ತಮಿಳುನಾಡಲ್ಲಿ ಅಪಘಾತ: ಕೊಡಗಿನ ಯುವಕ ಸಾವು
ಕೊಡಗು

ತಮಿಳುನಾಡಲ್ಲಿ ಅಪಘಾತ: ಕೊಡಗಿನ ಯುವಕ ಸಾವು

August 7, 2018

ಮಡಿಕೇರಿ: ತಮಿಳುನಾಡು ಕೊಯಮತ್ತೂರಿನಲ್ಲಿ ನಡೆದ ರಸ್ತೆ ಅಪ ಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೊಡಗಿನ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮಡಿಕೇರಿಯ ಸ್ಟುಡಿಯೋ ಒಂದರಲ್ಲಿ ಫೋಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಜ ಎಂಬುವರ ಪುತ್ರ ಕಿಶೋರ್ (25) ಮೃತಪಟ್ಟ ಯುವಕನಾಗಿದ್ದಾನೆ.

ಕೊಯಮತ್ತೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಕಿಶೋರ್ ಆ.03 ರಂದು ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುವ ಸಂದರ್ಭ ರಸ್ತೆ ಅಪಘಾತ ಸಂಭವಿಸಿ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಗಾಯಾಳುವನ್ನು ಕೊಯಮ ತ್ತೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖ ಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿ ಯಾಗದೆ, ಆ6 ರಂದು ಮೃತಪಟ್ಟಿದ್ದಾನೆ. ಕಿಶೋರ್ ಮೂಲತಃ ಕುಶಾಲನಗರ ಗುಡ್ಡೆಹೊಸೂರಿನ ಬೆಟ್ಟಗೇರಿ ಗ್ರಾಮ ದವರಾಗಿದ್ದು, ಆ7 ರಂದು ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Translate »