ಅಕ್ರಮ ಬೀಟೆ ಮರ ಸಂಗ್ರಹ: ಓರ್ವನ ಬಂಧನ
ಕೊಡಗು

ಅಕ್ರಮ ಬೀಟೆ ಮರ ಸಂಗ್ರಹ: ಓರ್ವನ ಬಂಧನ

August 7, 2018

ಸೋಮವಾರಪೇಟೆ: ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಪ್ರಕರಣವನ್ನು ಪತ್ತೆ ಹಚ್ಚಿದ ಸೋಮವಾರಪೇಟೆ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.

ಪಟ್ಟಣ ಸಮೀಪದ ಕರ್ಕಳ್ಳಿ ಬಾಣೆಯ ನಿವಾಸಿ ರವಿ ಬಂಧಿತ ಆರೋಪಿ. ತನ್ನ ಸಾಮಿಲ್‍ನಲ್ಲಿ ಬೆಲೆಬಾಳುವ 7 ಮರದ ನಾಟಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ಕೊಂಡಿದ್ದು, ಖಚಿತ ಸುಳಿವಿನ ಮೇರೆಗೆ ಆರ್‍ಎಫ್‍ಒ ಲಕ್ಷ್ಮೀಕಾಂತ್ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ, ಮಾಲು ಸಮೇತ ಅರೋಪಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಿಲ್ಲಿನ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಕಲ್ಕಂದೂರು ಗ್ರಾಮದ ರಂಜು ಎಂಬಾತ ತಲೆ ಮರೆಸಿಕೊಂಡಿದ್ದಾನೆ.

Translate »