ಬಿಜಾಪುರ್ ಬುಲ್ಸ್ ಕೆಪಿಎಲ್ ಚಾಂಪಿಯನ್ :ಬೆಂಗಳೂರು ಬ್ಲಾಸ್ಟರ್ಸ್ ರನ್ನರ್‍ಅಪ್, ಭರತ್ ಚಿಪ್ಲಿ ಸರಣಿ ಶ್ರೇಷ್ಠ
ಮೈಸೂರು

ಬಿಜಾಪುರ್ ಬುಲ್ಸ್ ಕೆಪಿಎಲ್ ಚಾಂಪಿಯನ್ :ಬೆಂಗಳೂರು ಬ್ಲಾಸ್ಟರ್ಸ್ ರನ್ನರ್‍ಅಪ್, ಭರತ್ ಚಿಪ್ಲಿ ಸರಣಿ ಶ್ರೇಷ್ಠ

September 7, 2018

ಮೈಸೂರು:  7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಚಾಂಪಿಯನ್ ಆಗಿ ಬಿಜಾಪುರ್ ಬುಲ್ಸ್ ಹೊರ ಹೊಮ್ಮಿದೆ. ಈ ಮೂಲಕ 10 ಲಕ್ಷ ರೂ. ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ತಂಡದ ಉತ್ತಮ ಪ್ರದರ್ಶನದ ನೆರವಿನಿಂದ ಬಿಜಾಪುರ್ ಬುಲ್ಸ್ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ವಿಕೆಟ್‍ಗಳ ಗೆಲುವು ದಾಖಲಿಸಿ ಕೆಪಿಎಲ್ ಕಿರೀಟಕ್ಕೆ ಮುತ್ತಿಕ್ಕಿದರೇ, ಬೆಂಗಳೂರು ಬ್ಲಾಸ್ಟರ್ಸ್ ರನ್ನರ್‍ಅಪ್‍ಗೆ ತೃಪ್ತಿ ಪಟ್ಟುಕೊಂಡಿತು. ಈ ಮೂಲಕ ಈ ಸಾಲಿನ ಟೂರ್ನಿಗೆ ತೆರೆಬಿದ್ದಿದೆ.

ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ನೀಡಿದ 101 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಬಿಜಾಪುರ ಬುಲ್ಸ್‍ಗೆ ಎಂ.ಜಿ.ನವೀನ್ ಮತ್ತು ನಾಯಕ ಭರತ್ ಚಿಪ್ಲಿ ಜೋಡಿ 47ರನ್‍ಗಳ ಜೊತೆ ಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ ಈ ವೇಳೆ 19ರನ್ ಗಳಿಸಿದ್ದ ಭರತ್ ಚಿಪ್ಲಿ ಶ್ರೇಯಸ್ ಗೋಪಾಲ್ ಬೌಲಿಂಗ್‍ನಲ್ಲಿ ಬೋಲ್ಡ್ ಆಗಿ ವಿಕೆಟ್ ಒಪ್ಪಿಸಿದರು. ನಂತರ ಎಂ.ಜಿ.ನವೀನ್ ಕೂಡ ತಂಡದ ಮೊತ್ತ 72ರನ್ ಆಗಿದ್ದ ವೇಳೆ 31ಎಸೆತ ಗಳಲ್ಲಿ 5 ಬೌಂಡರಿ, 2ಸಿಕ್ಸರ್ ಒಳಗೊಂಡ 43ರನ್ ಸಿಡಿಸಿ ಭಾಂಡೇಜ್ ಬೌಲಿಂಗ್‍ನಲ್ಲಿ ಪವನ್‍ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಶ್ರುಜಿತ್ 7ರನ್ ಗಳಿಸಿ ಔಟಾದರು. ಎಂ.ಕೌನಿಯನ್ ಅಬ್ಬಾಸ್ 15 ಹಾಗೂ ಕೆ.ಎನ್. ಭರೇತ್ 7 ಎಸೆತಗಳಲ್ಲಿ 1 ಸಿಕ್ಸರ್, 3ಬೌಂಡರಿ ಒಳಗೊಂಡ 21 ರನ್ ಗಳಿಸಿ ಅಜೇಯರಾಗುಳಿದರು.

ಅಂತಿಮವಾಗಿ ಬಿಜಾಪುರ ಬುಲ್ಸ್ 13.5 ಓವರು ಗಳಲ್ಲಿ 3 ವಿಕೆಟ್ ಕಳೆದುಕೊಂಡು 106 ರನ್‍ಗಳಿಸುವ ಮೂಲಕ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಕೆಪಿಎಲ್ 7ನೇ ಆವೃತ್ತಿಯ ಚಾಂಪಿಯನ್ ಆಯಿತು. ಬೆಂಗಳೂರು ಬ್ಲಾಸ್ಟರ್ಸ್ ಪರ ಬೌಲಿಂಗ್‍ನಲ್ಲಿ ವಿ.ಕೌಶಿಕ್, ಎಸ್. ಗೋಪಾಲ್, ಎಂ.ಬಾಂಡೇಜ್ ತಲಾ ಒಂದೊಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ವಿಲಿಯಂ ಕೇವಲ 1 ರನ್ ಗಳಿಸಿ ಔಟಾದರು. ನಂತರ ಬಂದ ರಾಬಿನ್ ಉತ್ತಪ್ಪ ಕೂಡ ಅಬ್ಬರದ ಬ್ಯಾಟಿಂಗ್ ನಡೆಸದೇ ಕೇವಲ 10 ರನ್ ಗಳಿಸಿ ಔಟಾಗುವ ಮೂಲಕ ಅಭಿಮಾನಿ ಗಳಿಗೆ ನಿರಾಸೆ ಮೂಡಿಸಿದರು. ಆದರೆ ಭಾಂಡೇಜ್ 18, ಆರ್ಶದೀಪ್ ಸಿಂಗ್ 14 ರನ್ ಗಳಿಸಿ ಭರವಸೆ ಮೂಡಿಸಿದರಾದರೂ, ಅವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಅವರೂ ಸಹ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.

ಬಿಜಾಪುರ ಬುಲ್ಸ್ ತಂಡಕ್ಕೆ 10 ಲಕ್ಷ ರೂ. ನಗದು ಮತ್ತು ಟ್ರೋಫಿ ಹಾಗೂ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ 5 ಲಕ್ಷ ರೂ. ನಗದು ಮತ್ತು ಟ್ರೋಫಿಯನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ವಿತರಿಸಿದರು.

ಅಂತಿಮವಾಗಿ 22ರನ್ ಗಳಿಸಿದ್ದ ಪವನ್‍ಗೆ ಉಳಿದ ಬ್ಯಾಟ್ಸ್‍ಮನ್‍ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಉಳಿದ ಬ್ಯಾಟ್ಸ್‍ಮನ್‍ಗಳು ಎರಡಂಕಿ ಗಳಿಸಲು ಸಾಧ್ಯವಾಗದೇ ಪೆವಿಲಿಯನ್ ಪರೇಡ್ ನಡೆಸಿದರು. ಇಂದಿನ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಪರ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣುತ್ತಿತ್ತು. ಅಂತಿಮವಾಗಿ ಬೆಂಗಳೂರು ಬ್ಲಾಸ್ಟರ್ಸ್ ನಿಗದಿತ 20 ಓವರುಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 101ರನ್ ಗಳಿಸಲಷ್ಟೇ ಶಕ್ತವಾಗಿ 7 ವಿಕೆಟ್‍ಗಳಿಂದ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ರನ್ನರ್ ಅಪ್‍ಗೆ ತೃಪ್ತಿ ಪಟ್ಟುಕೊಂಡಿತು. ಅಲ್ಲದೇ ಈ ಮೂಲಕ 5 ಲಕ್ಷ ರೂ. ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಬಿಜಾಪುರ್ ಬುಲ್ಸ್ ಪರ ಬೌಲಿಂಗ್‍ನಲ್ಲಿ ಕೆ.ಪಿ.ಅಪ್ಪಣ್ಣ 3, ಬಿ.ಗುಲೇಚ, ಎಂ.ಜಿ.ನವೀನ್ ತಲಾ 2, ಕೆ.ಸಿ. ಕಾರ್ಯಪ್ಪ ಒಂದು ವಿಕೆಟ್ ಉರುಳಿಸಿದರು.

ಪಂದ್ಯ ನಂತರ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಕೆಪಿಎಲ್ 7ನೇ ಆವೃತ್ತಿಯ ಚಾಂಪಿಯನ್ ಬಿಜಾಪುರ ಬುಲ್ಸ್ ತಂಡಕ್ಕೆ 10 ಲಕ್ಷ ರೂ. ನಗದು ಮತ್ತು ಟ್ರೋಫಿ ಹಾಗೂ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ 5 ಲಕ್ಷ ರೂ. ನಗದು ಮತ್ತು ಟ್ರೋಫಿಯನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ವಿತರಿಸಿದರು.

ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭರತ್ ಚಿಪ್ಲಿ ಅವರಿಗೆ ‘ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಅವರು ಸರಣಿ ಪುರುಷೋತ್ತಮ ಪ್ರಶಸ್ತಿ ನೀಡಿದರು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ನವೀನ್ ಪಂದ್ಯಪುರುಷ ಪ್ರಶಸ್ತಿ ಪಡೆದರು. ಬಿಜಾಪುರ್ ಬುಲ್ಸ್ ನಾಯಕ ಭರತ್ ಚಿಪ್ಲಿ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಹಾಗೂ ಬಳ್ಳಾರಿ ಟಸ್ಕರ್ಸ್‍ನ ಮಹೇಶ್ ಪಟೇಲ್ ಹೆಚ್ಚು ವಿಕೆಟ್ ಪಡೆದ ಆಟಗಾರ ಪ್ರಶಸ್ತಿ ಪಡೆದರು.

ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭರತ್ ಚಿಪ್ಲಿ ಅವರಿಗೆ ‘ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಅವರು ಸರಣಿ ಪುರುಷೋತ್ತಮ ಪ್ರಶಸ್ತಿ ನೀಡಿದರು.

ಈ ವೇಳೆ ಕೆಪಿಎಲ್ ಬ್ರ್ಯಾಂಡ್ ಅಂಬಾ ಸಿಡರ್ ರಾಗಿಣಿ ದ್ವಿವೇದಿ, ಕೆಎಸ್ ಸಿಎ ಅಧ್ಯಕ್ಷ ಸಂಜಯ್ ದೇಸಾಯ್, ಕೆಎಸ್ ಸಿಎ ಕಾರ್ಯದರ್ಶಿ ಸುಧಾಕರ್ ರಾವ್, ಕೆಎಸ್‍ಸಿಎ ವಕ್ತಾರ ವಿನಯ್ ಮೃತ್ಯುಂಜಯ, ವಲಯ ಸಂಯೋಜಕ ಬಾಲ ಚಂದರ್, ಮಾಜಿ ಕ್ರಿಕೆಟಿಗರಾದ ಜಿ.ಆರ್.ವಿಶ್ವನಾಥ್, ಅಜರುದ್ದೀನ್ ಉಪಸ್ಥಿತರಿದ್ದರು.

ಅಭಿಮಾನಿಗಳಿಗೆ ನಿರಾಸೆ: ಇಂದಿಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರೀ ಪೈಪೋಟಿ ನಿರೀಕ್ಷೆಯೊಂದಿಗೆ ಮೈದಾನಕ್ಕೆ ಆಗಮಿಸಿದ್ದ ಕ್ರಿಕೆಟ್ ಅಭಿಮಾನಿಗಳು ನಿರಾಸೆ ಅನುಭವಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಕೇವಲ 101 ಗಳಿಗೆ ಆಲೌಟ್ ಆಗಿದ್ದು ಹಾಗೂ ಅದನ್ನು ಬಿಜಾಪುರ ಬುಲ್ಸ್ ಸರಾಗವಾಗಿ ಬೆನ್ನತ್ತಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.

ಕೈ ಕೊಟ್ಟ ಮೈಕ್: ಪಂದ್ಯ ಮುಕ್ತಾಯಗೊಂಡ ಬಳಿಕ ನಡೆದ ಬಹುಮಾನ ವಿತರಣೆ ವೇಳೆ ಗಣ್ಯರು ಮಾತನಾಡುತ್ತಿದ್ದಾಗ ಮೈಕ್ ಕೈ ಕೊಟ್ಟಿತು. ಇದಕ್ಕೆ ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Translate »