ಸಾಲ ಮನ್ನಾದಿಂದ 15 ಲಕ್ಷ ರೈತರಿಗೆ ಅನುಕೂಲ
ಮೈಸೂರು

ಸಾಲ ಮನ್ನಾದಿಂದ 15 ಲಕ್ಷ ರೈತರಿಗೆ ಅನುಕೂಲ

October 29, 2018

ಬಳ್ಳಾರಿ: ರಾಜ್ಯ ಸರ್ಕಾರದ ಸಾಲ ಮನ್ನಾ ಘೋಷಣೆಯಿಂದ ರಾಜ್ಯದ 15 ಲಕ್ಷ ರೈತರಿಗೆ ಅನುಕೂಲ ವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ರೈತರ ಸಾಲ ಮನ್ನಾ ಆಗಿರುವ ಎಲ್ಲಾ ರೈತರಿಗೆ ಸರ್ಕಾರ ಪ್ರಮಾಣ ಪತ್ರ ನೀಡಲಿದ್ದು, ಇನ್ನೂ 15-20 ದಿನಗಳ ಕಾಲ ರೈತರು ಕಾಯುವಂತೆ ತಿಳಿಸಿದರು.
ಬಳ್ಳಾರಿ ಲೋಕಸಭಾ ಉಪ ಚುನಾ ವಣೆಯ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರವಾಗಿ ಬಿರುಸಿನ ಪ್ರಚಾರ ನಡೆಸಿದ ರೇವಣ್ಣ, ಸರ್ಕಾರ ಇನ್ನೂ ಟೇಕಾಪ್ ಆಗಿಲ್ಲ ಎಂಬ ಬಿಜೆಪಿ ಆರೋಪದ ವಿರುದ್ಧ ವಾಗ್ದಾಳಿ ನಡೆಸಿದರು. ಯಾವ ಅರ್ಥದಲ್ಲಿ ಅವರು ಆ ರೀತಿಯಲ್ಲಿ ಹೇಳುತ್ತಿದ್ದರೋ ಗೊತ್ತಿಲ್ಲ. ಸರ್ಕಾರ 49 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಸಹಕಾರ ಕ್ಷೇತ್ರ ದಲ್ಲಿನ 9 ಸಾವಿರ ಕೋಟಿ ರೂಪಾಯಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 36 ಸಾವಿರ ಕೋಟಿ ರೂ.ಗಳಷ್ಟು ರೈತರ ಸಾಲ ಮನ್ನಾ ಮಾಡಲಾಗಿದೆ. ಶಿಕ್ಷಣ ವಲಯಕ್ಕೂ ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡಲಾಗಿದೆ. ಇಸ್ರೇಲ್ ಮಾದ ರಿಯ ಕೃಷಿ ಪದ್ಧತಿ ಪರಿಚಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

Translate »