ಪರಿಹಾರ ಕೇಂದ್ರದಲ್ಲಿ ವೃದ್ಧೆ ಸಾವು
ಕೊಡಗು

ಪರಿಹಾರ ಕೇಂದ್ರದಲ್ಲಿ ವೃದ್ಧೆ ಸಾವು

August 23, 2018

ಸೋಮವಾರಪೇಟೆ: ಸಂಬಂಧಿಕರನ್ನು ಮಾತನಾಡಿಸಲು ಹೋದ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬಿಳಿಗೇರಿ ಗ್ರಾಮದ ಪೊರೇರ ದಿ.ಸುಬ್ಬಯ್ಯನವರ ಪತ್ನಿ ಭೋಜಮ್ಮ(80) ತಮ್ಮ ಸಂಬಂಧಿಕರನ್ನು ನೋಡಲು ಇಲ್ಲಿನ ಕೊಡವ ಸಮಾಜದಲ್ಲಿ ಸ್ಥಾಪಿಸಿ ರುವ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಮಂಗಳವಾರ ದಂದು ತೆರಳಿ ಅಲ್ಲಿಯೇ ತಂಗಿದ್ದರು. ರಾತ್ರಿ 11ಗಂಟೆ ವೇಳೆಗೆ ಹೃದಯಾಘಾತಕ್ಕೊಳಗಾಗಿದ್ದು, ಕೂಡಲೇ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖ ಲಿಸಲಾಯಿತು. ಬೆಳಗ್ಗೆ 3.30ಕ್ಕೆ ಚಿಕಿತ್ಸೆ ಫಲಕಾರಿ ಯಾಗದೆ ಅವರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ದರು. ಮೃತೆ ಭೋಜಮ್ಮನವರು ವಯೋಸಹಜ ಕಾಯಿಲೆ ಯಿಂದ ನರಳುತ್ತಿದ್ದರು ಎನ್ನಲಾಗಿದೆ.

Translate »