ಸೋಮವಾರಪೇಟೆ: ಮರ ತುಂಬಿದ ಲಾರಿ ಮತ್ತು ಪಿಕಪ್ ವಾಹನದ ನಡುವೆ ಮಧ್ಯರಾತ್ರಿ ಮುಖಾಮುಖಿ ಸಂಭವಿಸಿದ್ದು, ಅದೃಷ್ಟವಶಾತ್ ಪಿಕಪ್ ವಾಹನದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಡಿಕೇರಿಯಿಂದ ಹಾಸನದ ಕಡೆಗೆ ಟಿಂಬರ್ ಲಾರಿ ಹೋಗುತ್ತಿದ್ದು, ಶನಿವಾರಸಂತೆಯಿಂದ ದೊಡ್ಡಮಳ್ತೆ ಗ್ರಾಮಕ್ಕೆ ಬರುತ್ತಿದ್ದ ಪಿಕಪ್ ವಾಹನದ ನಡುವೆ ಕಾಗಡಿಕಟ್ಟೆ ಇಳಿಜಾರು ರಸ್ತೆಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪಿಕಪ್ ವಾಹನದ ಮುಂಭಾಗ ಜಖಂಗೊಂಡಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಮಣಿ ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.