ಮೈಸೂರಲ್ಲಿ ಕೆಪಿಎಲ್ ಪಂದ್ಯಾವಳಿ ಆರಂಭ.
ಮೈಸೂರು

ಮೈಸೂರಲ್ಲಿ ಕೆಪಿಎಲ್ ಪಂದ್ಯಾವಳಿ ಆರಂಭ.

August 26, 2018

ಮೈಸೂರು: ಒಂದೆಡೆ ಬ್ಯಾಟ್ಸ್‍ಮನ್-ಬೌಲರ್‍ಗಳ ಅಬ್ಬರ, ಮತ್ತೊಂದೆಡೆ ಕ್ರಿಕೆಟ್ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ. ಇದಕ್ಕೆ ವೇದಿಕೆಯಾಗಿದ್ದು ಗಂಗೋತ್ರಿ ಗ್ಲೈಡ್ಸ್ ಮೈದಾನ.ಮೈಸೂರಿನಲ್ಲಿ ಇಂದಿನಿಂದ ಆರಂಭ ವಾದ 7ನೇ ಆವೃತ್ತಿಯ ಕೆಪಿಎಲ್ ಪಂದ್ಯಾ ವಳಿಯಲ್ಲಿ ಬೆಳಗಾವಿ ಪ್ಯಾಂಥರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಭರ್ಜರಿ ಜಯ ಸಾಧಿಸಿದವು.
ಬೆಳಗಾವಿ ಪ್ಯಾಂಥರ್ಸ್‍ಗೆ ಜಯ: ತಂಡದ ಸಾಂಘಿಕ ಪ್ರದರ್ಶನದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ರ್ಸ್ ವಿರುದ್ಧ 22 ರನ್‍ಗಳ ಜಯ ಸಾಧಿಸಿದೆ.

ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯ ದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ಪ್ಯಾಂಥರ್ಸ್ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು.

ಬೆಳಗಾವಿ ಪ್ಯಾಂಥರ್ಸ್ ಪರ ಬ್ಯಾಟಿಂಗ್ ನಲ್ಲಿ ನಾಯಕ ಸ್ಟುವರ್ಟ್ ಬಿನ್ನಿ 31, ಸ್ಟಾಲಿನ್ ಹೂವರ್ 38, ಎಸ್.ರಕ್ಷಿತ್ 12, ಡಿ. ಅವಿ ನಾಶ್ 25, ಅಕ್ಷಯ್ ಬಲ್ಲಾಳ್ 9, ಹೆಚ್.ಎಸ್.ಶರತ್ 3 ಹಾಗೂ ಎಂ.ನಿಧೀಶ್ 17 ಮತ್ತು ಎಸ್.ಪ್ರಶಾಂತ್ 18 ರನ್ ಗಳಿಸಿ ಅಜೇಯರಾಗಿ ಉಳಿ ದರು. ಬಳ್ಳಾರಿ ಟಸ್ಕರ್ರ್ಸ್ ಪರ ಬೌಲಿಂಗ್ ನಲ್ಲಿ ಟಿ.ಪ್ರದೀಪ್, ರಿತೇಶ್ ಭಟ್ಕಳ್ ತಲಾ 2, ಅಕ್ಷಯ್, ಅಬ್ರಾರ್ ಖಾಜಿ ತಲಾ ಒಂದೊಂದು ವಿಕೆಟ್ ಪಡೆದರು.

158ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಬಳ್ಳಾರಿ ಟಸ್ಕರ್ಸ್ ಬೆಳಗಾವಿ ಪ್ಯಾಂಥರ್ಸ್ ಬೌಲರ್‍ಗಳ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿ 18.5 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 135 ರನ್ ಗಳಿಸಲಷ್ಟೇ ಶಕ್ತ ವಾಯಿತು. ಆ ಮೂಲಕ 22 ರನ್‍ಗಳ ಸೋಲು ಅನುಭವಿಸಿತು.

ಬಳ್ಳಾರಿ ಟಸ್ಕರ್ಸ್ ಪರ ಬ್ಯಾಟಿಂಗ್‍ನಲ್ಲಿ ರೋಹನ್ ಕದಮ್ 12, ಸಿ.ಎ.ಕಾರ್ತಿಕ್ 31, ದೇವ್‍ದತ್ ಪಡಿಕಲ್ 23, ಸಿ.ಎಂ. ಗೌತಮ್ 24, ಅಬ್ರಾರ್ ಖಾಜಿ 10, ಅಭಿನವ್ ಮನೋಹರ್ 10 ಗಳಿಸಿದರು. ಬೆಳಗಾವಿ ಪ್ಯಾಂಥರ್ಸ್ ಪರ ಬೌಲಿಂಗ್‍ನಲ್ಲಿ ಅವಿನಾಶ್ 3, ಸ್ಟುವರ್ಟ್ ಬಿನ್ನಿ, ಮೊಹಮ್ಮದ್ ನಿಯಾಜ್ ನಿಸಾರ್ ತಲಾ 2, ಹೆಚ್.ಎಸ್. ಶರತ್, ಶಾನ್ ಬಾಗ್ ಹೆಗ್ಡೆ, ಪ್ರಶಾಂತ್ ತಲಾ ಒಂದೊಂದು ವಿಕೆಟ್ ಉರುಳಿಸಿದರು. ಈ ವೇಳೆ ಬೆಳಗಾವಿ ಪ್ಯಾಂಥರ್ಸ್ ನಾಯಕ ಸ್ಟುವರ್ಟ್ ಬಿನ್ನಿಗೆ ಎಸ್ ಅಂಡ್ ಎಸ್ ಕಂಪನಿಯ ಕಾರ್ಬನ್ ಮೊಬೈಲ್ ಡಿಸ್ಟ್ರಿಬ್ಯೂಟರ್ ಬಿ.ಎಸ್.ಸತ್ಯನಾರಾಯಣ ಪಂದ್ಯ ಪುರುಷ ಪ್ರಶಸ್ತಿ ವಿತರಿಸಿದರು.
ಬೆಂಗಳೂರು ಬ್ಲಾಸ್ಟರ್ಸ್‍ಗೆ ರೋಚಕ ಜಯ: ಇಲ್ಲಿನ ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಶಿವಮೊಗ್ಗ ಲಯನ್ಸ್ ವಿರುದ್ಧ 2 ವಿಕೆಟ್‍ಗಳ ರೋಚಕ ಜಯ ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 146 ರನ್‍ಗಳ ಸಾಧಾರಣ ಮೊತ್ತ ದಾಖಲಿಸಿತು. ಶಿವಮೊಗ್ಗ ಲಯನ್ಸ್ ಪರ ನಿಹಾಲ್ ಉಲ್ಲಾಲ್ 34, ಕೆ.ರೋಹಿತ್ 36, ರಂಗಸನ್ ಜೊನಾಥನ್ 37, ನಾಯಕ ಅನಿರುದ್ಧ ಜೋಶಿ 28 ರನ್ ಗಳಿಸಿದರು. ಬೆಂಗಳೂರು ಪರ ಬೌಲಿಂಗ್‍ನಲ್ಲಿ ಅರ್ಶ ದೀಪ್ ಸಿಂಗ್ 2, ಆನಂದ್ ದೊಡ್ಡಮನಿ, ಮನೋಜ್ ಎಸ್. ಭಾಂಡೇಜ್, ಅಭಿ ಷೇಕ್ ಭಟ್, ಕೌಶಿಕ್ ತಲಾ ಒಂದೊಂದು ವಿಕೆಟ್ ಪಡೆದರು.
ಶಿವಮೊಗ್ಗ ಲಯನ್ಸ್ ನೀಡಿದ 147 ರನ್ ಗಳ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ ಪವನ್ ದೇಶಪಾಂಡೆ 34, ಭರತ್ ದೇವರಾಜ್ 38 ಹಾಗೂ ಅಭಿಷೇಕ್ ಭಟ್ 40 ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 19.1 ಓವರ್‍ಗಳಲ್ಲಿ 8 ವಿಕೆಟ್ ಕಳೆದು ಕೊಂಡು 2 ವಿಕೆಟ್‍ಗಳ ಗೆಲುವಿನ ಕೇಕೆ ಹಾಕಿತು. ಶಿವಮೊಗ್ಗ ಲಯನ್ಸ್ ಪರ ಬೌಲಿಂಗ್ ನಲ್ಲಿ ಆದಿತ್ಯ ಸೋಮಣ್ಣ 3, ಪೃಥ್ವಿ ಶೇಕಾವತ್ 2, ಹೊಯ್ಸಳ, ಕಿಶೋರ್ ಕಾಮತ್, ಅನಿರುದ್ಧ ಜೋಶಿ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು. ಬೆಂಗಳೂರು ಬ್ಲಾಸ್ಟರ್ಸ್ ತಂಡದ ಅಭಿಷೇಕ್ ಭಟ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಮಿಚೆಲ್ ಜಾನ್ಸನ್ ಆಕರ್ಷಣೆ: ಇಂದಿ ನಿಂದ ಮೈಸೂರಿನಲ್ಲಿ ಆರಂಭಗೊಂಡ ಕೆಪಿಎಲ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟ್ ಆಟಗಾರ ಹಾಗೂ ವೇಗದ ಬೌಲರ್ ಮಿಚೆÀಲ್ ಜಾನ್ಸನ್ ಕ್ರಿಕೆಟ್ ಅಭಿಮಾನಿ ಗಳ ಗಮನ ಸೆಳೆದರು. ಕೆಪಿಎಲ್ ಪಂದ್ಯಾ ವಳಿಯ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಿದ ಜಾನ್ಸನ್, ಮೈದಾನದ ಅಂಗಳ ದಲ್ಲಿ ನಿರ್ಮಿಸಿದ್ದ ಕಾಮೆಂಟ್ರಿ ಬಾಕ್ಸ್‍ನಲ್ಲಿ ಕುಳಿತು ಕಾಮೆಂಟ್ರಿ ನೀಡುವ ಮೂಲಕ ಆಟಗಾರರನ್ನು ಹುರಿದುಂಬಿಸಿದರು. ಜೊತೆಗೆ ಮೈದಾನದ ಹೊರ ಆವರಣದಲ್ಲಿ ಪ್ರೇಕ್ಷಕ ರೊಂದಿಗೆ ಸೆಲ್ಫಿಗೆ ಫೋಸ್ ನೀಡಿದರು.

Translate »