ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ 22 ವರ್ಷಗಳ ಬಿಜೆಪಿ ಆಡಳಿತಕ್ಕೆ ತೆರೆ ಎಳೆದಿದೆ.
ಒಟ್ಟು 11 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 4, ಜೆಡಿಎಸ್ 3, ಬಿಜೆಪಿ 3 ಹಾಗೂ ಪಕ್ಷೇ ತರ ಅಭ್ಯರ್ಥಿ 1 ಸ್ಥಾನ ಗಳಿಸಿದ್ದಾರೆ. ವಾರ್ಡ್ 1ರಲ್ಲಿ ಕಾಂಗ್ರೆಸ್‍ನ ಡಿ.ವಿ.ಉದಯ ಶಂಕರ್, 2ನೇ ವಾರ್ಡ್‍ನಲ್ಲಿ ಬಿಜೆಪಿಯ ಪಿ.ಕೆ.ಚಂದ್ರು, 3ನೇ ವಾರ್ಡ್‍ನಲ್ಲಿ ಬಿಜೆಪಿಯ ನಳಿನಿ ಗಣೇಶ್, 4ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಬಿ.ಸಂಜೀವ, 5ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಬಿ.ಸಿ.ವೆಂಕ ಟೇಶ್, 6ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಶೀಲಾ ಡಿಸೋಜಾ, 7ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಜೀವನ್, 8ನೇ ವಾರ್ಡ್‍ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಬಿ.ಆರ್.ಶುಭಾಕರ್, 9ನೇ ವಾರ್ಡ್ ನಲ್ಲಿ ಜೆಡಿಎಸ್‍ನ ನಾಗರತ್ನ, 10ನೇ ವಾರ್ಡ್ ನಲ್ಲಿ ಜೆಡಿಎಸ್‍ನ ಜಯಂತಿ ಶಿವಕುಮಾರ್ ಹಾಗೂ 11ನೇ ವಾರ್ಡ್‍ನಲ್ಲಿ ಬಿಜೆಪಿಯ ಬಿ.ಆರ್.ಮಹೇಶ್ ಜಯಗಳಿಸಿದ್ದಾರೆ.
ಮಾಜಿ ಅಧ್ಯಕ್ಷರುಗಳಾದ ಎನ್.ಎಸ್. ಮೂರ್ತಿ, ಬಿ.ಎಸ್.ವಿಜಯಲಕ್ಷ್ಮಿ ಪರಾಭವಗೊಂಡಿದ್ದಾರೆ. ಈ ಹಿಂದೆ ಸದಸ್ಯರಾಗಿದ್ದ ಕಾಂಗ್ರೆಸ್‍ನ ಕೆ.ಎ.ಆದಮ್, ಬಿಜೆಪಿಯ ದ್ರಾಕ್ಷಾಯಿಣಿಶಿವಾನಂದ್, ಬಿ.ಎಂ.ಸುರೇಶ್ ಸೋಲನ್ನು ಕಂಡಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾ ಗಿದ್ದ ಬಿ.ಆರ್.ಶುಭಾಕರ್ ಬಂಡಾಯವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರೆ, ಜೀವನ್ ಕುಮಾರ್ ಹಾಗೂ ಜಯಂತಿ ಶಿವಕುಮಾರ್ ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆದು ಜಯ ಶಾಲಿಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಜಯಗಳಿಸಿದ ಜೀವನ್‍ಕುಮಾರ್ ಅತ್ಯಂತ ಕಿರಿಯ (25) ಸದಸ್ಯರಾಗಿದ್ದರೆ, ಕಾಂಗ್ರೆಸ್‍ನ ಬಿ.ಸಂಜೀವ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ. ಕಾಂಗ್ರೆಸ್‍ನ ಬಿ.ಸಿ.ವೆಂಕೆಟೇಶ್ 2ನೇ ಬಾರಿಗೆ ಆಯ್ಕೆಯಾ ಗಿದ್ದು, ಈ ಹಿಂದೆ ನಾಮಕರಣ ಸದಸ್ಯರಾ ಗಿದ್ದ ಡಿ.ವಿ.ಉದಯಶಂಕರ್ 1ನೇ ವಾರ್ಡ್ ನಲ್ಲಿ ಆಯ್ಕೆಯಾಗುವ ಮೂಲಕ 1990ರ ನಂತರ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿ ಗೆಲುವಿನ ನಗೆ ಬೀರಿದ್ದಾರೆ. 2017ರ ಚುನಾ ವಣೆಯಲ್ಲಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದ ಜಯಂತಿ ಶಿವಕುಮಾರ್ ಈ ಬಾರಿ ಜೆಡಿಎಸ್ ನಿಂದ ಗೆಲುವು ಸಾಧಿಸಿದ್ದಾರೆ. ನಾಲ್ಕು ಬಾರಿ ಗೆದ್ದು, ಒಮ್ಮೆ ಸೋಲನುಭವಿಸಿದ್ದ ಬಿಜೆಪಿಯ ಹಿರಿಯ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಳಿನಿ ಗಣೇಶ್ ಮೂರನೇ ವಾರ್ಡ್‍ನಲ್ಲಿ ಜಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.