ಕೆಪಿಎಲ್: ಬಿಜಾಪುರ ಬುಲ್ಸ್‍ಗೆ ರೋಚಕ ಗೆಲುವು
ಮೈಸೂರು

ಕೆಪಿಎಲ್: ಬಿಜಾಪುರ ಬುಲ್ಸ್‍ಗೆ ರೋಚಕ ಗೆಲುವು

September 2, 2018

ಮೈಸೂರು:  ತೀವ್ರ ಕುತೂ ಹಲ ಕೆರಳಿಸಿದ್ದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಬಿಜಾಪುರ ಬುಲ್ಸ್ 2 ರನ್‍ಗಳ ರೋಚಕ ಜಯ ಸಾಧಿಸಿದೆ.

ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಶನಿವಾರÀ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ ಬುಲ್ಸ್ ನಾಯಕ ಭರತ್ ಚಿಪ್ಲಿ ಅವರ ಅರ್ಧ ಶತಕದ ನೆರವಿನಿಂದ ನಿಗ ದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದು ಕೊಂಡು 167 ರನ್ ಗಳಿಸಿತು. ಇನಿಂಗ್ಸ್‍ನ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ದರೂ, ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ಭರತ್ ಚಿಪ್ಲಿ 6 ಬೌಂಡರಿ, 3 ಸಿಕ್ಸರ್ ಒಳ ಗೊಂಡ 63 ರನ್ ಗಳಿಸಿ ಔಟಾದರು. ಇನಿಂಗ್ಸ್‍ನ ಕೊನೆಯಲ್ಲಿ ಅಬ್ಬರಿಸಿದ ಎಂ.ಕೌನಾಯನ್ ಅಬ್ಬಾಸ್ 24 ಎಸೆತಗಳಲ್ಲಿ 4 ಸಿಕ್ಸರ್ ಬಾರಿಸಿ 42 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಇವರಿಗೆ ಎಸ್.ಎನ್.ರಾಜು 28 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಉಳಿದಂತೆ ಕೆ.ಎಲ್.ಶ್ರಿಜಿತ್ 17, ಎಂ.ಜಿ.ನವೀನ್ 9 ರನ್ ಗಳಿಸಿದರು. ಮೈಸೂರು ವಾರಿಯರ್ಸ್ ಪರ ಬೌಲಿಂಗ್‍ನಲ್ಲಿ ಎನ್.ಪಿ. ಭರೇತ್, ಪಿ.ಎ.ಜೈನ್ ತಲಾ 2, ಅಮಿತ್ ವರ್ಮಾ ಒಂದು ವಿಕೆಟ್ ಪಡೆದರು.

ಬಿಜಾಪುರ ಬುಲ್ಸ್ ನೀಡಿದ 168 ರನ್‍ಗಳ ಗುರಿ ಬೆನ್ನತ್ತಿದ ಮೈಸೂರು ವಾರಿಯರ್ಸ್‍ಗೆ ಆರಂಭಿಕರಾದ ಅರ್ಜುನ್ ಹೊಯ್ಸಳ ಹಾಗೂ ರಾಜು ಭಟ್ಕಲ್ ಉತ್ತಮ ಆರಂಭ ಒದಗಿಸಿ ದರು. ತಂಡದ ಮೊತ್ತ 43ರನ್ ಆಗಿದ್ದ ವೇಳೆ 21ರನ್ ಗಳಿಸಿದ ಅರ್ಜುನ್ ಹೊಯ್ಸಳ ವಿಕೆಟ್ ಒಪ್ಪಿಸಿದರು. ಅವರ ಹಿಂದೆಯೇ 1 ರನ್ ಗಳಿ ಸಿದ ಅಮಿತ್ ವರ್ಮಾ ಪೆವಿಲಿಯನ್ ಸೇರಿ ಕೊಂಡರು. ಈ ವೇಳೆ ಇನಿಂಗ್ಸ್‍ನ ಆರಂಭ ದಿಂದಲೂ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡು ತ್ತಿದ್ದ ರಾಜು ಭಟ್ಕಲ್ 29ರನ್ ಗಳಿಸಿ ಔಟಾ ದರು. ಈ ವೇಳೆ ತಂಡದ ಮೊತ್ತ 91ರನ್ ಆಗಿತ್ತು. ನಂತರ ಬಂದ ಎಸ್.ಮ್ಯಾನೇಜರ್ 17 ಹಾಗೂ ಸಿದ್ದಾರ್ಥ 28ರನ್ ಗಳಿಸಿದರು. ಆದರೆ ಪಂದ್ಯ ಗೆಲ್ಲಲ್ಲು ಕೊನೆವರೆಗೂ ಹೋರಾಟ ನಡೆಸಿದ ಸುಚಿತ್ ಪ್ರಯತ್ನ ಫಲ ನೀಡಲಿಲ್ಲ. ಸುಚಿತ್ 34, ಹಾಗೂ ಭರೇತ್ 17ರನ್ ಅಜೇಯ ರಾಗಿ ಉಳಿದರು. ಅಂತಿಮವಾಗಿ ಮೈಸೂರು ವಾರಿಯರ್ಸ್ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 165ರನ್ ಗಳಿಸುವ ಮೂಲಕ 2ರನ್‍ಗಳ ಸೋಲು ಅನುಭವಿಸಿತು.

ಬಿಜಾಪುರ ಬುಲ್ಸ್ ಪರ ಬೌಲಿಂಗ್‍ನಲ್ಲಿ ಕೆ.ಸಿ. ಕಾರ್ಯಪ್ಪ 2, ಆರ್.ಜಿ.ಮೋರೆ, ಫರೂಕಿ, ಎಂ.ಜಿ. ನವೀನ್ ತಲಾ ಒಂದೊಂದು ವಿಕೆಟ್ ಪಡೆದರು. ಪಂದ್ಯದಲ್ಲಿ ಅಮೋಘ ಅರ್ಧ ಶತಕ ದಾಖಲಿ ಸಿದ ಭರತ್ ಚಿಪ್ಲಿ ಪಂದ್ಯ ಪುರುಷ ಪಡೆದರು.
ಹುಬ್ಬಳ್ಳಿ ಟೈಗರ್ಸ್‍ಗೆ ಜಯ: ಇಂದಿಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಅಭಿಶೇಖ್ ರೆಡ್ಡಿ ಅವರ ಅರ್ಧ ಶತಕ ಹಾಗೂ ಆರ್.ವಿನಯ್ ಕುಮಾರ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ 44ರನ್‍ಗಳ ಭರ್ಜರಿ ಜಯ ಸಾಧಿಸಿತು.

ಹುಬ್ಬಳ್ಳಿ ಟೈಗರ್ಸ್ ನೀಡಿದ 183ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಬೆಳಗಾವಿ ಪ್ಯಾಂಥರ್ಸ್ ಆರ್.ವಿನಯ್ ಕುಮಾರ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 19 ಓವರ್‍ಗಳಲ್ಲಿ 138ರನ್‍ಗಳಿಗೆ ಆಲೌಟ್ ಆಗುವ ಮೂಲಕ 44ರನ್‍ಗಳ ಸೋಲು ಅನುಭವಿಸಿತು. ಬೆಳಗಾವಿ ಪರ ನಿಧೀಶ್ 23, ಎಸ್.ರಕ್ಷಿತ್ 20, ಹೂವರ್ 16, ಅವಿನಾಶ್ 19ರನ್ ಗಳಿಸಿದರು. ಹುಬ್ಬಳ್ಳಿ ಟೈಗರ್ಸ್ ಪರ ಬೌಲಿಂಗ್‍ನಲ್ಲಿ ಆರ್.ವಿನಯ್ ಕುಮಾರ್ 4, ಮಹೇಶ್ ಪಟೇಲ್ 2, ಕ್ರಾಂತಿ ಕುಮಾರ್, ಐ.ಜಿ.ಅನಿಲ್, ಎಂ.ಬಿ.ದರ್ಶನ್ ತಲಾ ಒಂದೊಂದು ವಿಕೆಟ್ ಪಡೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಹುಬ್ಬಳ್ಳಿ ಟೈಗರ್ಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಅಭಿಶೇಖ್ ರೆಡ್ಡಿ 74 ರನ್ ಗಳಿಸುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣ ರಾದರು. ಉಳಿದಂತೆ ಪಿ.ದುಬೆ 40, ನಾಯಕ ಆರ್. ವಿನಯ್ ಕುಮಾರ್ 21, ದರ್ಶನ್ 18, ಎಸ್. ಎನ್.ಗೌಡ 13ರನ್ ಗಳಿಸಿದರು. ಬೆಳಗಾವಿ ಪ್ಯಾಂಥರ್ಸ್ ಪರ ಬೌಲಿಂಗ್‍ನಲ್ಲಿ ನಿಯಾಸ್ ನಿಸಾರ್ 2, ಎಸ್.ಹೆಗಡೆ, ಡಿ.ಅವಿನಾಶ್ ತಲಾ ಒಂದೊಂದು ವಿಕೆಟ್ ಪಡೆದರು.

Translate »