ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು: ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ ಅಭಿಮತ
ಮೈಸೂರು

ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು: ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ ಅಭಿಮತ

August 23, 2018

ತಿ.ನರಸೀಪುರ: ಸಮಾಜವನ್ನು ಸನ್ಮಾರ್ಗದತ್ತ ಕೊಂಡೊ ಯ್ಯುವಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚು ಇದೆ ಎಂದು ಬೆಂಗಳೂರಿನ ಶಿಕ್ಷಣ ತಜ್ಞೆ ಹಾಗೂ ಜಿಆರ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕಿ ಡಾ. ಗೀತಾ ರಾಮಾನುಜಂ ಹೇಳಿದರು.

ಪಟ್ಟಣದ ಪಿಆರ್‍ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾಪದ್ಮ ಸಭಾಂಗಣ ದಲ್ಲಿ ನಡೆದ ಬಿಎಚ್‍ಎಸ್ ಗ್ರಾಮೀಣ ಶಿಕ್ಷಣ ಪ್ರೌಢಶಾಲೆ, ಪಿಯುಸಿ, ಪದವಿ ಹಾಗೂ ಕೈಗಾರಿಕಾ ತರಬೇತಿ ಕೇಂದ್ರ ಪ್ರಥಮ ವರ್ಷದ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು

ಜಾತೀಯತೆ ಸೇರಿದಂತೆ ವಿವಿಧ ಅಂಶ ಗಳು ಸಮಾಜವನ್ನು ಬೇರೆ ಬೇರೆ ರೀತಿ ಯಲ್ಲಿ ಕಲುಷಿತಗೊಳಿಸುತ್ತಿವೆ, ಇದನ್ನು ತಡೆಗಟ್ಟಲು ಉತ್ತಮ ಶಿಕ್ಷಣದ ಅಗತ್ಯ ವಿದೆ. ಒಂದು ಸಂಸ್ಥೆಗೆ ಶಿಕ್ಷಕರೇ ಆಸ್ತಿ. ಅವರು ಗುಣಮಟ್ಟದ ಶಿಕ್ಷಣ ನೀಡಿದರೆ ಸಮಾಜವನ್ನು ಸುಧಾರಿಸುವಂತಹ ವಿದ್ಯಾರ್ಥಿ ಗಳನ್ನು ರೂಪಿಸಬಹುದು ಎಂದು ಅಭಿ ಪ್ರಾಯಪಟ್ಟರು. ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಗುಣ ಮಟ್ಟ ಹೆಚ್ಚಿಸುವಲ್ಲಿ ಮಹತ್ತರವಾದ ಕರ್ತವ್ಯ ನಿರ್ವಹಿಸುತ್ತಿರುವ ಬಿಎಚ್‍ಎಸ್ ಉನ್ನತ ಶಿಕ್ಷಣ ಮಂಡಳಿ ಸೇವೆ ಶ್ಲಾಘನೀಯ ಎಂದರು.

ಬಿಎಚ್‍ಎಸ್ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಕೆ.ಎಸ್ ಸಮೀರಸಿಂಹ ಅವರು ಮಾತನಾಡಿ, ಗುರಿಯಿದ್ದರೆ ಯಶಸ್ಸಿನ ಮೆಟ್ಟಲೇರಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಂಟಿ ಕಾರ್ಯ ದರ್ಶಿ ಹಾಗೂ ಡೀನ್ ಪ್ರೊ. ಆರ್. ವಿ ಪ್ರಭಾಕರ್ ಮಾತನಾಡಿ, ಒಳ್ಳೆಯ ವ್ಯಕ್ತಿ ಗಳಾಗಿ ರೂಪುಗೊಳ್ಳಲು ಶಿಕ್ಷಣ ಬಹು ಮುಖ್ಯ ಎಂದರಲ್ಲದೆ ಬಡ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿ ವರ್ಷ 35 ಲಕ್ಷ ರೂಪಾಯಿಗೂ ಹೆಚ್ಚು ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಕೈಗಾರಿಕಾ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳಿಗೆ ಲ್ಯಾಪ್‍ಟಾಪ್ ಹಾಗೂ ಶೂಗಳನ್ನು ವಿತರಿಸಲಾಯಿತು.
ಪಿಆರ್‍ಎಂ ವಿಜಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎ. ಪದ್ಮನಾಭ್, ಉಪಪ್ರಾಂಶುಪಾಲ ಎಸ್. ಚಂದ್ರಮೋಹನ್, ಬಿಎಚ್‍ಎಸ್ ಕೈಗಾ ರಿಕಾ ತರಬೇತಿ ಕೇಂದ್ರದ ಸಿ. ಪ್ರಸನ್ನ ಕುಮಾರ್, ಪಿಆರ್‍ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಸಿದ್ದೇಶ್, ಸಮಾಜಶಾಸ್ತ್ರದ ಉಪನ್ಯಾಸಕಿ ಆಶಾ ಹಾಗೂ ಗ್ರಾಮೀಣ ಶಿಕ್ಷಣ ಯೋಜನೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Translate »