ಕಳಪೆ ಕಾಮಗಾರಿ ವಿರುದ್ಧ ಹೋರಾಟದ ಎಚ್ಚರಿಕೆ
ಕೊಡಗು

ಕಳಪೆ ಕಾಮಗಾರಿ ವಿರುದ್ಧ ಹೋರಾಟದ ಎಚ್ಚರಿಕೆ

November 6, 2018

ಸೋಮವಾರಪೇಟೆ: ತಾಲೂಕಿನ 40 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2017-18ರ ಸಾಲಿನ ಕೊಡಗು ಪ್ಯಾಕೇಜ್ ಕಾಮಗಾರಿಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಲೋಕೋ ಪಯೋಗಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆರ್‍ಟಿಐ ಕಾರ್ಯಕರ್ತ ಬಿ.ಪಿ.ಅನಿಲ್ ಕುಮಾರ್ ಎಚ್ಚರಿಸಿದ್ದಾರೆ.
ಕೊಡಗು ಪ್ಯಾಕೇಜ್ ಕಾಮಗಾರಿ ಗಳಲ್ಲಿ ಕಳಪೆ ಹಾಗು ಅಕ್ರಮ ನಡೆದಿದೆ ಎಂಬ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವರ ಸೂಚನೆ ಯಂತೆ ಇಲಾಖೆಯ ಅಧೀಕ್ಷಕ ಇಂಜಿನಿ ಯರ್‍ಗಳ ತಂಡ, ತಾಲ್ಲೂಕಿನಲ್ಲಿ ಕೈಗೊಂಡಿ ರುವ ಕಾಮಗಾರಿಗಳ ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಮೇಲಾಧಿ ಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದರು.

ಬೆಟ್ಟದಳ್ಳಿ, ಗೌಡಳ್ಳಿ, ಬೇಳೂರು, ಕೂಡಿಗೆ, ಕಂಬಿಬಾಣೆ, ಕೂಡುಮಂಗ ಳೂರು, ಶಾಂತಳ್ಳಿ ಗ್ರಾಮ ಪಂಚಾಯಿತಿ ಗಳ ವ್ಯಾಪ್ತಿಯಲ್ಲಿ ಬಹುತೇಕ ಕಾಮಗಾರಿ ಗಳು ಕಳಪೆಯಾಗಿವೆ. ಅಂದಾಜು ಪಟ್ಟಿ ಯಂತೆ ಕೆಲಸ ನಿರ್ವಹಿಸದೆ, ಬಿಲ್ ಪಡೆದು ಕೊಳ್ಳಲಾಗಿದೆ ಎಂದು ಆರೋಪಿಸಿದರು.

ಗುಣಮಟ್ಟ ಕಳಪೆಯಾಗಿರುವ ಬಗ್ಗೆ ಅಧಿಕಾರಿಗಳೇ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಈ ಕಾರಣದಿಂದ ಬಿಲ್ ಪಾವತಿಯನ್ನು ಅಧಿಕಾರಿಗಳು ತಡೆ ಹಿಡಿದಿದ್ದರು. ಆದರೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ, ಗುತ್ತಿಗೆದಾರರಿಗೆ ಕೂಡಲೆ ಬಿಲ್ ಪಾವತಿ ಸುಂತೆ ನಿರ್ಣಯ ಕೈಗೊಳ್ಳಲಾಯಿತು. ಜವಾಬ್ದಾರಿಯುತ ಜನಪ್ರತಿನಿಧಿಗಳು ಕಳಪೆ ಕಾಮಗಾರಿಗೆ ಕಾರಣವಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುವುದನ್ನು ಬಿಟ್ಟು, ಬಿಲ್ ಪಾವತಿಗೆ ಆಗ್ರಹಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ತಾಲ್ಲೂಕಿನಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿದ್ದರೂ, ಇಲ್ಲಿನ ಶಾಸಕರು ಮೌನಕ್ಕೆ ಶರಣಾಗಿರುವ ಹಿಂದಿನ ಮರ್ಮ ವನ್ನು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು. ಕಳಪೆ ಕಾಮಗಾರಿಗೆ ಸರ್ಕಾರದ ಹಣ ಪೋಲಾಗುತ್ತಿರುವು ದನ್ನು ಜನಪ್ರತಿ ನಿಧಿಗಳು ಇನ್ನಾದರೂ ತಡೆಯಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಪ್ರಮುಖ ರಾದ ಕೆ.ಎಸ್. ರಾಮಚಂದ್ರ, ಎಸ್.ಎಂ. ಡಿಸಿಲ್ವಾ, ಎಚ್.ಎಂ.ಪ್ರಕಾಶ್, ಬಿ.ಎಂ. ಮಹೇಶ್, ತ್ರಿಶೂಲ್, ಬಗ್ಗನ ಹರೀಶ್ ಇದ್ದರು.

Translate »