ಕೆಪಿಎಲ್: ಬಿಜಾಪುರ ಬುಲ್ಸ್, ಬೆಂಗಳೂರು ಬ್ಲಾಸ್ಟರ್ಸ್‍ಗೆ ಭರ್ಜರಿ ಗೆಲುವು
ಮೈಸೂರು

ಕೆಪಿಎಲ್: ಬಿಜಾಪುರ ಬುಲ್ಸ್, ಬೆಂಗಳೂರು ಬ್ಲಾಸ್ಟರ್ಸ್‍ಗೆ ಭರ್ಜರಿ ಗೆಲುವು

September 3, 2018

ಮೈಸೂರು: ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಬಿಜಾಪುರ ಬುಲ್ಸ್ ಹಾಗೂ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ಭರ್ಜರಿ ಜಯ ಸಾಧಿಸಿದೆ.

ಬಿಜಾಪುರ ಬುಲ್ಸ್‍ಗೆ ಜಯ: ಕೆ.ಪಿ. ಅಪ್ಪಣ್ಣ ಮಾರಕ ಬೌಲಿಂಗ್ ದಾಳಿ ಹಾಗೂ ಎಂ.ಕೌನಾಯನ್ ಅಬ್ಬಾಸ್ ಅವರ ಅರ್ಧ ಶತಕದ ನೆರವಿನಿಂದ ಶಿವಮೊಗ್ಗ ಲಯನ್ಸ್ ವಿರುದ್ಧ ಬಿಜಾಪುರ ಬುಲ್ಸ್ ತಂಡ 2 ವಿಕೆಟ್‍ಗಳ ಜಯ ಸಾಧಿಸಿದೆ.
ಶಿವಮೊಗ್ಗ ಲಯನ್ಸ್ ನೀಡಿದ 141 ರನ್‍ಗಳ ಗುರಿ ಬೆನ್ನತ್ತಿದ ಬಿಜಾಪುರ ಬುಲ್ಸ್ ಇನ್ನಿಂಗ್ಸ್‍ನ ಆರಂಭದಲ್ಲೇ ನವೀನ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಂತರ ಜೊತೆಯಾದ ಭರತ್ ಚಿಪ್ಲಿ ಹಾಗೂ ಅಬ್ಬಾಸ್ 62ರನ್ ಜೊತೆಯಾಟ ವಾಡುವ ಮೂಲಕ ತಂಡಕ್ಕೆ ಆಸರೆಯಾ ದರು. ಈ ವೇಳೆ 18 ಎಸೆತಗಳಲ್ಲಿ 8 ಬೌಂಡರಿ 1ಸಿಕ್ಸರ್ ಒಳಗೊಂಡ ಸ್ಫೋಟಕ 43ರನ್ ಗಳಿಸಿದ್ದ ಚಿಪ್ಲಿ ಔಟಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದು ಬದಿಯಲ್ಲಿ ಕ್ರೀಸ್‍ನಲ್ಲಿ ನಿಂತು ತಂಡವನ್ನು ಆದರಿಸಿದ ಅಬ್ಬಾಸ್ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಅದು ಹೆಚ್ಚು ಹೊತ್ತು ಉಳಿಯಲಿಲ್ಲ. 45 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಒಳಗೊಂಡ 51 ರನ್ ಗಳಿಸಿದ್ದ ವೇಳೆ ಅಬ್ಬಾಸ್ ವಿಕೆಟ್ ಒಪ್ಪಿಸಿ ದರು. ಉಳಿದಂತೆ ಸುನೀಲ್ ರಾಜು 18, ಶಿಶಿರ್ ಭವಾನೆ 7, ಕೆ.ಎನ್.ಭರತ್ 6, ಕೆ.ಸಿ.ಕಾರ್ಯಪ್ಪ 6, ಭವೇಶ್ ಗುಲೇಚ 5, ಕೆ.ಎ.ಶ್ರೀಜಿತ್ 3 ರನ್ ಗಳಿಸಿದರು. ಅಂತಿಮವಾಗಿ ಬಿಜಾಪುರ ಬುಲ್ಸ್ 19.5 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸುವ ಮೂಲಕ 2 ವಿಕೆಟ್‍ಗಳ ಗೆಲುವು ಸಾಧಿಸಿತು. ಶಿವಮೊಗ್ಗ ಲಯನ್ಸ್ ಪರ ಬೌಲಿಂಗ್‍ನಲ್ಲಿ ಎ.ಟಿ.ಸೋಮಣ್ಣ, ಅನಿರುದ್ಧ ಜೋಶಿ ತಲಾ 2, ಪೃಥ್ವಿ ಶೇಖವತ್, ಸಯ್ಯದ್ ಖಾಜಾ ಮೊಯಿನುದ್ದೀನ್, ಹರೀಶ್ ಕುಮಾರ್, ಅಭಿಲಾಶ್ ಶೆಟ್ಟಿ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ ಕೆ.ಪಿ.ಅಪ್ಪಣ್ಣ ಸ್ಪಿನ್ ಮೋಡಿಗೆ ತತ್ತರಿಸಿ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತ್ತು. ಶಿವಮೊಗ್ಗ ಲಯನ್ಸ್ ಪರ ಅಧೋಕ್ಷ ಹೆಗಡೆ 42, ಆದಿತ್ಯ ಸೋಮಣ್ಣ 37, ಬಿ.ಆರ್.ಶರತ್ 23, ಕೆ.ರೋಹಿತ್ 22, ಎನ್.ಉಲ್ಲಾ 11 ರನ್ ಗಳಿಸಿದರು.
ಬಿಜಾಪುರ ಬುಲ್ಸ್ ಪರ ಬೌಲಿಂಗ್ ನಲ್ಲಿ ಕೆ.ಪಿ.ಅಪ್ಪಣ್ಣ 4, ಭವೇಶ್ ಗುಲೇಚ 3, ಸೂರಜ್ ಕಾಮತ್, ಎಂ.ಜಿ. ನವೀನ್ ತಲಾ ಒಂದೊಂದು ವಿಕೆಟ್ ಪಡೆದು ಕೊಂಡರು. ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕೆ.ಪಿ.ಅಪ್ಪಣ್ಣ ಪಂದ್ಯಪುರುಷ ಪ್ರಶಸ್ತಿ ಪಡೆದರು.

ಬೆಂಗಳೂರು ಬ್ಲಾಸ್ಟರ್ಸ್‍ಗೆ ಜಯ: ಇಂದಿಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಬೌಲರ್ ಗಳ ಉತ್ತಮ ಪ್ರದರ್ಶನದ ನೆರವಿನಿಂದ ಮೈಸೂರು ವಾರಿಯರ್ಸ್ ವಿರುದ್ಧ ಬೆಂಗ ಳೂರು ಬ್ಲಾಸ್ಟರ್ಸ್ 2 ರನ್‍ಗಳ ಅಮೋಘ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.

ಬೆಂಗಳೂರು ಬ್ಲಾಸ್ಟರ್ಸ್ ಪರ ನಾಯಕ ರಾಬಿನ್ ಉತ್ತಪ್ಪ 28 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಒಳಗೊಂಡ 34 ರನ್ ಗಳಿಸಿ ಔಟಾದರು. ಆದರೆ ನಂತರ ಜೊತೆ ಯಾದ ಪವನ್ ದೇಶಪಾಂಡೆ ಹಾಗೂ ವಿನೀತ್ ಯಾದವ್ 87ರನ್ ಜೊತೆಯಾಟವಾಡುವ ಮೂಲಕ ತಂಡ ಗೌರವಾನ್ವಿತ ಮೊತ್ತ ದಾಖ ಲಿಸಲು ನೆರವಾದರು. 54 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಒಳಗೊಂಡ 76 ರನ್‍ಗಳಿಸಿದ ಪವನ್ ದೇಶಪಾಂಡೆ ಹಾಗೂ 30 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 30 ರನ್ ಗಳಿಸಿದ ವಿನೀತ್ ಯಾದವ್ ಅಜೇಯರಾಗುಳಿದರು. ಮೈಸೂರು ವಾರಿಯರ್ಸ್ ಪರ ಬೌಲಿಂಗ್‍ನಲ್ಲಿ ಎನ್.ಪಿ. ಭರತ್ 2, ಪ್ರತೀಕ್ ಜೈನ್, ಅಮಿತ್ ವರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

ಬೆಂಗಳೂರು ಬ್ಲಾಸ್ಟರ್ಸ್ ನೀಡಿದ 149 ರನ್ ಗುರಿ ಬೆನ್ನತ್ತಿದ ಮೈಸೂರು ವಾರಿಯರ್ಸ್ ತಂಡದ ಪರ ಬ್ಯಾಟಿಂಗ್‍ನಲ್ಲಿ ಶ್ರೀನಿವಾಸ್ ಶರತ್ 37, ಎಸ್.ಪಿ.ಮಂಜುನಾಥ್ 34 ರನ್ ಗಳಿಸಿದರು. ಉಳಿದಂತೆ ಜಗದೀಶ್ ಸುಚಿತ್ 17, ಎನ್.ಪಿ.ಭರತ್ 12, ಅಮಿತ್ ವರ್ಮಾ 11 ರನ್ ಗಳಿಸಿದರು. ಅಂತಿಮ ವಾಗಿ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ, 2 ರನ್‍ಗಳಿಂದ ಸೋಲು ಅನುಭವಿಸಿತು.

ಬೆಂಗಳೂರು ಬ್ಲಾಸ್ಟರ್ಸ್ ಪರ ಬೌಲಿಂಗ್ ನಲ್ಲಿ ಅಭಿಷೇಕ್ ಭಟ್, ಮೋಹನ್ ರಾಜು, ಶರಣ್‍ಗೌಡ, ಆನಂದ್ ದೊಡ್ಡಮನಿ ತಲಾ 2, ಶ್ರೇಯಸ್ ಗೋಪಾಲ್ ಒಂದು ವಿಕೆಟ್ ಪಡೆದುಕೊಂಡರು. ಪವನ್ ದೇಶಪಂಡೆ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

Translate »