ಶ್ರಾವಣದ ಮುಸ್ಸಂಜೆಯಲ್ಲಿ ಮೈನವಿರೇಳಿಸಿದ ಶಾಸ್ತ್ರೀಯ ನೃತ್ಯ ಪ್ರದರ್ಶನ
ಮೈಸೂರು

ಶ್ರಾವಣದ ಮುಸ್ಸಂಜೆಯಲ್ಲಿ ಮೈನವಿರೇಳಿಸಿದ ಶಾಸ್ತ್ರೀಯ ನೃತ್ಯ ಪ್ರದರ್ಶನ

August 26, 2018

ಮೈಸೂರು: ಆರ್ಟಿಕ್ಯುಲೇಟ್ ನೃತ್ಯೋತ್ಸವ ಶಾಸ್ತ್ರೀಯವಾದ ನೃತ್ಯದ ಉತ್ಸವವಾಗಿರುತ್ತದೆ. ನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಇತ್ತೀಚೆಗೆ ಜರುಗಿದ 27ನೇ ಸರಣಿಯನ್ನು ನಮ್ಮೆಲ್ಲರನ್ನು ಅಗಲಿದ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಮತ್ತು ದಕ್ಷಿಣ ಭಾರತದಲ್ಲಿ ಸ್ವಾಭಾವಿಕವಾದ ಕಂಟಕ ಹಾಗೂ ಕಷ್ಟದಲ್ಲಿರುವವರಿಗೆ ಈ ಸಂಚಿಕೆ ಸಮರ್ಪಣೆಯಾಯಿತು.
ಹೃದಯಕ್ಕೆ ತಾಗುವ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೃತ್ಯೋತ್ಸವದಲ್ಲಿ ನಾಲ್ಕು ಮಂದಿ ಯುವ ಕಲಾವಿದರನ್ನು ಸಂಸ್ಥೆಯ ಮುಖ್ಯಸ್ಥರಾದ ಮೈಸೂರು ಬಿ.ನಾಗರಾಜ್‍ರವರು ಪರಿಚಯಿಸಿದರು

ವಿನ್ಸೆಂಟ್ ಪೌಲ್: ಇವರು ಭರತನಾಟ್ಯದ ಭಂಗಿಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದರು. ಇದರಲ್ಲಿ ಒಂದು ಅಭಿನಯ ಪ್ರಧಾನವಾದ ಶ್ರೀ ಕೃಷ್ಣ ಹಾಗೂ ಯಶೋದಳ ಬಗ್ಗೆಯದಾಗಿತ್ತು. ಮೊದಲನೆಯದಾಗಿ ವಿನಾಯಕನ ಸ್ಮರಣೆ (ಕೌತ್‍ವಾಮ್) ಹಾಗೂ ರಾಜರ ಪರಾಕ್ ಆಗಿತ್ತು. ಇದನ್ನು ಸಂಯೋಜಿಸಿದವರು ಮೈಸೂರು ಕೋರ್ಟ್ ನೃತ್ಯಗಾತಿಯಾದ ಶ್ರೀಮತಿ ವೆಂಕಟಲಕ್ಷ್ಮಮ್ಮದವರದಾಗಿತ್ತು. ಇದರ ಮೂಲಕವಾಗಿ ವಿನ್ಸೆಂಟ್‍ರವರು ಮೈಸೂರು ಭರತನಾಟ್ಯ ಸಂಪ್ರದಾಯ ವೈಭವವನ್ನು ಮರಳಿ ತಂದರು. ವಿನ್ಸೆಂಟ್‍ರವರು ತಮ್ಮ ಕಾರ್ಯಕ್ರಮವನ್ನು ಭಕ್ತನ ಹೃದಯದಲ್ಲಿ ನಾಟ್ಯವಾಡುವ ಶಿವನನ್ನು ತೋರಿಸುವ ನೃತ್ಯ ಮೂಲಕ ಮುಕ್ತಾಯಗೊಳಿಸಿದರು.

ರಾಖಿ ಕಾಮಿನಿ: ಈಕೆಯು ತನ್ನ ಕೂಚಿಪುಡಿ ನೃತ್ಯ ಪ್ರದರ್ಶನದಲ್ಲಿ ಎರಡು ಕೀರ್ತನೆಯನ್ನು ಮತ್ತು ಒಂದು ತಿಲ್ಲಾನವನ್ನು ಪ್ರದರ್ಶಿಸಿದರು. ಎರಡೂ ಕೀರ್ತನೆಗಳು ಸಂಸ್ಕøತದಲ್ಲಿದ್ದು, ಒಂದು ಹಂಸಧ್ವನಿ ಹಾಗೂ ಇನ್ನೊಂದು ರಾಗಮಾಲಿಕಾದಲ್ಲಿತ್ತು. ಮೊದಲನೆಯದು ಅಣ್ಣಮ್ಮಾಚಾರ್ಯರ ಕೃತಿಯಾಗಿದ್ದು, ಎರಡನೆಯದು ಬಳ್ಳಾರಿ ಸಹೋದರರದಾಗಿತ್ತು. ಮೊದಲನೆಯದು ಗುರುವಿಗೆ ಅರ್ಪಿತವಾಗಿದ್ದು, ಇದು ವೆಂಕಟೇಶ್ವರ ದೇವರಿಗೆ ಸಮರ್ಪಿಸುವುದಾಗಿತ್ತು. ಎರಡನೆಯದು ಶಿವನಿಗೆ ಕೇಂದ್ರೀಕೃತವಾದುದಾಗಿತ್ತು. ರಾಖಿಯವರು ತನ್ನ ಆಯ್ಕೆಯ ಪ್ರದರ್ಶನದಿಂದ ಸಂಜೆಯ ಮೆರುಗನ್ನು ಹಾಗೂ ಅಭಿನಂದನೆಯನ್ನು ತರುವುದರ ಮೂಲಕ ಅದ್ಭುತ ನೃತ್ಯ ಪ್ರದರ್ಶನವನ್ನು ಪ್ರದರ್ಶಿಸಿದರು.

ಸಹನಾ ಆರ್.ಮೈಯಾ: ಇವರು ಎರಡು ಒಡಿಸ್ಸಿ ನೃತ್ಯಗಳನ್ನು ಪ್ರದರ್ಶಿಸಿದರು. ಒಂದು ಮಾಲ್‍ಕೌನ್ಸ್ ರಾಗದ ಪಲ್ಲವಿಯಲ್ಲಿನ ಶುದ್ಧವಾದ ನೃತ್ಯಮತ್ತು ಎರಡನೆಯದು ಶ್ರೀ ಕೃಷ್ಣನ ಮೇಲಿನ ಪರಿಶುದ್ಧವಾದ ನೃತ್ಯಾಭಿನಯವಾಗಿತ್ತು. ಅಂದರೆ ಕೃಷ್ಣ, ರಾಧ ಮತ್ತು ಆಕೆಯ ಸಖಿಯರದಾಗಿತ್ತು. ಇದರಿಂದಾಗಿ ಕೋನಾರ್ಕ್ ದೇವಸ್ಥಾನದಲ್ಲಿ ಕೆತ್ತಿದ ಶಿಲಾಬಾಲಿಕೆಯರಿಗೆ ಜೀವ ಬಂದಂತೆ ಅನುಭೂತಿಯಾಯಿತು. ಎರಡನೇ ಭಾಗದಲ್ಲಿ ಸಹನಾರವರು ಶ್ರೀ ಕೃಷ್ಣ ಮತ್ತು ರಾಧೆಯನ್ನು ಒಂದುಗೂಡಿಸುವ ಸೇತುವೆಯಾದರು. ಶ್ರೀ ಕೃಷ್ಣನ ಹಾಗೂ ರಾಧೆಯ (ಕೋಪಗೊಂಡ) ಅಭಿನಯವನ್ನು ಅನೇಕ ವಿಧದಲ್ಲಿ ಹಾಗೂ ಚಲನೆಯ ಮೂಲಕ ತಮ್ಮ ಸಾತ್ವಿಕ ಅಭಿನಯದಿಂದ ನೃತ್ಯದ ಮೂಲಕ ಅಭಿನಯಿಸಿದರು.

ಪ್ರದ್ಯುಮ್ನ ಆಚಾರ್ಯ: ಇವರು ಭರತನಾಟ್ಯದಲ್ಲಿ ಗಣೇಶನ ಕೌತ್‍ವಮ್ ಹಾಗೂ ವರ್ಣಂ ರಾಮನ ಬಗ್ಗೆ ಪ್ರದರ್ಶಿಸಿದರು. ಗಣೇಶನ ಪ್ರಾರ್ಥನೆಯು ಶ್ರೀ ಮುತ್ತುಸ್ವಾಮಿ ದೀಕ್ಷಿತರ ರಚನೆ ಹಾಗೂ ವರ್ಣಂನಲ್ಲಿ ರಾಮನ ವೇದನೆಯ ಬಗ್ಗೆ ಪ್ರಸನ್ನಕುಮಾರ್‍ರವರು ಬರೆದು ರಚನೆ ಮಾಡಿರುತ್ತಾರೆ. ಪ್ರದ್ಯುಮ್ನರವರು ಸೀತೆಯು ಕಾಣೆಯಾದಾಗ ರಾಮನ ವೇದನೆ ಹಾಗೂ ನೋವನ್ನು ಬಹಳ ಸೊಗಸಾಗಿ ಅಭಿನಯಿಸಿದರು. ಅವನು ಹನುಮಂತನ ಆಗಮನದ ಬಗೆಗಿನ ಎದುರುನೋಡುವಿಕೆಯ ಬಗ್ಗೆ ಹಾಗೂ ಅವನು ತರುವ ಸೀತೆಯು ಕ್ಷೇಮವಾಗಿರುವ ಬಗೆಗಿನ ಸುದ್ದಿಯ ಬಗ್ಗೆ ಎದುರು ನೋಡುತ್ತಿರುತ್ತಾರೆ. ಇವುಗಳ ಬಗ್ಗೆ ಅದ್ಭುತವಾದ ಪ್ರದರ್ಶನವನ್ನು ಮಾಡಿದರು. ಅವರ ಭರತನಾಟ್ಯದ ಪಾದದ ಚಲನೆಯು ಪಾದರಸದಂತೆ ಇದ್ದು, ಇದರಿಂದಾಗಿ ಅವರು ಅತಿಯಾದ ಶಕ್ತಿ ಹಾಗೂ ಸಾಮಥ್ರ್ಯವನ್ನು ಇದರಲ್ಲಿ ಹೊಂದಿರುವುದನ್ನು ಸೂಚಿಸಿತು. ಇವರು ಪುರುಷ ನೃತ್ಯಪಟುಗಳಲ್ಲಿ ಹೊಸದಾಗಿ ಜನಿಸಿರುವ ಒಂದು ನಕ್ಷತ್ರದಂತಿದ್ದರು.

Translate »