರಂದು ನಡೆಯುವ ಟಿಪ್ಪು ಸುಲ್ತಾನ್ ಜಯಂತಿ ಯನ್ನು ವಿರೋಧಿಸಿ, ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಹಾಗು ಶಾಸಕ ಅಪ್ಪಚ್ಚು ರಂಜನ್ ಮುಂದಾಳತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಹಾದಿಯುದ್ದಕ್ಕೂ ಸಮ್ಮಿಶ್ರ ಸರ್ಕಾರ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ…
ಕಳಪೆ ಕಾಮಗಾರಿ ವಿರುದ್ಧ ಹೋರಾಟದ ಎಚ್ಚರಿಕೆ
November 6, 2018ಸೋಮವಾರಪೇಟೆ: ತಾಲೂಕಿನ 40 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2017-18ರ ಸಾಲಿನ ಕೊಡಗು ಪ್ಯಾಕೇಜ್ ಕಾಮಗಾರಿಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಲೋಕೋ ಪಯೋಗಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆರ್‍ಟಿಐ ಕಾರ್ಯಕರ್ತ ಬಿ.ಪಿ.ಅನಿಲ್ ಕುಮಾರ್ ಎಚ್ಚರಿಸಿದ್ದಾರೆ. ಕೊಡಗು ಪ್ಯಾಕೇಜ್ ಕಾಮಗಾರಿ ಗಳಲ್ಲಿ ಕಳಪೆ ಹಾಗು ಅಕ್ರಮ ನಡೆದಿದೆ ಎಂಬ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವರ ಸೂಚನೆ ಯಂತೆ ಇಲಾಖೆಯ ಅಧೀಕ್ಷಕ ಇಂಜಿನಿ ಯರ್‍ಗಳ ತಂಡ, ತಾಲ್ಲೂಕಿನಲ್ಲಿ ಕೈಗೊಂಡಿ ರುವ ಕಾಮಗಾರಿಗಳ ಪರಿಶೀಲನೆ…
ಸೋಮವಾರಪೇಟೆ: ಕಾಂಗ್ರೆಸ್ 4, ಜೆಡಿಎಸ್-ಬಿಜೆಪಿಗೆ ತಲಾ 3 ಸ್ಥಾನ
November 1, 2018ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ 22 ವರ್ಷಗಳ ಬಿಜೆಪಿ ಆಡಳಿತಕ್ಕೆ ತೆರೆ ಎಳೆದಿದೆ. ಒಟ್ಟು 11 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 4, ಜೆಡಿಎಸ್ 3, ಬಿಜೆಪಿ 3 ಹಾಗೂ ಪಕ್ಷೇ ತರ ಅಭ್ಯರ್ಥಿ 1 ಸ್ಥಾನ ಗಳಿಸಿದ್ದಾರೆ. ವಾರ್ಡ್ 1ರಲ್ಲಿ ಕಾಂಗ್ರೆಸ್‍ನ ಡಿ.ವಿ.ಉದಯ ಶಂಕರ್, 2ನೇ ವಾರ್ಡ್‍ನಲ್ಲಿ ಬಿಜೆಪಿಯ ಪಿ.ಕೆ.ಚಂದ್ರು, 3ನೇ ವಾರ್ಡ್‍ನಲ್ಲಿ ಬಿಜೆಪಿಯ ನಳಿನಿ ಗಣೇಶ್, 4ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಬಿ.ಸಂಜೀವ,…
ಅಕ್ರಮವಾಗಿ ಶ್ರೀಗಂಧ ಶೇಖರಣೆ: ಮೂವರ ಬಂಧನ
October 28, 2018ಸೋಮವಾರಪೇಟೆ: ಅಕ್ರಮವಾಗಿ ಶ್ರೀಗಂಧವನ್ನು ಶೇಖರಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ್ದಾರೆ. ಬಜೆಗುಂಡಿ ಗ್ರಾಮದ ನಿವಾಸಿ ಸುದೀಪ್(ಸುಧೀರ್), ಪಿ.ಕೆ. ಸುರೇಶ್ (ಸೂರಿ), ಯಡವ ನಾಡು ಗ್ರಾಮದ ಎನ್.ಡಿ. ಹೇಮಕುಮಾರ್ ಬಂಧಿತ ಆರೋಪಿಗಳಾಗಿದ್ದು, ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುರೇಶ್ ಅವರ ಮನೆಯ ಸುತ್ತಮುತ್ತ ಶೇಖರಿಸಿ ಟ್ಟಿದ್ದ ಶ್ರೀಗಂಧವನ್ನು ಗರಗಂದೂರು ಗ್ರಾಮದ ಬಾಪುಟ್ಟಿ ಎಂಬವರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ನೇತೃತ್ವದ ತಂಡ ದಾಳಿ ನಡೆಸಿದೆ. ಬಂಧಿತರು ನೀಡಿದ ಹೇಳಿಕೆಯನ್ನಾಧರಿಸಿ…
ದಶಕದಿಂದ ನೆನೆಗುದಿಗೆ ಬಿದ್ದಿರುವ ಸರ್ಕಾರಿ ಶಾಲೆಯ ಶತಮಾನೋತ್ಸವ ಭವನ ಕಾಮಗಾರಿ
October 23, 2018ಸೋಮವಾರಪೇಟೆ: ಕಳೆದ ಹಲವು ವರ್ಷಗಳಿಂದ ಗ್ರಹಣ ಹಿಡಿದಿದ್ದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಭವನಕ್ಕೆ ಕೊನೆಗೂ ಮುಕ್ತಿ ಕಾಣುವ ಲಕ್ಷಣ ಕಾಣುತ್ತಿದೆ. ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 100 ವರ್ಷ ತುಂಬಿದ ಸವಿನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಭವನ ಅನುದಾನದ ಕೊರತೆ ಯಿಂದ ಕಳೆದ 11 ವರ್ಷಗಳಿಂದ ನೆನೆ ಗುದಿಗೆ ಬಿದ್ದಿದ್ದ ಭವನದ ಕಾಮಗಾರಿ ಮುಂದುವರೆಸಲು ಮಾಜಿ ಸಚಿವ ಜೀವಿಜಯ ಮುಂದಾಗಿದ್ದು, ರೂ. 3.60 ಕೋಟಿ ವೆಚ್ಚದ ಯೋಜನೆ ಸಿದ್ದಗೊಂಡಿದೆ. ಶಾಲೆಯ ಪಕ್ಕದಲ್ಲಿ…
ಸೋಮವಾರಪೇಟೆ; 11 ವಾರ್ಡ್‍ಗೆ 29 ನಾಮಪತ್ರ ಸಲ್ಲಿಕೆ
October 17, 2018ಸೋಮವಾರಪೇಟೆ: ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪಪಂ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು 6 ಹಾಗೂ ಜೆಡಿಎಸ್ ಅಭ್ಯರ್ಥಿಗಳು 5 ವಾರ್ಡ್‍ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. 1ನೇ ವಾರ್ಡ್‍ನಿಂದ ಬಿಜೆಪಿಯಿಂದ ಕೆ.ಜಿ. ಸುರೇಶ್, ಕಾಂಗ್ರೆಸ್‍ನಿಂದ ಉದಯ ಶಂಕರ್, ಪಕ್ಷೇತರರಾಗಿ ಬಿ.ಪಿ.ಶಿವಕುಮಾರ್ ಮತ್ತು ಎಸ್.ಮಹೇಶ್, 2ನೇ ವಾರ್ಡ್ ಬಿಜೆಪಿಯಿಂದ ಪಿ.ಕೆ.ಚಂದ್ರು, ಕಾಂಗ್ರೆಸ್ ನಿಂದ ಮಂಜುನಾಥ್, ಪಕ್ಷೇತರರಾಗಿ ರಘು ನಾಥ್ ಅವರುಗಳು ನಾಮಪತ್ರ ಸಲ್ಲಿಸಿದರು. 3ನೇ ವಾರ್ಡ್ ಬಿಜೆಪಿಯಿಂದ…
ಮಲ್ಲಳ್ಳಿ ಜಲಪಾತದಲ್ಲಿ ಕೊಚ್ಚಿ ಹೋದ ಯುವಕ
October 10, 2018ಸೋಮವಾರಪೇಟೆ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಇಂದು ಸಂಜೆ ಸಂಭವಿಸಿದೆ. ನೆರೆಯ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಅರೆಹಳ್ಳಿ ಗ್ರಾಮ ನಿವಾಸಿ ಜಾವಿದ್ ಎಂಬಾತನೇ ಜಲ ಪಾತದಲ್ಲಿ ಕಣ್ಮರೆಯಾಗಿರುವ ಯುವಕ. ಈತನೊಂದಿಗೆ ಜಲಪಾತಕ್ಕೆ ಇಳಿದಿದ್ದ ಸ್ನೇಹಿತ ಫಾಜಿಲ್ ಕಲ್ಲುಬಂಡೆಯ ಆಶ್ರಯ ಪಡೆದು ಪ್ರಾಣ ಉಳಿಸಿಕೊಂಡಿದ್ದಾನೆ. ಜಾವಿದ್, ಫಾಜಿಲ್ ಸೇರಿದಂತೆ ಇತರ ಮೂವರು ಸ್ನೇಹಿತರು ಇಂದು ಸಂಜೆಯ ವೇಳೆಗೆ ಜಲಪಾತ ವೀಕ್ಷಣೆಗೆ ತೆರಳಿದ್ದರು. ಜಲಪಾತದಲ್ಲಿ ನೀರಿನ ಹರಿವು ಕಡಿಮೆ…
ಪೊಲೀಸರು ಜನ ಸ್ನೇಹಿಯಾಗಲು ಸಲಹೆ
October 6, 2018ಸೋಮವಾರಪೇಟೆ: ಪೊಲೀಸರು ಜನಸ್ನೇಹಿ ಯಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಸಾರ್ವಜನಿಕರ ಸಹಕಾರ ಸಿಗುತ್ತದೆ ಎಂದು ಪೊಲೀಸ್ ಉಪ ಅಧೀಕ್ಷಕ ಪೆರುಬಾಯಿ ಕೆ.ಮುರಳೀಧರ್ ಹೇಳಿದರು. ಪಟ್ಟಣದಲ್ಲಿ ಉಪ ಆರಕ್ಷಕ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಚಾಮರಾಜನಗರಕ್ಕೆ ವರ್ಗಾವಣೆಗೊಂಡಿರುವ ಶಿವಣ್ಣ ಅವರಿಗೆ ಐಗೂರಿನ ಸ್ಪ್ರಿಂಗ್ ವ್ಯಾಲಿ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣದ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದ ಶಿವಣ್ಣ ಅವರು 1998ರ ಬ್ಯಾಚ್‍ನ ಅಧಿಕಾರಿಯಾಗಿದ್ದು, ಉತ್ತಮ ಸೇವೆ ಸಲ್ಲಿಸಿದ್ದಾರೆ. ಎಂದೂ ತಮ್ಮ…
ವಿವಿಧೋದ್ದೇಶ ಸಹಕಾರ ಸಂಘಕ್ಕೆ 9 ಲಕ್ಷ ಲಾಭ
October 3, 2018ಸೋಮವಾರಪೇಟೆ: ವಿವಿದೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ಸದಸ್ಯರ ಸಹಕಾರದಿಂದ ರೂ.9 ಲಕ್ಷ ಲಾಭಗಳಿಸಲು ಸಹಕಾರಿಯಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಪಿ.ಶಿವಕುಮಾರ್ ಹೇಳಿದರು. ಇಲ್ಲಿನ ಮಹಿಳಾ ಸಮಾಜದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ ದರು. ಉತ್ತಮ ವ್ಯವಹಾರ ನಡೆಸುವ ಮೂಲಕ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಘ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗುರುತಿಸಿದ್ದು, 2017-18ನೇ ಸಾಲಿನ ಆಡಿಟ್ ವರದಿಯಲ್ಲಿ ‘ಎ’ ದರ್ಜೆಯನ್ನು ಪಡೆದಿದೆ. ಸದಸ್ಯರಿಗೆ ಇನ್ನೂ ಹೆಚ್ಚಿನ ಸವಲತ್ತು ನೀಡುವ…
ಲಾರಿ-ಪಿಕಪ್ ವಾಹನ ಡಿಕ್ಕಿ
October 2, 2018ಸೋಮವಾರಪೇಟೆ: ಮರ ತುಂಬಿದ ಲಾರಿ ಮತ್ತು ಪಿಕಪ್ ವಾಹನದ ನಡುವೆ ಮಧ್ಯರಾತ್ರಿ ಮುಖಾಮುಖಿ ಸಂಭವಿಸಿದ್ದು, ಅದೃಷ್ಟವಶಾತ್ ಪಿಕಪ್ ವಾಹನದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿಯಿಂದ ಹಾಸನದ ಕಡೆಗೆ ಟಿಂಬರ್ ಲಾರಿ ಹೋಗುತ್ತಿದ್ದು, ಶನಿವಾರಸಂತೆಯಿಂದ ದೊಡ್ಡಮಳ್ತೆ ಗ್ರಾಮಕ್ಕೆ ಬರುತ್ತಿದ್ದ ಪಿಕಪ್ ವಾಹನದ ನಡುವೆ ಕಾಗಡಿಕಟ್ಟೆ ಇಳಿಜಾರು ರಸ್ತೆಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪಿಕಪ್ ವಾಹನದ ಮುಂಭಾಗ ಜಖಂಗೊಂಡಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಮಣಿ ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.