ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರು ಕಾಣಿಸುತ್ತಿಲ್ಲವೇ?
ಮೈಸೂರು

ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರು ಕಾಣಿಸುತ್ತಿಲ್ಲವೇ?

October 29, 2018

ಗಾಂಧಿ ವಿಚಾರ ಪರಿಷತ್‍ನ ‘ಹಳ್ಳಿಗೆ ಹೋಗೋಣ ಬನ್ನಿ’ ಕಾರ್ಯಾಗಾರದಲ್ಲಿ ಹೆಚ್.ಎಸ್.ದೊರೆಸ್ವಾಮಿ ವಾಗ್ದಾಳಿ
ಮೈಸೂರು: ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರೂ. ಮೊತ್ತದ ಸಾಲ ಮನ್ನಾ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ದೊಡ್ಡ ವಿಚಾರವೇ? ಎಂದು ಪ್ರಶ್ನಿಸಿದ ಸ್ವಾತಂತ್ರ್ಯ ಹೋರಾಟಗಾರ ಹೆಚ್. ಎಸ್.ದೊರೆಸ್ವಾಮಿ, ಹೀಗೆ ರೈತ ವಿರೋಧಿ ನೀತಿ ಅನುಸರಿಸುವವರನ್ನು ಸುಮ್ಮನೆ ಬಿಡ ಬೇಕೆ? ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನ ಶ್ರೀರಾಂಪುರದಲ್ಲಿರುವ ಗಾಂಧಿ ವಿಚಾರ ಪರಿಷತ್ ಆವರಣದಲ್ಲಿ ಭಾನುವಾರ `ಹಳ್ಳಿಗೆ ಹೋಗೋಣ ಬನ್ನಿ’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ರೈತನನ್ನು ಎರಡನೇ ದರ್ಜೆಯ ಪ್ರಜೆಯಂತೆ ನಡೆಸಿ ಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರಕ್ಕೆ ರೈತರ ಸಂಕಷ್ಟ ಕಾಣಿಸುತ್ತಿಲ್ಲವೇ? ರೈತರ ಸಾಲ ಮನ್ನಾ ಮಾಡುವುದೇ ದೊಡ್ಡದೆಂಬ ಭ್ರಮೆ ನಮಗಿಲ್ಲ. ಆದರೆ ಗ್ರಾಮೀಣರಿಗೆ ಆರ್ಥಿಕ ಸಬಲೀಕರಣ ನೀಡುವ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ನೀಡಬೇಕು. ಆಗ ಮಾತ್ರ ನಗರಗಳಿಗೆ ವಲಸೆ ಹೋಗಿರುವ ಯುವ ಸಮುದಾಯ ಗ್ರಾಮಗಳತ್ತ ಮುಖ ಮಾಡ ಲಿದೆ. ಗ್ರಾಮೀಣ ಪ್ರದೇಶದವರು ನಮ್ಮ ಕೃಪಾಕಟಾಕ್ಷದಲ್ಲಿ ಇದ್ದಾರೆಂಬ ಭಾವನೆ ನಗರ ಪ್ರದೇಶದಲ್ಲಿದೆ. ಇದೇ ಕಾರಣಕ್ಕೆ ಗ್ರಾಮೀಣ ಪ್ರದೇಶಗಳನ್ನು ಸುಸ್ಥಿರಗೊಳಿ ಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯು ತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉದ್ಯಮಕ್ಕೆ ತೆರಿಗೆಮುಕ್ತ: ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿ, ದೇಶದ ಆಡಳಿತವನ್ನೇ ತನ್ನ ಮುಷ್ಟಿಗೆ ತೆಗೆದುಕೊಂಡಿತು. ಇವರಿಂದ ದೇಶವನ್ನು ಮುಕ್ತಗೊಳಿಸಿ ಸ್ವರಾಜ್ಯ ಸ್ಥಾಪಿಸಲು ಹಾಗೂ ದೇಸಿಯ ಉತ್ಪನ್ನಗಳಿಗೆ ಉತ್ತೇಜನ ನೀಡಲು ಗಾಂಧಿ ಹೋರಾಟದ ಹಾದಿ ಹಿಡಿ ದರು. ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿ ಸುವ ಚಳವಳಿ ನಡೆಸಿದರು. ಆದರೆ ಇಂದು ವಿದೇಶಿ ಕಂಪನಿಗಳನ್ನು ರತ್ನಗಂಬಳಿ ಹಾಸಿ ಆಹ್ವಾನಿಸಿ ತೆರಿಗೆ ವಿನಾಯಿತಿ ನೀಡಿ ಉದ್ಯಮ ನಡೆಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದರಿಂದ ದೇಶದ ಜನತೆ ಆರ್ಥಿಕ ಗುಲಾಮಗಿರಿಯಲ್ಲಿ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತರಿಗೆ 2 ಎಕರೆ ಭೂಮಿ: ರೈತನಿಗೆ ಸರ್ಕಾರಿ ಭೂಮಿ ಹಂಚಿಕೆ ಮಾಡಬೇಕು. ಜೊತೆಗೆ ಕೃಷಿ ಭೂಮಿ ಹೊಂದಲು ಗರಿಷ್ಠ ಮಿತಿ ನಿಗದಿಪಡಿಸಬೇಕು. ಈ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಇದಕ್ಕಾಗಿ ಸರ್ಕಾರದ ಮೇಲೆ ರೈತ ಸಂಘಟನೆಗಳು ಒತ್ತಡಹೇರಬೇಕಿತ್ತು. ಆದರೆ ಅದಾಗಲಿಲ್ಲ, ಇದೀಗ ಭೂಮಿ ಹಂಚಿಕೆ ಸಂಬಂಧ ನಾವು ಸಮಿತಿಯೊಂದನ್ನು ರಚನೆ ಮಾಡಿದ್ದು, ಪ್ರತಿ ರೈತನಿಗೆ ಕನಿಷ್ಠ 2 ಎಕರೆ ಭೂಮಿ ಕೊಡಿಸುವ ಉದ್ದೇಶ ಹೊಂದಲಾಗಿದೆ. ಇಂತಹ ಹೋರಾಟಕ್ಕೆ ನಕ್ಸಲ್ ಚಳವಳಿ ಯಿಂದ ಆಚೆ ಬಂದಿರುವ ಹಲವರು ಕೈ ಜೋಡಿಸಿದ್ದು, ರೈತ ಸಂಘಟನೆಗಳು ನಮ್ಮೊಂದಿಗೆ ಬರಲಿ ಎಂದು ನುಡಿದರು.
ಸಾಮಾಜಿಕ ಕಾರ್ಯಕರ್ತ ಭಕ್ತರಾಮೇ ಗೌಡ ಅಧ್ಯಕ್ಷತೆ ವಹಿಸಿದ್ದರು. ರಾಯ ಚೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಪ್ರೊ.ಮುಜಾಫರ್ ಅಸ್ಸಾದಿ, ಗಾಂಧಿ ವಿಚಾರ ಪರಿಷತ್ತಿನ ಅಧ್ಯಕ್ಷ ಪ.ಮಲ್ಲೇಶ್ ಮತ್ತಿತರರು ಹಾಜರಿದ್ದರು.

Translate »