Tag: Somwarpet

10 ದಿನವಾದರೂ ಮೂವತ್ತೊಕ್ಲುವಿನ  ಉತ್ತಪ್ಪ ಇನ್ನೂ ಪತ್ತೆ ಇಲ್ಲ
ಕೊಡಗು

10 ದಿನವಾದರೂ ಮೂವತ್ತೊಕ್ಲುವಿನ  ಉತ್ತಪ್ಪ ಇನ್ನೂ ಪತ್ತೆ ಇಲ್ಲ

August 26, 2018

ಸೋಮವಾರಪೇಟೆ: ಕಳೆದ 10 ದಿನಗಳ ಹಿಂದೆ ಸಂಭವಿಸಿದ ಭೂ ಕುಸಿತ ದಿಂದಾಗಿ ಸಮಾಧಿಯಾಗಿ ಮನೆಯೊಳಗೆ ಸಿಲುಕಿದ್ದಾರೆ ಎನ್ನಲಾಗುತ್ತಿರುವ ಮೂವತ್ತೊಕ್ಲುವಿನ ಮುಕ್ಕಾಟಿರ ಉತ್ತಪ್ಪ(ಸಾಬು) ಅವರ ಸಣ್ಣ ಸುಳಿವೂ ಸಹ ಲಭ್ಯವಾಗಿಲ್ಲ. ಕಳೆದ ಆ.16ರಂದು ಸಂಜೆ 4.30ರ ಸುಮಾರಿಗೆ ಸಂಭವಿಸಿದ ಭಾರೀ ಭೂ ಕುಸಿತಕ್ಕೆ ಉತ್ತಪ್ಪ ಅವರ ಮನೆ ಸಂಪೂರ್ಣ ಮುಚ್ಚಿ ಹೋಗಿದ್ದು, ಮನೆಯಿದ್ದ ಸ್ಥಳದಲ್ಲೀಗ ಭಾರೀ ಗಾತ್ರದ ಬಂಡೆ, ಬರೀ ಕೆಸರಿದೆ. ಆ ಪ್ರದೇಶದಲ್ಲಿ ಮನೆ ಎಂಬುದು ಇತ್ತು ಎಂಬ ಊಹೆಯೂ ಆಗದಷ್ಟರ ಮಟ್ಟಿಗೆ ಸ್ಥಳ ಬದಲಾವಣೆಯಾಗಿದ್ದು, ಮಣ್ಣಿನೊಳಗೆ…

ಪರಿಹಾರ ಕೇಂದ್ರದಲ್ಲಿ ವೃದ್ಧೆ ಸಾವು
ಕೊಡಗು

ಪರಿಹಾರ ಕೇಂದ್ರದಲ್ಲಿ ವೃದ್ಧೆ ಸಾವು

August 23, 2018

ಸೋಮವಾರಪೇಟೆ: ಸಂಬಂಧಿಕರನ್ನು ಮಾತನಾಡಿಸಲು ಹೋದ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬಿಳಿಗೇರಿ ಗ್ರಾಮದ ಪೊರೇರ ದಿ.ಸುಬ್ಬಯ್ಯನವರ ಪತ್ನಿ ಭೋಜಮ್ಮ(80) ತಮ್ಮ ಸಂಬಂಧಿಕರನ್ನು ನೋಡಲು ಇಲ್ಲಿನ ಕೊಡವ ಸಮಾಜದಲ್ಲಿ ಸ್ಥಾಪಿಸಿ ರುವ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಮಂಗಳವಾರ ದಂದು ತೆರಳಿ ಅಲ್ಲಿಯೇ ತಂಗಿದ್ದರು. ರಾತ್ರಿ 11ಗಂಟೆ ವೇಳೆಗೆ ಹೃದಯಾಘಾತಕ್ಕೊಳಗಾಗಿದ್ದು, ಕೂಡಲೇ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖ ಲಿಸಲಾಯಿತು. ಬೆಳಗ್ಗೆ 3.30ಕ್ಕೆ ಚಿಕಿತ್ಸೆ ಫಲಕಾರಿ ಯಾಗದೆ ಅವರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ದರು. ಮೃತೆ ಭೋಜಮ್ಮನವರು ವಯೋಸಹಜ…

ಮುಕ್ಕೋಡ್ಲುವಿನ 80 ಮಂದಿ ರಕ್ಷಣೆ ಸ್ಥಳೀಯ ಯುವಕರ ಸಾಹಸ
ಕೊಡಗು

ಮುಕ್ಕೋಡ್ಲುವಿನ 80 ಮಂದಿ ರಕ್ಷಣೆ ಸ್ಥಳೀಯ ಯುವಕರ ಸಾಹಸ

August 21, 2018

ಸೋಮವಾರಪೇಟೆ: ಕಳೆದ 5 ದಿನಗಳಿಂದ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಸಂತ್ರಸ್ತರಾಗಿದ್ದ ಮುಕ್ಕೋಡ್ಲು ಗ್ರಾಮದ ಸುಮಾರು 80 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮಾದಾಪುರದ ಇಗ್ಗೋಡ್ಲು ಮತ್ತು ಹಮ್ಮಿಯಾಲದ ಹಚ್ಚಿನಾಡು ಮಾರ್ಗ ವಾಗಿ ಮುಕ್ಕೋಡ್ಲು ತಲುಪಿದ ತಲಾ 30 ರಷ್ಟಿದ್ದ ಯುವಕರ ತಂಡ ಗ್ರಾಮದೊಳಗೆ ಸಿಲುಕಿದ್ದ ಜನರನ್ನು ಹರಸಾಹಸಪಟ್ಟು ರಕ್ಷಿಸಿ ದರು. ಜಲಪ್ರಳಯದಿಂದ ಮುಕ್ಕೋಡ್ಲು ಗ್ರಾಮದಲ್ಲಿ ಭಾರೀ ಬೆಟ್ಟಗಳು ಕುಸಿದಿದ್ದು, ರಸ್ತೆಗಳು ಸಂಪೂರ್ಣ ನಾಶವಾಗಿವೆ. ರಸ್ತೆ ಬದಿಯ ಗುಡ್ಡಗಳು ಕುಸಿದು ಭಾರೀ ಮರಗಳು ನೆಲಕ್ಕುರುಳಿದ್ದರೆ, ಕೆಲವೆಡೆ ರಸ್ತೆಗಳೇ ಕೊಚ್ಚಿ…

ಸೋಮವಾರಪೇಟೆಯಲ್ಲಿ ಆಟಿ ಸಂಭ್ರಮ
ಕೊಡಗು

ಸೋಮವಾರಪೇಟೆಯಲ್ಲಿ ಆಟಿ ಸಂಭ್ರಮ

August 13, 2018

ಸೋಮವಾರಪೇಟೆ:  ನಾರಾಯಣ ಗುರು ಸೇವಾ ಸಮಿತಿ ಹಾಗೂ ತುಳು ನಾಡು ಬಿಲ್ಲವ ಮಹಿಳಾ ಸಂಘದ ವತಿಯಿಂದ ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ 6ನೇ ವರ್ಷದ ಆಟಿ ಸಂಭ್ರಮೋತ್ಸವ ಕಾರ್ಯಕ್ರಮ ನಡೆಯಿತು. ನಾರಾಯಣಗುರು ಸೇವಾ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಟಿ. ರವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮುದಾಯದ ಸಂಘಟನೆಗಳು ಹೆಚ್ಚು ಬಲಗೊಂಡಂತೆ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಉನ್ನತಿ ಸಾಧಿಸಬಹುದು. ಸಂಘಟನೆಗಳು ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ತಮ್ಮ ಆಚಾರ, ವಿಚಾರ,…

ರಸ್ತೆ ಕಾಮಗಾರಿ ಕಳಪೆ ಆರೋಪ: ಅಧಿಕಾರಿಗಳಿಂದ ಪರಿಶೀಲನೆ
ಕೊಡಗು

ರಸ್ತೆ ಕಾಮಗಾರಿ ಕಳಪೆ ಆರೋಪ: ಅಧಿಕಾರಿಗಳಿಂದ ಪರಿಶೀಲನೆ

August 7, 2018

ಸೋಮವಾರಪೇಟೆ: ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಭಾಗದಲ್ಲಿ ವಿಶೇಷ ಪ್ಯಾಕೇಜ್‍ನಡಿ ಕೈಗೊಳ್ಳಲಾಗಿರುವ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೋಮವಾರಪೇಟೆ ಲೋಕೋಪಯೋಗಿ ಉಪವಿಭಾಗ ವ್ಯಾಪ್ತಿಯಲ್ಲಿ ನಿರ್ವಹಿಸಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ಸೋಮವಾರಪೇಟೆಗೆ ಆಗಮಿಸಿದ ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಣ್ಣೇಗೌಡ, ಗುಣಮಟ್ಟ ಅಧಿಕಾರಿ ನಾಗೇಂದ್ರ ಬಾಬು, ಮಂಗಳೂರು ಅಧೀಕ್ಷಕ…

ಅಕ್ರಮ ಬೀಟೆ ಮರ ಸಂಗ್ರಹ: ಓರ್ವನ ಬಂಧನ
ಕೊಡಗು

ಅಕ್ರಮ ಬೀಟೆ ಮರ ಸಂಗ್ರಹ: ಓರ್ವನ ಬಂಧನ

August 7, 2018

ಸೋಮವಾರಪೇಟೆ: ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಪ್ರಕರಣವನ್ನು ಪತ್ತೆ ಹಚ್ಚಿದ ಸೋಮವಾರಪೇಟೆ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಪಟ್ಟಣ ಸಮೀಪದ ಕರ್ಕಳ್ಳಿ ಬಾಣೆಯ ನಿವಾಸಿ ರವಿ ಬಂಧಿತ ಆರೋಪಿ. ತನ್ನ ಸಾಮಿಲ್‍ನಲ್ಲಿ ಬೆಲೆಬಾಳುವ 7 ಮರದ ನಾಟಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ಕೊಂಡಿದ್ದು, ಖಚಿತ ಸುಳಿವಿನ ಮೇರೆಗೆ ಆರ್‍ಎಫ್‍ಒ ಲಕ್ಷ್ಮೀಕಾಂತ್ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ, ಮಾಲು ಸಮೇತ ಅರೋಪಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಿಲ್ಲಿನ ಯಂತ್ರಗಳನ್ನು…

ಕೊಡಗಿನ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಶಾಸಕ ಅಪ್ಪಚ್ಚು ರಂಜನ್ ಆಗ್ರಹ
ಕೊಡಗು

ಕೊಡಗಿನ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಶಾಸಕ ಅಪ್ಪಚ್ಚು ರಂಜನ್ ಆಗ್ರಹ

August 5, 2018

ಸೋಮವಾರಪೇಟೆ: ಕೊಡಗು ಜಿಲ್ಲೆಯಾಗಿಯೇ ಉಳಿಯ ಬೇಕಾದರೆ ರಾಜ್ಯ ಸರಕಾರ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಆಗ್ರಹಿಸಿದರು. ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ರಾಜ್ಯದ ಇತರ ಜಿಲ್ಲೆಗಳಿಗೆ ವರದಾನವಾಗಿದೆ. ಆದರೆ ಮಳೆಗಾಳಿಯಿಂದ ಇಲ್ಲಿನ ರೈತರ ಕೃಷಿ ಬೆಳೆಗಳು ನಾಶವಾಗಿದೆ. ರಾಜ್ಯದ ಮುಖ್ಯ ಮಂತ್ರಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಮಳೆ ಹಾನಿ ಪರಿಹಾರಕ್ಕೆ 100 ಕೋಟಿ ಘೋಷಣೆ ಮಾಡಿದ್ದಾರೆ….

ಹಾಸಿಗೆ ಹಿಡಿದ ಅವಳಿ ಮಕ್ಕಳೊಂದಿಗೆ ವಿಧವೆ ಪರದಾಟ
ಕೊಡಗು

ಹಾಸಿಗೆ ಹಿಡಿದ ಅವಳಿ ಮಕ್ಕಳೊಂದಿಗೆ ವಿಧವೆ ಪರದಾಟ

August 2, 2018

ಅಪಘಾತದಲ್ಲಿ ಅಸುನೀಗಿದ ಪತಿ ಜೀವನ ನಿರ್ವಹಣೆಗೆ ದಾರಿ ಕಾಣದೆ ಕಂಗಾಲು ಮೈಸೂರು ರೋಟರಿ ಮಿಡ್‍ಟೌನ್‍ನಿಂದ ನೆರವು ಮೈಸೂರು: ಇದು ವಿಧವೆ ತಾಯಿಯೊಬ್ಬಳ ಕರುಣಾಜನಕ ಹಾಗೂ ಕಲ್ಲು ಹೃದಯವನ್ನು ಕರಗಿಸುವಂತಹ ಚಿಂತಾಜನಕ ಕಥೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ವಿಧವೆಯೊಬ್ಬರು ತನ್ನ ಇಬ್ಬರು ಹಾಸಿಗೆ ಹಿಡಿದ ಅವಳಿ ಜವಳಿ ಹೆಣ್ಣು ಮಕ್ಕಳೊಂದಿಗೆ ಯಾವುದೇ ರೀತಿಯ ಆದಾಯವಿ ಲ್ಲದೆ ಜೀವನ ನಿರ್ವಹಣೆಗೆ ಪರಿಪಾಟಲು ಪಡುತ್ತಿರುವ ಮನಕರಗುವಂತಹ ಸ್ಥಿತಿ ಯಲ್ಲಿರುವುದು ವರದಿಯಾಗಿದೆ. ಈಕೆಯ ಪತಿ, ಆಟೋ ಚಾಲಕನಾ ಗಿದ್ದು, ಕಳೆದ ಎರಡು…

ನಿವೇಶನ, ವಸತಿ ರಹಿತರ ಪಟ್ಟಿ ಸಿದ್ದಪಡಿಸಲು ಶಾಸಕ ಅಪ್ಪಚ್ಚು ರಂಜನ್ ಸೂಚನೆ
ಕೊಡಗು

ನಿವೇಶನ, ವಸತಿ ರಹಿತರ ಪಟ್ಟಿ ಸಿದ್ದಪಡಿಸಲು ಶಾಸಕ ಅಪ್ಪಚ್ಚು ರಂಜನ್ ಸೂಚನೆ

August 1, 2018

ಸೋಮವಾರಪೇಟೆ: ಮುಂದಿನ 5 ವರ್ಷದೊಳಗೆ ತಾಲೂಕಿನ ಎಲ್ಲರಿಗೂ ನಿವೇಶನ ಮತ್ತು ಸ್ವಂತ ಮನೆ ಒದಗಿಸುವ ನಿಟ್ಟಿನಲ್ಲಿ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ನಿವೇಶನ ರಹಿತರು ಹಾಗೂ ವಸತಿ ರಹಿತರ ಪಟ್ಟಿ ಸಿದ್ಧಗೊಳಿಸಬೇಕು ಎಂದು ಶಾಸಕ ರಂಜನ್ ಸೂಚಿಸಿದರು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹತ್ತಾರು ಎಕರೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ತಹಸೀಲ್ದಾರ್ ಮಹೇಶ್…

ಕೊಡಗು ಸಮಗ್ರ ಅಭಿವೃದ್ಧಿಗೆ ಕಟಿಬದ್ಧ
ಕೊಡಗು

ಕೊಡಗು ಸಮಗ್ರ ಅಭಿವೃದ್ಧಿಗೆ ಕಟಿಬದ್ಧ

July 31, 2018

ಸೋಮವಾರಪೇಟೆ: ಕ್ಷೇತ್ರದ ಜನತೆ ತಮಗೆ ರಾಜಕೀಯ ಶಕ್ತಿ ನೀಡದಿದ್ದರೂ, ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿರುವುದರಿಂದ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಜನತೆ ಆತ್ಮಸ್ಥೈರ್ಯ ತುಂಬಬೇಕೆಂದು ಮಾಜಿ ಸಚಿವ ಬಿ.ಎ. ಜೀವಿಜಯ ಹೇಳಿದರು. ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆಡಿಎಸ್ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಹಲವಾರು ರಸ್ತೆ, ಸೇತುವೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್‍ಪೂವಯ್ಯ ರಾಜೀನಾಮೆ ನೀಡಿರುವುದು ಸಮಂಜಸವಲ್ಲ. ಹೀಗಾಗಿ…

1 2 3 4 5 6 8
Translate »