ಶಾಸಕ ಬಿ. ಹರ್ಷವರ್ಧನ್ ನೇತೃತ್ವದಲ್ಲಿ ಕೊಡುಗು ಜಿಲ್ಲಾ ಸಂತ್ರಸ್ತರಿಗೆ  ಪಾದಯಾತ್ರೆ ಮೂಲಕ ನಿಧಿ ಸಂಗ್ರಹಣೆ
ಮೈಸೂರು

ಶಾಸಕ ಬಿ. ಹರ್ಷವರ್ಧನ್ ನೇತೃತ್ವದಲ್ಲಿ ಕೊಡುಗು ಜಿಲ್ಲಾ ಸಂತ್ರಸ್ತರಿಗೆ  ಪಾದಯಾತ್ರೆ ಮೂಲಕ ನಿಧಿ ಸಂಗ್ರಹಣೆ

August 23, 2018

ನಂಜನಗೂಡು: ತಾಲೂಕು ಬಿ.ಜೆ.ಪಿ ವತಿಯಿಂದ ಶಾಸಕ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ಕೊಡಗಿನ ನೆರೆಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಪಕ್ಷದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ನಗರದ ಪ್ರಮುಖ ಬಡಾ ವಣೆಗಳಲ್ಲಿ ಪಾದಯಾತ್ರೆ ಮೂಲಕ ನಿಧಿ ಸಂಗ್ರಹಿಸಿದರು. ಅಂಗಡಿಗಳು, ಹೊಟೆಲ್, ಚಿತ್ರಮಂದಿರಗಳಲ್ಲಿ ನೆರವು ಸಂಗ್ರಹಿಸ ಲಾಯಿತು.

ನಂತರ ಶಾಸಕರು ಮಾತನಾಡಿ, ಕೊಡುಗು ಜಿಲ್ಲೆಯಲ್ಲಿ ಮಳೆಯಿಂದ ಆಸ್ತಿ-ಪಾಸ್ತಿ, ಪ್ರಾಣಹಾನಿಯಾಗಿದೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯಾದ್ಯಂತ ನೆರವು ಬರುತ್ತಿದ್ದು, ನಂಜನಗೂಡು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಾಳೆಯೂ ಪಾದಯಾತ್ರೆಯೊಂದಿಗೆ ನಿಧಿ ಸಂಗ್ರಹಿಸ ಲಾಗುವುದು. ನಮ್ಮ ಮನವಿಗೆ ಪ್ರಬುದ್ಧ ನಾಗರಿಕರು ಸ್ಪಂದಿಸುತ್ತಿದ್ದಾರೆ. ಸಂಗ್ರಹಿಸಿದ ಎಲ್ಲಾ ಹಣವನ್ನು ತಹಸೀಲ್ದಾರ್ ಕಚೇರಿ ಯಲ್ಲಿ ಎಣಿಕೆ ಮಾಡಿ ವೀಡಿಯೋ ಮಾಡಿಸಿ ಚೆಕ್ ಅನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರಿಗೆ ತಲುಪಿಸಲಾಗು ವುದು. ಈ ನಿಧಿಗೆ ನನ್ನ ಒಂದು ತಿಂಗಳ ವೇತನವನ್ನು ನೀಡುತ್ತಿದ್ದೇನೆ. ಕ್ಷೇತ್ರದ ಕೈಗಾರಿಕೆಗಳಿಂದ, ಅಧಿಕಾರಿಗಳು, ಉದ್ಯಮಿ ಗಳಿಂದ, ಸಾಕಷ್ಟು ಹಣವನ್ನು ಸಂಗ್ರಹಿಸಿ ನಿಧಿಗೆ ತಲುಪಿಸುವ ಗುರಿ ಇದೆ ಎಂದರು.
ಪ್ರಾರಂಭದಲ್ಲಿ ಸಮಾಜ ಸೇವಕ ಯು.ಎನ್.ಪದ್ಮನಾಭರಾವ್ ಅವರು 1 ಲಕ್ಷ, ಉದ್ಯಮಿ ಎನ್.ಆರ್.ಕೃಷ್ಣಪ್ಪಗೌಡ 5ಸಾವಿರ ರೂ. ಚೆಕ್ ನೀಡಿದರು.

ಹೆಜ್ಜಿಗೆ ಲಿಂಗಣ್ಣನವರ ವೃತ್ತ(ಚಿಂತಾಮಣಿ ಗಣಪತಿ)ದಿಂದ ಬೆ.10.30ಕ್ಕೆ ಪಾದ ಯಾತ್ರೆ ಆರಂಭವಾಯಿತು.
ನಿಧಿ ಸಂಗ್ರಹಣೆಯಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಅಧ್ಯಕ್ಷ ಬಾಲಚಂದ್ರು, ರಾಜ್ಯ ಕಾರ್ಯ ಕಾರಿಣಿ ಸದಸ್ಯ ಕುಂಬ್ರಳ್ಳಿ ಸುಬ್ಬಣ್ಣ, ಜಿ.ಪಂ. ಮಾಜಿ ಸದಸ್ಯ ಸಿ.ಚಿಕ್ಕರಂಗನಾಯ್ಕ, ಯು.ಎನ್.ಪದ್ಮನಾಭರಾವ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಎನ್.ಆರ್. ಕೃಷ್ಣಪ್ಪಗೌಡ, ಹೆಮ್ಮರಗಾಲದ ಸೋಮಣ್ಣ, ಹೊರಳವಾಡಿ ಮಹೇಶ, ಗಿರೀಶ್, ಸೋಮಣ್ಣ, ಕಪಿಲೇಶ್, ಯುವ ಮೋರ್ಚಾ ಅಧ್ಯಕ್ಷ ಶ್ರೀಕಂಠ, ತಾ.ಪಂ. ಸದಸ್ಯರಾದ ಸಿ.ಎಂ. ಮಹದೇವಯ್ಯ, ಬಿ.ಎಸ್. ರಾಮು, ಶಿವಣ್ಣ, ಮುಖಂಡರಾದ ನಿಧಿಸುರೇಶ್, ಕೃಷ್ಣಂರಾಜು, ಜಿ. ಬಸವರಾಜು, ಆಕಳ ಮಹದೇವಪ್ಪ, ಚಿದಾನಂದ, ಸಣ್ಣಯ್ಯ, ಇಲಿಯಾಸ್, ಕಣೇನೂರು ಪರಶಿವ ಮೂರ್ತಿ, ಎನ್.ಎಸ್. ಶಿವನಾಗಪ್ಪ, ವಕೀಲ ಮಹೇಶ್ ಬಾಬು, ಮಾದೇಶ, ಮಹಿಳಾ ಅಧ್ಯಕ್ಷೆ ಗಾಯಿತ್ರಿ, ಪುರಸಭಾ ಮಾಜಿ ಸದಸ್ಯ ಮಹೇಶ, ಡಿ.ಪಿ. ಲೋಕೇಶ್, ತಾಲೂಕು ಕಾರ್ಯದರ್ಶಿ ವಳಗೆರೆ ಪುಟ್ಟ ಸ್ವಾಮಿ, ಹುಲ್ಲಹಳ್ಳಿ ಶಿವಣ್ಣ, ಕಸೂವಿನ ಹಳ್ಳಿ ಗಿರೀಶ, ಅಶೋಕಪುರಂ ಭಾಗ್ಯ, ಸ್ವಾಮಿ, ಮಾದುರಾಜ್, ರಂಗಸ್ವಾಮಿ, ಮಹದೇವು ಮುಂತಾದವರು ಭಾಗವಹಿಸಿದ್ದರು.

Translate »