10 ದಿನವಾದರೂ ಮೂವತ್ತೊಕ್ಲುವಿನ  ಉತ್ತಪ್ಪ ಇನ್ನೂ ಪತ್ತೆ ಇಲ್ಲ
ಕೊಡಗು

10 ದಿನವಾದರೂ ಮೂವತ್ತೊಕ್ಲುವಿನ  ಉತ್ತಪ್ಪ ಇನ್ನೂ ಪತ್ತೆ ಇಲ್ಲ

August 26, 2018

ಸೋಮವಾರಪೇಟೆ: ಕಳೆದ 10 ದಿನಗಳ ಹಿಂದೆ ಸಂಭವಿಸಿದ ಭೂ ಕುಸಿತ ದಿಂದಾಗಿ ಸಮಾಧಿಯಾಗಿ ಮನೆಯೊಳಗೆ ಸಿಲುಕಿದ್ದಾರೆ ಎನ್ನಲಾಗುತ್ತಿರುವ ಮೂವತ್ತೊಕ್ಲುವಿನ ಮುಕ್ಕಾಟಿರ ಉತ್ತಪ್ಪ(ಸಾಬು) ಅವರ ಸಣ್ಣ ಸುಳಿವೂ ಸಹ ಲಭ್ಯವಾಗಿಲ್ಲ.

ಕಳೆದ ಆ.16ರಂದು ಸಂಜೆ 4.30ರ ಸುಮಾರಿಗೆ ಸಂಭವಿಸಿದ ಭಾರೀ ಭೂ ಕುಸಿತಕ್ಕೆ ಉತ್ತಪ್ಪ ಅವರ ಮನೆ ಸಂಪೂರ್ಣ ಮುಚ್ಚಿ ಹೋಗಿದ್ದು, ಮನೆಯಿದ್ದ ಸ್ಥಳದಲ್ಲೀಗ ಭಾರೀ ಗಾತ್ರದ ಬಂಡೆ, ಬರೀ ಕೆಸರಿದೆ. ಆ ಪ್ರದೇಶದಲ್ಲಿ ಮನೆ ಎಂಬುದು ಇತ್ತು ಎಂಬ ಊಹೆಯೂ ಆಗದಷ್ಟರ ಮಟ್ಟಿಗೆ ಸ್ಥಳ ಬದಲಾವಣೆಯಾಗಿದ್ದು, ಮಣ್ಣಿನೊಳಗೆ ಉತ್ತಪ್ಪ ಸಿಲುಕಿದ್ದಾರೆ ಎಂಬ ಸಂಶಯದಿಂದ ಶೋಧ ಕಾರ್ಯ ಆರಂಭವಾಗಿದೆ.

ಅಂದಿನಿಂದಲೂ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆ ಮೊನ್ನೆ ದಿನ ಜೆಸಿಬಿ ತರಲಾಯಿತಾದರೂ, ಕೆಲಸ ಮಾಡದೇ ಹಿಂತೆರಳಿದೆ. ಇಂದೂ ಸಹ ಮಡಿಕೇರಿಯಿಂದ ಆಗಮಿಸಿದ್ದ ಜೆಸಿಬಿ ಯಂತ್ರ ಯಾವುದೇ ಕಾರ್ಯಾ ಚರಣೆ ನಡೆಸದೇ ಹಿಂತೆರಳಿದೆ. ಈ ಕೆಸರಿನಲ್ಲಿ ಜೆಸಿಬಿ ಕೆಲಸ ಮಾಡಲು ಆಗಲ್ಲ; ಹಿಟಾಚಿ ಯಂತ್ರ ಬೇಕು ಎಂದು ಚಾಲಕ ತಿಳಿಸಿ ಸ್ಥಳದಿಂದ ಹಿಂತೆರಳಿದ್ದಾನೆ.

ಮುಕ್ಕಾಟಿರ ಉತ್ತಪ್ಪ ಅವರು ಮಣ್ಣಿ ನೊಳಗೆ ಸಿಲುಕಿರಬಹುದಾದ ಸಂಶಯದಿಂದ ಮಡಿಕೇರಿಯಿಂದ ಶ್ವಾನ ದಳ ಆಗಮಿಸಿ ಕಾರ್ಯಾಚರಣೆ ನಡೆಸಿದರೂ ಯಾವದೇ ಸಣ್ಣ ಕುರುಹೂ ಸಹ ಲಭ್ಯವಾಗಿಲ್ಲ.

2_Page

ಉತ್ತಪ್ಪ ಅವರ ಮನೆಯಿದ್ದ ಪ್ರದೇಶ ದಲ್ಲಿ ಭಾರೀ ಭೂಕುಸಿತ ಸಂಭವಿರುವು ದರಿಂದ ಸಾವಿರಾರು ಲೋಡ್ ಮಣ್ಣು ಸುಮಾರು ಎರಡು ಎಕರೆಯಷ್ಟು ಪ್ರದೇಶ ದಲ್ಲಿ ನಿಂತಿದೆ. ಎಲ್ಲಿ ಮನೆಯಿತ್ತು? ಎಂಬ ಬಗ್ಗೆಯೇ ಸ್ಥಳೀಯರೇ ಸಂಶಯಪಡು ವಷ್ಟರ ಮಟ್ಟಿಗೆ ಆ ಪ್ರದೇಶ ಬದಲಾಗಿದೆ.

ಸ್ಥಳಕ್ಕೆ ಭಾರತೀಯ ಸೇನೆಯ ಸೈನಿಕರೂ ಆಗಮಿಸಿದ್ದು, ಕಾಲಿಟ್ಟರೆ ಮಂಡಿ ಯವರೆಗೂ ಹೂತುಕೊಳ್ಳುವ ಕೆಸರಿನ ನಡುವೆ ಸ್ಥಳೀಯರ ಸಹಕಾರದಿಂದ ಶೋಧ ಕಾರ್ಯ ಆರಂಭಿಸಿದ್ದಾರೆ.

ಇಂದು ಮಧ್ಯಾಹ್ನದ ವೇಳೆಗೆ ಉತ್ತಪ್ಪ ಅವರ ಮನೆಯೊಳಗಿದ್ದ ಸಣ್ಣಪೆಟ್ಟಿಗೆ ಗೋಚರವಾಗಿದ್ದು, ಅದರೊಳಗಿದ್ದ ಸಣ್ಣ ಪುಟ್ಟ ವಸ್ತುಗಳು ಲಭಿಸಿವೆ. ಯಾವ ಭಾಗ ದಲ್ಲಿ ಮನೆಯ ಅವಶೇಷಗಳಿವೆ ಎಂಬ ಕಲ್ಪನೆಯೂ ಇಲ್ಲದಂತಾಗಿದೆ.

Translate »