ನಾಳೆ ಡಿ.ದೇವರಾಜೇ ಅರಸ್ ಜನ್ಮ ದಿನಾಚರಣೆ
ಮೈಸೂರು

ನಾಳೆ ಡಿ.ದೇವರಾಜೇ ಅರಸ್ ಜನ್ಮ ದಿನಾಚರಣೆ

August 20, 2018

ಮೈಸೂರು: ಅರಸು ಜಾಗೃತಿ ಅಕಾಡೆಮಿ ವತಿಯಿಂದ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜೇ ಅರಸ್ ಅವರ 103ನೇ ಜನ್ಮ ದಿನಾ ಚರಣೆ ಸಮಾರಂಭವನ್ನು ಆಚರಿಸಲಾಗುತ್ತಿದೆ. ಆ.21ರಂದು ಜೆ.ಎಲ್.ಬಿ ರಸ್ತೆಯಲ್ಲಿರುವ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯ ರಿಂಗ್ ಸಭಾಂಗಣದಲ್ಲಿ ಬೆಳಿಗ್ಗೆ 10.45ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರು ಉದ್ಘಾಟಿಸಲಿದ್ದು, ವೈದ್ಯ ರತ್ನ ಡಾ.ತಿಮ್ಮಯ್ಯ ಸಮಾ ರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಕುಲಪತಿ ಡಾ.ಕೆ. ಎಸ್.ರಂಗಪ್ಪ ಧ್ವನಿ ಕೊಟ್ಟ ದಣಿ ಪ್ರಶಸ್ತಿಯನ್ನು ಆರು ಮಂದಿ ಸಾಧಕರುಗಳಿಗೆ ಪ್ರದಾನ ಮಾಡಲಿದ್ದಾರೆ. ಇನ್ಸ್ಟಿಟ್ಯೂಷನ್ ಆಫ್ ಇಂಜಿನಿ ಯರ್ಸ್‍ನ ಅಧ್ಯಕ್ಷ ಚಿನ್ನಸ್ವಾಮಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎ.ಎಸ್.ಸತೀಶ್, ಸಂಸ್ಕøತಿ ಚಿಂತಕ ಡಾ.ರಘುರಾಂ ವಾಜಪೇಯಿ ಮತ್ತು ಎಂ.ಜಿ.ಆರ್.ಅರಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Translate »