ಕೆ.ಆರ್.ನಗರ ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರ ಪ್ರತಿಭಟನೆ
ಮೈಸೂರು

ಕೆ.ಆರ್.ನಗರ ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರ ಪ್ರತಿಭಟನೆ

September 2, 2018

ಕೆ.ಆರ್.ನಗರ: ಸುದೀರ್ಘ 18 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ನಂತರ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದ ಮಾಜಿ ಸೈನಿಕನಿಗೆ ಸರ್ಕಲ್ ಇನ್ಸ್‍ಪೆಕ್ಟರ್ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮ ಸ್ಥರು ಕೆ.ಆರ್.ನಗರ ಪೊಲೀಸ್ ಠಾಣೆ ಮುಂದೆ ಇಂದು ಪ್ರತಿಭಟನೆ ನಡೆಸಿದರು.

ಸೇನೆಯಿಂದ ನಿವೃತ್ತಿ ಹೊಂದಿ ಸ್ವಗ್ರಾಮ ತಾಲೂಕಿನ ಚಿಕ್ಕವಡ್ಡರಗುಡಿಗೆ ಹಿಂತಿರುಗುತ್ತಿದ್ದ ಮಾಜಿ ಸೈನಿಕ ಸಿ.ಎಂ.ಶ್ರೀಧರ್ ಅವ ರನ್ನು ಗ್ರಾಮಸ್ಥರು ಕೆ.ಆರ್.ನಗರ ಪಟ್ಟಣದಲ್ಲಿ ಬರಮಾಡಿಕೊಂಡು ಮೆರವಣಿಗೆ ಮೂಲಕ ಕರೆದೊಯ್ಯುತ್ತಿದ್ದರು. ಈ ವೇಳೆ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಕೆ. ರಘು, ಮೆರವಣಿಗೆಯನ್ನು ತಡೆದು, ಮಾಜಿ ಸೈನಿಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅವಾಚ್ಯ ಪದಗಳಿಂದ ನಿಂದಿಸಿದರು ಎಂದು ಆರೋಪಿಸಲಾಗಿದೆ.

ಸರ್ಕಲ್ ಇನ್ಸ್‍ಪೆಕ್ಟರ್ ವರ್ತನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಸರ್ಕಲ್ ಇನ್ಸ್ ಪೆಕ್ಟರ್ ರಘು ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ದೇಶ ಕ್ಕಾಗಿ ಪ್ರಾಣವನ್ನು ಒತ್ತೆಯಿಟ್ಟು 18 ವರ್ಷ ಕಾಲ ದುಡಿದ ವೀರ ಯೋಧನನ್ನು ಅವ ಮಾನಿಸಲಾಗಿದೆ ಎಂದು ಪ್ರತಿಭಟನಾ ಕಾರರು ದೂರಿದರು.

ವೀರ ಯೋಧನಿಗೆ ಮಾಡಿದ ಅಪಮಾನ ದೇಶಕ್ಕೇ ಮಾಡಿದ ಅಪಮಾನವಾಗಿದ್ದು, ಜಿಲ್ಲಾ ಎಸ್ಪಿ ಅವರು ಸ್ಥಳಕ್ಕೆ ಆಗಮಿಸಿ, ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಕೆ. ರಘು ಅವರನ್ನು ತಕ್ಷಣವೇ ಅಮಾನತುಪಡಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಎಸ್ಪಿ ಅಮಿತ್ ಸಿಂಗ್ ಅವರು ಕೆ.ಆರ್. ನಗರ ಪೊಲೀಸ್ ಠಾಣೆಗೆ ಆಗಮಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ವೀರ ಯೋಧನನ್ನು ಗೌರವದಿಂದ ಬರ ಮಾಡಿಕೊಳ್ಳುತ್ತಿದ್ದ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ರಘು ಅವರು ಮೆರವಣಿಗೆಯನ್ನು ತಡೆದು ವೀರ ಯೋಧನನ್ನು ಮಾತ್ರವಲ್ಲದೇ, ಅವರನ್ನು ಗೌರವಪೂರ್ವಕವಾಗಿ ಕರೆದೊ ಯ್ಯುತ್ತಿದ್ದ ಹಿರಿಯ ನಾಗರಿಕರನ್ನು ಏಕವಚನ ದಲ್ಲಿ ನಿಂದಿಸಿದ್ದಾರೆ. ಇಂತಹ ಅಧಿಕಾರಿ ಯಿಂದಾಗಿ ದಕ್ಷ ಅಧಿಕಾರಿಗಳಿಗೂ ಸಹ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಅವ ರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪ್ರತಿಭಟನಾಕಾರರ ಜೊತೆ ಮಾತನಾಡಿದ ಜಿಲ್ಲಾ ಎಸ್ಪಿ ಅಮಿತ್ ಸಿಂಗ್ ಅವರು, ಅನುಮತಿ ಪಡೆಯದೇ ಏಕಾ ಏಕಿ ಮೆರವಣಿಗೆ ನಡೆಸಿದ್ದರಿಂದ ಸರ್ಕಲ್ ಇನ್ಸ್‍ಪೆಕ್ಟರ್ ಪ್ರಶ್ನಿಸಿದ್ದಾರೆ. ಒಂದು ವೇಳೆ ಈ ಮೆರವಣಿಗೆ ಪೂರ್ವ ನಿಯೋಜಿತ ವಾಗಿದ್ದರೆ ಗ್ರಾಮಸ್ಥರಾದ ನೀವು ಅನುಮತಿ ಯನ್ನು ಪಡೆಯುತ್ತಿದ್ದೀರಿ. ಆದರೆ, ಯಾವುದೇ ಪೂರ್ವ ಯೋಜನೆಯಿಲ್ಲದೆ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಗೊಂದಲ ಉಂಟಾ ಗಿದೆ. ಪೊಲೀಸರಾದ ನಮಗೆ ದೇಶಕ್ಕಾಗಿ ದುಡಿ ಯುವ ಸೈನಿಕರ ಮೇಲೆ ಅಪಾರ ಗೌರವ ವಿದೆ. ಇನ್ಸ್‍ಪೆಕ್ಟರ್ ಅವರು ಉದ್ದೇಶಪೂರ್ವಕ ವಾಗಿ ತಪ್ಪೆಸಗಿಲ್ಲ ಎಂದು ಹೇಳಿದರಲ್ಲದೆ ಮಾಜಿ ಸೈನಿಕ ಸಿ.ಎಂ.ಶ್ರೀಧರ್ ಅವರಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ಮೂಲಕ ಗ್ರಾಮಸ್ಥರನ್ನು ಸಮಾ ಧಾನಪಡಿಸಿ ದರು. ನಂತರ ಗ್ರಾಮಸ್ಥರು ತಮ್ಮ ಪ್ರತಿ ಭಟನೆಯನ್ನು ಹಿಂತೆಗೆದುಕೊಂಡರು.

Translate »