ಕುಶಾಲನಗರ ಪಪಂನಲ್ಲೂ ಅತಂತ್ರ ಸ್ಥಿತಿ: ಕಾಂಗ್ರೆಸ್ 6, ಬಿಜೆಪಿ 6 ಹಾಗೂ ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆಲುವು
ಕೊಡಗು

ಕುಶಾಲನಗರ ಪಪಂನಲ್ಲೂ ಅತಂತ್ರ ಸ್ಥಿತಿ: ಕಾಂಗ್ರೆಸ್ 6, ಬಿಜೆಪಿ 6 ಹಾಗೂ ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆಲುವು

November 1, 2018

ಕುಶಾಲನಗರ: ಸ್ಥಳೀಯ ಪಪಂಗೆ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದ್ದು, ಯಾವುದೇ ಪಕ್ಷವು ಸರಳ ಬಹುಮತಗಳಿಸುವಲ್ಲಿ ವಿಫಲವಾಗಿವೆ. ಪಪಂನ 16 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 6, ಬಿಜೆಪಿ 6 ಹಾಗೂ ಜೆಡಿಎಸ್ 4 ವಾರ್ಡ್ ಗಳಲ್ಲಿ ಜಯಗಳಿಸಿವೆ. 1ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ ಶೇಕ್ ಕಲೀಮುಲ್ಲಾ 167 ಮತಗಳಿಸಿ ಪ್ರತಿಸ್ಪರ್ಧಿ ಬಿ.ಎಸ್. ಮಂಜು ನಾಥ್ (133 ಮತ) ವಿರುದ್ಧ ಜಯ ಗಳಿಸಿದ್ದಾರೆ.

2ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಲಕ್ಷ್ಮಿ 184 ಮತಗಳಿಸಿ ಪ್ರತಿಸ್ಪರ್ಧಿ ಜೆಡಿ ಎಸ್‍ನ ಎಂ.ಜೆ.ಭುವನೇಶ್ವರಿ(143ಮತ) ವಿರುದ್ಧ ಜಯಗಳಿಸಿದ್ದಾರೆ. 3ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಪ್ರಮೋದ್ ಮುತ್ತಪ್ಪ 344 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಜೆಡಿಎಸ್‍ನ ಹೆಚ್.ಜೆ.ಸಂತೋಷ್ ಕುಮಾರ್ (261) ವಿರುದ್ಧ 61 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

4ನೇ ವಾರ್ಡ್‍ನಿಂದ ಜೆಡಿಎಸ್ ಅಭ್ಯರ್ಥಿ ಸುರೇಯಾ ಬಾನು 271 ಮತ ಗಳಿಸಿ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಮೆಹರು ನ್ನೀಸಾ (248 ಮತ) ವಿರುದ್ಧ 23 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. 5ನೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿ ಬಿ.ಜಯವರ್ಧನ್ (ಕೇಶವ) 209 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮಹದೇವ್ (146ಮತ) ವಿರುದ್ಧ 63 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. 6ನೇ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿ ಡಿ.ಕೆ. ತಿಮ್ಮಪ್ಪ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಡಿ.ಎಂ.ಆನಂದ್ ವಿರುದ್ಧ 26 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. 7ನೇ ವಾರ್ಡ್‍ನಿಂದ ಜೆಡಿಎಸ್ ಅಭ್ಯರ್ಥಿ ಎಂ.ಬಿ.ಸುರೇಶ್ 157 ಮತಗಳನ್ನು ಗಳಿಸಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎಚ್.ಎಂ.ಮಧುಸೂದನ್(83 ಮತ) ವಿರುದ್ಧ 74 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 8ನೇ ವಾರ್ಡ್ ನಿಂದ ಬಿಜೆಪಿಯಿಂದ ರೂಪಾ ಉಮಾ ಶಂಕರ್ 312 ಮತ ಗಳಿಸುವ ಮೂಲಕ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಆರ್.ಸುಷ್ಮಾ (200 ಮತ) ವಿರುದ್ಧ 112 ಮತಗಳ ಅಂತರ ದಿಂದ ಜಯ ಗಳಿಸಿದ್ದಾರೆ. 9ನೇ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿ ಬಿ.ಅಮೃತ್‍ರಾಜ್ 211 ಮತಗಳನ್ನು ಗಳಿಸುವ ಮೂಲಕ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಕೆ.ಎನ್. ಸುರೇಶ್ (202ಮತ) ವಿರುದ್ಧ 9 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

10ನೇ ವಾರ್ಡ್‍ನಿಂದ ಜೆಡಿಎಸ್ ಅಭ್ಯರ್ಥಿ ವಿ.ಎಸ್. ಆನಂದ ಕುಮಾರ್ 228 ಮತ ಗಳಿಸಿ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಅಬ್ದುಲ್ ರಶೀದ್ (187ಮತ) ವಿರುದ್ಧ 41 ಮತ ಗಳ ಅಂತರದಿಂದ ಜಯ ಗಳಿಸಿದ್ದಾರೆ. 11ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ ಜಯಲಕ್ಷ್ಮಿ 216 ಮತಗಳಿಸಿ ಪ್ರತಿಸ್ಪರ್ಧಿ ಎಸ್‍ಡಿಪಿಐನ ಫೌಸಿಯ ಬಾಷ (208 ಮತ) ವಿರುದ್ಧ 8 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

12ನೇ ವಾರ್ಡ್‍ನಿಂದ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ಜಗದೀಶ್ (ಗಾಡಿ ಸಿದ್ದಯ್ಯ) 357 ಮತ ಗಳಿಸುವ ಮೂಲಕ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಜಗದೀಶ್ (169 ಮತ) ವಿರುದ್ಧ 188 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. 13ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ ಜಯಲಕ್ಷ್ಮಮ್ಮ 175 ಮತಗಳಿಸಿ ಪ್ರತಿಸ್ಪರ್ಧಿ ಬಿಜೆಪಿಯ ಪ್ರೇಮಾ (168 ಮತ) ವಿರುದ್ಧ 7 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

14ನೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿ ಶೈಲಾಕೃಷ್ಣಪ್ಪ 306 ಮತಗಳಿಸಿ ಪ್ರತಿಸ್ಪರ್ಧಿ ಜೆಡಿಎಸ್‍ನ ನೇತ್ರಾವತಿ (153 ಮತ) ವಿರುದ್ಧ 153 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 15ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸುಂದರೇಶ್ (ದಿನೇಶ್) 276 ಮತಗಳಿಸಿ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಎನ್.ಸಿ.ಗಣೇಶ್ (230 ಮತ) ವಿರುದ್ಧ 46 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. 16ನೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿ ರೇಣುಕಾ ಜಗದೀಶ್ 292 ಮತಗಳಿಸುವ ಮೂಲಕ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಎಚ್.ಕೆ.ಪಾರ್ವತಿ (210 ಮತ) ವಿರುದ್ಧ 82 ಮತಗಳ ಅಂತರ ದಿಂದ ಗೆಲುವು ಸಾಧಿಸಿದ್ದಾರೆ.

Translate »