ಮೈಸೂರು

ಪುರಾಂತಕ ಅವರ ಅಂಕಣಗಳ ಗುಚ್ಛ `ಬದುಕೊಂದು ಯಾತ್ರೆ’ ಪುಸ್ತಕ ಬಿಡುಗಡೆ

October 29, 2018

ಎಡಪಂಥ, ಬಲಪಂಥಗಳು ಸಮಾಜಘಾತುಕ ಸಿದ್ಧಾಂತಗಳು
ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ಕಿಡಿನುಡಿ
ಮೈಸೂರು: ಎಡ- ಬಲ ಪಂಥೀಯ ಲೇಪವಿಲ್ಲದೆ ಬದುಕನ್ನು ಯಾತ್ರೆಯಾಗಿ ನೋಡಿರುವ ತ್ರಿಪುರಾಂತಕ ಅವರ ಅಂಕಣಗಳು ಓದುಗರ ಮನಸ್ಸಿಗೆ ನಾಟುತ್ತವೆ ಎಂದು ಹಿರಿಯ ಸಾಹಿತಿ ಮಲೆ ಯೂರು ಗುರುಸ್ವಾಮಿ ಅವರು ಬಣ್ಣಿಸಿದರು.

ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಶಾಲೆ ಸಭಾಂಗಣದಲ್ಲಿ ಅನನ್ಯ ಪುಸ್ತಕಗಳು ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, `ಮೈಸೂರು ಮಿತ್ರ’ದಲ್ಲಿ ಪ್ರಕಟವಾಗಿರುವ ಜಿ.ಎಲ್.ತ್ರಿಪುರಾಂತಕ ಅವರ ಅಂಕಣಗಳ ಗುಚ್ಛ `ಬದುಕೊಂದು ಯಾತ್ರೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಂಗ್ಲಿಷ್ ಲೇಖಕ ಜಾರ್ಜ್ ಆರ್ವೆಲ್ ಹೇಳಿದ ‘ಅಂಕಣ ಬರಹ ನೇರ, ಸರಳ, ಪಾರದರ್ಶಕ, ವಿಷಯಾ ಧಾರಿತ, ಸ್ಪಷ್ಟತೆ, ಪ್ರಾಮಾಣಿಕತೆಯಿಂದ ಕೂಡಿರಬೇಕು’ ಎಂದಿದ್ದಾರೆ. ಈ ಎಲ್ಲಾ ಅಂಶ ಗಳನ್ನು ತ್ರಿಪುರಾಂತಕ ಅವರ ಅಂಕಣಗಳು ಒಳಗೊಂಡಿದ್ದು, ಓದುಗರ ಮನಸ್ಸಿಗೆ ನಾಟುತ್ತವೆ ಎಂದು ಅಭಿಪ್ರಾಯಿಸಿದರು.

ಚಾಮುಂಡಿ ಆರಾಧಿಸುವವರು ಬಲ ಪಂಥೀಯರು, ಮಹಿಷಾ ದಸರಾ ಆಚರಿಸುವ ವರು ಎಡಪಂಥೀಯರು. ಬಲಪಂಥೀಯರು ಕಲೆ, ಸಂಸ್ಕøತಿಗೆ ಮೋಹಿತರಾದರೆ, ವಿಗ್ರಹ ಭಂಜಕರು ಎಡಪಂಥೀಯರು. ಹೀಗೆ ಇತ್ತೀಚೆಗೆ ಎಡಪಂಥ, ಬಲಪಂಥದ ವಾದ ಹೆಚ್ಚಾಗುತ್ತಿದೆ. ನನ್ನ ಪ್ರಕಾರ ಇವೆರಡೂ ಸಮಾಜಘಾತುಕ ಸಿದ್ಧಾಂತಗಳು. ಹೀಗೆ ಪ್ರತಿಪಾದಿಸುವವರು ರೋಗಿಷ್ಠ ಮನಸ್ಸುಳ್ಳ ವರು ಎಂದ ಅವರು, ಕನ್ನಡ ಪತ್ರಿಕೋದ್ಯಮ ದಲ್ಲಿ ಅಂಕಣ ಬರಹಕ್ಕೆ ಸುದೀರ್ಘ ಇತಿಹಾಸ ವಿಲ್ಲ. ನಾಲ್ಕು ದಶಕಗಳಿಂದೀಚೆಗೆ ಅಂಕಣ ಬರಹ ಪ್ರಚಾರಕ್ಕೆ ಬಂದಿದ್ದು, ಹಾ.ಮಾ. ನಾಯಕ, ವೈಕುಂಠರಾಜು, ಚಂಪಾ, ಪಾಟೀಲ ಪುಟ್ಟಪ್ಪ ಮತ್ತಿತರರು ಪ್ರಸಿದ್ಧರಾದರು. ಧರ್ಮ, ರಾಜಕೀಯ, ವಿಜ್ಞಾನ ಹೀಗೆ ವಿಷಯಾ ಧಾರಿತ ಅಂಕಣ ಬರೆಯುವವರು ಇತ್ತೀಚೆಗೆ ಹೆಚ್ಚಿದ್ದಾರೆ. ಈ ನಡುವೆ ಎಡ-ಬಲ ಎಂಬ ಧೋರಣೆ ಬಿಂಬಿಸುವ ಅಂಕಣಗಳೂ ಆರಂಭವಾಗಿವೆ ಎಂದು ವಿಷಾದಿಸಿದರು.

ಭೂಕೈಲಾಸ ಚಿತ್ರದ ‘ರಾಮನ ಅವ ತಾರ, ರಘುಕುಲ ಸೋಮನ ಅವತಾರ…’ ಹಾಡು ಜನ ಮಾನಸದಲ್ಲಿದೆ. ಆದರೆ ಅದನ್ನು ಬರೆದದ್ದು ಕು.ರಾ.ಸೀತಾರಾಮಶಾಸ್ತ್ರೀ ಅವ ರೆಂದು ಎಲ್ಲರಿಗೂ ತಿಳಿದಿಲ್ಲ. ‘ಮಧುರ ಮಧುರವೀ ಮಂಜುಳಗಾನ…’ ಗೀತೆ ನೆನಪಿದ್ದರೂ ರಚನೆಕಾರ ಹಿನಕಲ್ ಎಂ.ಎನ್. ಆರಾಧ್ಯ ಹೆಸರು e್ಞÁಪಕವಿಲ್ಲ. ಇತಿಹಾಸ ಗಮನಿಸಿದರೆ ಬರವಣಿಗೆ ಉಳಿಯುತ್ತದೆ, ಆದರೆ ಬರೆದವರು ಮಾತ್ರ ಮರೆಯಾಗುತ್ತಾರೆ ಎಂಬುದು ತಿಳಿಯುತ್ತದೆ. ಹಾಗೆಯೇ ತ್ರಿಪು ರಾಂತಕ ಅವರ ಹೆಸರು ಮರೆಯಾದರೂ ಅವರ ಸಾಹಿತ್ಯ ಅಳಿಯುವುದಿಲ್ಲ ಎಂದು ಮಲೆಯೂರು ಗುರುಸ್ವಾಮಿ ಹೇಳಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಸೋಷಿಯಲ್ ಮೀಡಿಯಾ ಆರ್ಭಟ ಹೆಚ್ಚಾಗಿರುವ ಸಂದರ್ಭದಲ್ಲೂ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆ ಯಾಗಿಲ್ಲ. ಗೂಗಲ್‍ನಲ್ಲಿ ಇ-ಪುಸ್ತಕಗಳ ಭರಾಟೆ ಹೆಚ್ಚಿದ್ದರೂ ಮೈಸೂರಿನಲ್ಲಿ ನಿತ್ಯ ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಹಾಗೆಯೇ ತ್ರಿಪುರಾಂತಕ ಅವರು ಆತ್ಮಸಾಕ್ಷಿಗೆ ಅನುಗುಣವಾಗಿ ಬರೆದಿರುವ ಅಂಕಣಗಳ ನ್ನೊಳಗೊಂಡ ಪುಸ್ತಕ ಬಿಡುಗಡೆಯಾ ಗಿರುವುದು ಸಂತಸ ತಂದಿದೆ ಎಂದರು.
ಸುತ್ತೂರು ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಜೆಎಸ್‍ಎಸ್ ಮಹಾ ವಿದ್ಯಾಪೀಠದ ನಿರ್ದೇಶಕ(ಗ್ರಾಮೀಣಾ ಭಿವೃದ್ಧಿ) ಡಾ.ಎಂ. ಮಹದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಜಿ.ಎಲ್. ತ್ರಿಪುರಾಂತಕ, ಪ್ರಕಾಶಕ ಡಿ.ಎನ್.ಲೋಕಪ್ಪ ಮತ್ತಿತರರು ಉಪಸ್ಥಿತರಿದ್ದರು.

Translate »