ರಾಜ್ಯ ಕಂಡ ಅಪರೂಪದ ರಾಜಕಾರಣಿ ದೇವರಾಜ ಅರಸರ ಸ್ಮರಣೆಯಲ್ಲಿ ಶ್ಲಾಘನೆ
ಮೈಸೂರು

ರಾಜ್ಯ ಕಂಡ ಅಪರೂಪದ ರಾಜಕಾರಣಿ ದೇವರಾಜ ಅರಸರ ಸ್ಮರಣೆಯಲ್ಲಿ ಶ್ಲಾಘನೆ

August 23, 2018

ಹೆಚ್.ಡಿ.ಕೋಟೆ:  ಸಾಮಾಜಿಕ ಬದಲಾವಣೆ ಹರಿಕಾರರಾಗಿ ಮತ್ತು ಸಮಾಜ ಸುಧಾರಣೆಗಾಗಿ ಶ್ರಮಿಸಿದ್ಧ ರಾಜ್ಯ ಕಂಡ ಅಪರೂಪದ ರಾಜಕಾರಣಿ ದೇವರಾಜ ಅರಸ್ ರವರು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣ ದಲ್ಲಿ ನಡೆದ ಅರಸುರವರ ಸ್ಮರಣೆ ಕಾರ್ಯ ಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಎಲ್ಲಾ ಬಡವರು, ಶೋಷಿತರು, ಹಿಂದು ಳಿದ ವರ್ಗದವರನ್ನು ಮೇಲೆತ್ತಲು ಎಲ್.ಜಿ. ಹಾವನೂರು ಆಯೋಗ ರಚನೆ ಮಾಡಿದ್ದರು. ಅವರು ಕೊಟ್ಟ ವರದಿ ಆಧಾರದ ಮೇಲೆ ಅವರಿಗೆ ಮೀಸಲು ಕಲ್ಪಿಸಿದ ಧೀಮಂತ ನಾಯಕ. ಆ ಮೂಲಕ ಆ ವರ್ಗ ದವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ ಬರಲು ಅವಕಾಶ ಕಲ್ಪಿಸಿದರು. ರಾಜಕೀಯ ಒತ್ತಡವದ ನಡುವೆಯೂ ಅರಣ್ಯವನ್ನು ಸಂರಕ್ಷಣೆ ಮಾಡುವ ದೃಷ್ಟಿ ಯಿಂದ ವೃಕ್ಷ ಸಂರಕ್ಷಣೆ ಕಾಯಿದೆ ಜಾರಿಗೆ ತಂದಂತಹ ಮಹಾನ್ ವ್ಯಕ್ತಿ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಹೀಮಾ ಸುಲ್ತಾನ್, ಸದಸ್ಯ ವೆಂಕಟಸ್ವಾಮಿ, ಮೈಮುಲ್ ನಿರ್ದೇಶಕ ಈರೇಗೌಡ, ತಹಸೀ ಲ್ದಾರ್ ಮಂಜುನಾಥ್, ಸಮಾಜ ಕಲ್ಯಾಣಾ ಧಿಕಾರಿ ಚಂದ್ರಪ್ಪ, ಪುರಸಭೆ ಮುಖ್ಯಾಧಿ ಕಾರಿ ರಮೇಶ್, ಆದಿ ಕರ್ನಾಟಕ ಮಹಾ ಸಭಾದ ಅಧ್ಯಕ್ಷ ಮುದ್ದುಮಲ್ಲಯ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪ್ರಮೋದ್ ಮತ್ತಿತರರು ಹಾಜರಿದ್ದರು.

Translate »