ಕರವೇ ತಾಲೂಕು ಅಧ್ಯಕ್ಷ ಸೇರಿ ಮೂವರ ವಿರುದ್ಧ ಜಾತಿ ನಿಂದನೆ ಕೇಸ್
ಕೊಡಗು

ಕರವೇ ತಾಲೂಕು ಅಧ್ಯಕ್ಷ ಸೇರಿ ಮೂವರ ವಿರುದ್ಧ ಜಾತಿ ನಿಂದನೆ ಕೇಸ್

September 9, 2018

ಸೋಮವಾರಪೇಟೆ: ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯ ಮೇಲಿನ ದೌರ್ಜನ್ಯ ಆರೋಪದ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್.ದೀಪಕ್, ಮಹಿಳಾ ಘಟಕದ ಅಧ್ಯಕ್ಷೆ ರೂಪ ಹಾಗು ಅವರ ಪತಿ ಸುರೇಶ್ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಪ್ರಕರಣ ಪಟ್ಟಣದ ಠಾಣೆಯಲ್ಲಿ ದಾಖಲಾಗಿದೆ.

ಮಳೆಹಾನಿ ಸಂತ್ರಸ್ತರಾದ ಮಸಗೋಡು ಗ್ರಾಮದ ಪರಿಶಿಷ್ಟಜಾತಿಗೆ ಸೇರಿದ ದಂಪತಿಗೆ, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ನೀಡಿದ ಹಣವನ್ನು ಕಸಿದುಕೊಂಡು, ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

3ರಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಸೋಮ ವಾರಪೇಟೆಗೆ ಆಗಮಿಸಿದ ಸಂದರ್ಭ ಈ ದಂಪತಿಗೆ ಕವರ್‍ನಲ್ಲಿ ಹಣವನ್ನು ನೀಡಿದ್ದರು. ಅದರಲ್ಲಿ ಒಂದು ಕವರ್‍ನ್ನು ಸಭೆ ನಡೆಯುತ್ತಿರುವಾಗಲೆ ಕಸಿದು ಕೊಳ್ಳಲಾಗಿತ್ತು. ಈ ವಿಷಯವನ್ನು ಕರವೇ ಪ್ರಮುಖರಿಗೆ ತಿಳಿಸಿದಾಗ, ಆರೋಪಿಗಳು ನನ್ನನ್ನು ರೂಂಗೆ ಕೂಡಿ ಹಾಕಿ ಬಟ್ಟೆ ಬಿಚ್ಚಿಸಿ ಪರಿಶೀಲಿಸಿದರು. ನಂತರ ಜಾತಿನಿಂದನೆ ಮಾಡಿದರು. ಅಂದೇ ರಾತ್ರಿ ಮಸಗೋಡು ರೂಪ, ಸುರೇಶ್ ದಂಪತಿಗಳು, ನನ್ನ ಮನೆಗೆ ಬಂದು ಬೆದರಿಕೆ ಹಾಕಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನನ್ವಯ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವೃತ್ತನಿರೀಕ್ಷಕ ನಂಜುಂಡೇಗೌಡ ತಿಳಿಸಿದ್ದಾರೆ.

Translate »