ವಿರಾಜಪೇಟೆ ಪಪಂನಲ್ಲಿ ಅತಂತ್ರ ಫಲಿತಾಂಶ: ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1, ಮೂರು ಪಕ್ಷೇತರರ ಗೆಲುವು
ಕೊಡಗು

ವಿರಾಜಪೇಟೆ ಪಪಂನಲ್ಲಿ ಅತಂತ್ರ ಫಲಿತಾಂಶ: ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1, ಮೂರು ಪಕ್ಷೇತರರ ಗೆಲುವು

November 1, 2018

ವಿರಾಜಪೇಟೆ:  ವಿರಾಜಪೇಟೆ ಪಟ್ಟಣ ಪಂಚಾಯಿತಿಯ 18 ವಾರ್ಡ್ ಗಳಿಗೆ ಅ.28 ರಂದು ನಡೆದ ಚುನಾವಣೆಯ ಮತ ಎಣಿಕೆಯು ಇಂದು ಪಟ್ಟಣದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದು ಭಾರತೀಯ ಜನತಾ ಪಾರ್ಟಿ 8, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಪಕ್ಷೇತರ ಮೂವರು ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ.

ವಾರ್ಡ್ 1ರಲ್ಲಿ ಕಾಂಗ್ರೆಸ್ ಪಕ್ಷದ ಜೆ.ಫಸಿಹ ತಬಸುಂ 157 ಮತ ಪಡೆದು ಜಯಗಳಿಸಿದರೆ, ಬಿಜೆಪಿಯ ತಸ್ನಿಂ ಅಕ್ತರ್ 154 ಮತ ಪಡೆದರು. ವಾರ್ಡ್ 2ರಲ್ಲಿ ಬಿಜೆಪಿಯ ಪಿ.ವಿಷ್ಣು 147 ಮತ ಪಡೆದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಿ.ಎ.ರಂಜಿ ಪೂಣಚ್ಚ 428 ಮತ ಗಳಿಸಿ ಜಯ ಸಾಧಿ ಸಿದ್ದಾರೆ. ವಾರ್ಡ್ 3ರಲ್ಲಿ ಬಿಜೆಪಿಯ ಸಚಿನ್ ಕುಟ್ಟಯ್ಯ 367 ಮತ ಪಡೆದು ಸೋತರೆ, ಕಾಂಗ್ರೆಸ್ ಅಭ್ಯರ್ಥಿ ಡಿ.ಪಿ. ರಾಜೇಶ್ 478 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ವಾರ್ಡ್ 4ರಲ್ಲಿ ಕಾಂಗ್ರೆ ಸ್‍ನ ಹೆಚ್.ಬಿ.ಅನಿತಾ 301 ಮತ ಪಡೆದರೆ, ಬಿಜೆಪಿಯ ಟಿ.ಆರ್.ಸುಶ್ಮಿತಾ 328 ಮತ ಪಡೆದು ಜಯ ಗಳಿಸಿದ್ದಾರೆ. ವಾರ್ಡ್ 5ರಲ್ಲಿ ಕಾಂಗ್ರೆಸ್‍ನ ಡಿ.ಐ. ಏಜಾಸ್ 194 ಮತ ಪಡೆದರೆ, ಜೆಡಿಎಸ್‍ನ ಎಸ್.ಹೆಚ್. ಮತೀನ್ 203 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ವಾರ್ಡ್ 6ರಲ್ಲಿ ಜೆಡಿಎಸ್‍ನ ಹೆಚ್.ಕೆ.ಆರ್ಮುಗಂ 128 ಮತ ಪಡೆದು ಸೋತರೆ, ಪಕ್ಷೇತರ ಅಭ್ಯರ್ಥಿ ವಿ.ಆರ್.ರಜನಿಕಾಂತ್ 212 ಮತ ಪಡೆದು ಜಯಶೀಲರಾಗಿದ್ದಾರೆ. ಹೆಚ್ಚು ಅಭ್ಯರ್ಥಿ ಗಳು ಸ್ಪರ್ಧಿಸಿರುವ 7ನೇ ವಾರ್ಡ್‍ನಲ್ಲಿ ಡೆಮೋಕ್ರಟಿಕ್ ಪಾರ್ಟಿಯ ರೆಹನಾ ಷಾ 195 ಮತಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ 282 ಮತಗಳನ್ನು ಪಡೆದು ಜಯ ಗಳಿಸಿ ದ್ದಾರೆ. 8ನೇ ವಾರ್ಡ್‍ನಲ್ಲಿ ಪಕ್ಷೇತರ ಜೂಡಿ ಡೇವಿಡ್ ವಾಜ್ 69 ಮತ ಪಡೆದರೆ, ಕಾಂಗ್ರೆಸ್ ಪಕ್ಷದ ಸಿ.ಜಿ.ಅಗಸ್ಟಿನ್ 362 ಮತ ಪಡೆದು ಗೆಲುವು ಸಾಧಿಸಿದ್ದಾರೆ. ವಾರ್ಡ್ 9 ರಲ್ಲಿ ಬಿಜೆಪಿಯ ಬಿ.ಎಸ್.ಪ್ರದೀಪ್ 85 ಮತ ಗಳನ್ನು ಪಡೆದುಕೊಂಡರೆ, ಕಾಂಗ್ರೆಸ್‍ನ ಕೆ.ಹೆಚ್.ರಫಿ 313 ಮತಗಳಿಸಿ ಗೆಲುವು ಸಾಧಿಸಿದ್ದಾರೆ.

ವಾರ್ಡ್ 10ರಲ್ಲಿ ಕಾಂಗ್ರೆಸ್‍ನ ಪಿ.ಸಿಂಧು 301 ಮತ ಪಡೆದರೆ, ಬಿಜೆಪಿಯ ಅನಿತಾ 310 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. 11ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಕೆ.ಬಿ.ಪ್ರತಾಪ್ 262 ಮತ ಪಡೆದರೆ, ಬಿಜೆ ಪಿಯ ಹೆಚ್.ಪಿ.ಮಹದೇವ್ 330 ಮತ ಪಡೆದು ಜಯಶೀಲರಾಗಿದ್ದಾರೆ. ವಾರ್ಡ್ 12ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಎಸ್.ಹೆಚ್.ಮೊಯಿನುದ್ದೀನ್ 294 ಮತ ಪಡೆದರೆ, ಪಕ್ಷೇತರ ಅಭ್ಯರ್ಥಿ ಅಬ್ದುಲ್ ಜಲೀಲ್ 346 ಮತ ಪಡೆದು ಜಯ ಗಳಿಸಿದ್ದಾರೆ. ವಾರ್ಡ್ 13ರಲ್ಲಿ ಕಾಂಗ್ರೆಸ್‍ನ ಸಿ.ಎಂ.ದಿನೇಶ್ 172 ಮತ ಪಡೆದರೆ, ಬಿಜೆ ಪಿಯ ಕೆ.ಬಿ.ಹರ್ಷವರ್ಧನ್ 268 ಮತ ಪಡೆದು ಜಯ ಗಳಿಸಿದ್ದಾರೆ. ವಾರ್ಡ್ 14ರಲ್ಲಿ ಬಿಜೆಪಿಯ ಇ.ಸಿ.ಜೀವನ್ 105 ಮತ ಪಡೆ ದರೆ, ಕಾಂಗ್ರೆಸ್‍ನ ಸಿ.ಕೆ.ಪೃಥ್ವಿನಾಥ್ 301 ಮತ ಪಡೆದು ಜಯ ಸಾಧಿಸಿದ್ದಾರೆ. ವಾರ್ಡ್ 15ರಲ್ಲಿ ಜೆಡಿಎಸ್‍ನ ಪಿ.ಎ.ಮಂಜುನಾಥ್ 389 ಮತ ಪಡೆದರೆ, ಬಿಜೆಪಿಯ ಟಿ.ಎಂ. ಸುನೀತ 393 ಮತ ಪಡೆದು ಜಯ ಗಳಿಸಿ ದ್ದಾರೆ.

ವಾರ್ಡ್ 16ರಲ್ಲಿ ಕಾಂಗ್ರೆಸ್‍ನ ಅನಿತಾ ತೆರೇಸ 125 ಮತ ಪಡೆದರೆ, ಬಿಜೆಪಿಯ ಆಶಾ ಸುಬ್ಬಯ್ಯ 189 ಮತ ಪಡೆದು ಜಯ ಸಾಧಿಸಿದ್ದಾರೆ. ವಾರ್ಡ್ 17ರಲ್ಲಿ ಕಾಂಗ್ರೆಸ್‍ನ ಗಾಯತ್ರಿ ನರಸಿಂಹ 77 ಮತ ಪಡೆದರೆ, ಬಿಜೆಪಿಯ ಹೆಚ್.ಎಂ.ಪೂರ್ಣಿಮ 332 ಮತ ಪಡೆದು ಜಯ ಗಳಿಸಿದ್ದಾರೆ. 18ನೇ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ಕೆ.ಟಿ.ನವೀನ 40 ಮತ ಪಡೆದರೆ, ಬಿಜೆಪಿಯ ಟಿ.ಕೆ. ಯಶೋದ 306 ಮತ ಗಳಿಸಿ ಜಯ ಸಾಧಿಸಿ ದ್ದಾರೆ. ಕಾಂಗ್ರೆಸ್ ಸರಕಾರದ ಹಿಂದಿನ ಆಡಳಿತದ ಅವಧಿಯಲ್ಲಿ ನಾಮನಿರ್ದೇಶಕ ಸದಸ್ಯರಾಗಿದ್ದ ಮೂರು ಮಂದಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಉಪ ವಿಭಾಗಾಧಿಕಾರಿ ಜವರೆಗೌಡ, ಚುನಾ ವಣಾಧಿಕಾರಿ ಅರ್.ಗೋವಿಂದರಾಜು, ಚಾಲ್ರ್ಸ್ ಡಿಸೋಜ, ಎಂ.ಇ.ಸುರೇಶ್, ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಚುನಾವಣಾಧಿಕಾರಿಗಳು 18 ಅಭ್ಯರ್ಥಿಗಳಿಗೂ ಪ್ರಮಾಣಪತ್ರ ವಿತರಿಸಿದರು.

ಡಿವೈಎಸ್‍ಪಿ ನಾಗಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿತ್ತು. ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಶಿವು ಮಾದಪ್ಪ, ಸಿ.ಎಸ್.ಅರುಣ್ ಮಾಚಯ್ಯ, ಅಬ್ದುಲ್ ಸಲಾಂ, ಬಿಜೆಪಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಪಿ.ರಘು ನಾಣಯ್ಯ, ಕಾಂತಿ ಸತೀಶ್, ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ, ಎಂ.ಶಶಿ ಸುಬ್ರಮಣಿ ಮತ್ತು ರೀನಾ ಪ್ರಕಾಶ್ ಮುಂತಾದವರು ಹಾಜರಿದ್ದರು.

Translate »