ನಾಳೆ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ವಿಚಾರ ಸಂಕಿರಣ
ಮೈಸೂರು

ನಾಳೆ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ವಿಚಾರ ಸಂಕಿರಣ

October 5, 2018

ಮೈಸೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿ ಯಿಂದ ಅ.6ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಜೆಎಲ್‍ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾ ತರ ಒಗ್ಗಟ್ಟಿನ ಹೋರಾಟ ಕುರಿತು ವಿಚಾರ ಸಂಕಿರಣ ಏರ್ಪ ಡಿಸಲಾಗಿದೆ ಎಂದು ದಸಂಸ ಮುಖಂಡ ರಾಜಣ್ಣ ಇಟ್ನಾ ತಿಳಿಸಿದರು.

ಪ್ರಜಾಪ್ರಭುತ್ವ ರಕ್ಷಣೆ, ಪೂರ್ಣ ಪ್ರಮಾಣದ ಸಾಮಾಜಿಕ ನ್ಯಾಯ ಸ್ಥಾಪನೆ, ಭಿನ್ನ ಪಂಥ, ಧರ್ಮ, ಸಂಸ್ಕøತಿ ಯನ್ನು ಹೊಂದಿರುವವರು ಸಾಮರಸ್ಯದಿಂದ ಬದುಕಬೇಕು ಎಂಬ ಉದ್ದೇಶದಿಂದ ಆಯೋಜಿಸಿರುವ ವಿಚಾರ ಸಂಕಿರಣಕ್ಕೆ ಸಮಗ್ರ ಗಿರಿಜನ ಅಭಿವೃದ್ದಿ ಅಧಿಕಾರಿ ಪ್ರಭಾ ಚಾಲನೆ ನೀಡಲಿದ್ದಾರೆ. ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್ ಮಂಡ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹರಿಹರ ಆನಂದಸ್ವಾಮಿ, ಬಿಳಿಕೆರೆ ರಾಜು, ಚಿಕ್ಕಜವರಯ್ಯ. ಕೆ.ಆರ್.ಗೋಪಾಲಕೃಷ್ಣ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಹನುಮಂತು ಬೆಲವತ್ತ, ಶ್ರೀನಿವಾಸ್ ಬಂಬೂ ಬಜಾರ್, ಪುಟ್ಟಸ್ವಾಮಿ ದೇವರಸನಹಳ್ಳಿ, ನಾಗರತ್ನಮ್ಮ ಉಪಸ್ಥಿತರಿದ್ದರು.

Translate »