ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ರಸ್ತೆ ತಡೆ
ಮೈಸೂರು

ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ರಸ್ತೆ ತಡೆ

August 23, 2018

ಕೆ.ಆರ್.ನಗರ:  ದೆಹಲಿಯ ಜಂತರ್ ಮಂತರ್‍ನಲ್ಲಿ ಸಂವಿ ಧಾನ ಸುಟ್ಟ ಕೃತ್ಯವನ್ನು ಖಂಡಿಸಿ ಪಟ್ಟಣದ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ರಸ್ತೆ ತಡೆ ನಡೆಸಲಾಯಿತು.

ವಿಧಾನ ಪರಿಷತ್ ಮಾಜಿ ಸದಸ್ಯ ರಾದ ಕೆ.ಸಿ.ಪುಟ್ಟಸಿದ್ದಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಪಟ್ಟಣದ ಅಂಬೇ ಡ್ಕರ್ ವೃತ್ತದ ಬಳಿ ಸಮಾವೇಶಗೊಂಡು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇ ಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪ್ರತಿಭಟನೆ ಆರಂಭಿಸಿದರು.

ಈ ದೇಶಕ್ಕೆ ಸಂವಿಧಾನ ನೀಡುವುದ ರೊಂದಿಗೆ ಕಾಯಕ ಸಮಾಜಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ವರು ಅಂಬೇಡ್ಕರ್. ಸಂವಿಧಾನವನ್ನು ಸುಟ್ಟ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ರಸ್ತೆ ತಡೆಯಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ನಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇದಕ್ಕೂ ಮೊದಲು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜು ಅರಸ್‍ರವರ ಸ್ಮರಣೆ ಮಾಡಲಾಯಿತು.

ಒಕ್ಕೂಟದ ಉಪಾಧ್ಯಕ್ಷ ತಿಮ್ಮಶಟ್ಟಿ, ಕೆ.ಸಿ. ರಾಜಣ್ಣ, ಕಾರ್ಯಾಧ್ಯಕ್ಷೆ ಶಾಂತಿರಾಜಯ್ಯ, ಬೋರಪ್ಪಶೆಟ್ಟಿ, ಖಜಾಂಚಿ ಲಕ್ಷ್ಮಿಕಾಂತ್, ಸಂಚಾಲಕರಾದ ಎಚ್.ಎಸ್.ಚೆಲುವ ರಾಜು, ಹುಣಸೂರು ಶಂಕರ್, ಸಂಘಟನಾ ಕಾರ್ಯದರ್ಶಿ ಮಹದೇವ್, ಪುಟ್ಟಣ್ಣಯ್ಯ, ನಿವೃತ್ತ ಮುಖ್ಯ ಶಿಕ್ಷಕ ಎಚ್.ಬಿ.ಸಂಪತ್, ಸಹಕಾರ್ಯದರ್ಶಿ ಎಂ.ಲೋಕೇಶ್, ಶ್ರೀನಿವಾಸರಾವ್, ನಿವೃತ್ತ ಡಿಓಪಿಐ ಮಲ್ಲ ಶೆಟ್ಟಿ, ನಟರಾಜು, ಕಾನೂನು ಸಲಹೆಗಾರ ಎಸ್.ಎಲ್.ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Translate »