ರಿಯಾಲಿಟಿ ಶೋ ಭರಾಟೆಯಿಂದ ಶಾಸ್ತ್ರೀಯ ಕಲೆಗಳಿಗೆ ಕುಗ್ಗಿದ ಬೇಡಿಕೆ
ಮೈಸೂರು

ರಿಯಾಲಿಟಿ ಶೋ ಭರಾಟೆಯಿಂದ ಶಾಸ್ತ್ರೀಯ ಕಲೆಗಳಿಗೆ ಕುಗ್ಗಿದ ಬೇಡಿಕೆ

October 29, 2018

ಖ್ಯಾತ ನೃತ್ಯಗಾರ್ತಿ ಡಾ.ವಸುಂಧರ ದೊರೆಸ್ವಾಮಿ ಬೇಸರ
ಮೈಸೂರು: ರಿಯಾ ಲಿಟಿ ಶೋ ಗಳಿಂದಾಗಿ ಶಾಸ್ತ್ರೀಯ ಕಲೆ ಗಳಿಗೆ ಬೇಡಿಕೆÉ ಕಡಿಮೆಯಾಗುತ್ತಿದೆ ಎಂದು ಶಾಂತಲಾ ಪ್ರಶಸ್ತಿ ಪುರಸ್ಕøತೆ ಡಾ.ವಸುಂಧರ ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ಭಾರತೀಯ ನೃತ್ಯ ಕಲಾ ಪರಿಷತ್ ವತಿಯಿಂದ ನಡೆದ ‘ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆ-2018’ರ ಬಹುಮಾನ ವಿತರಣಾ ಸಮಾ ರಂಭದಲ್ಲಿ ಮಾತನಾಡಿದ ಅವರು, ಬೇರೆ ದೇಶಗಳಲ್ಲಿ ನಮ್ಮ ನಾಡಿನ ಕಲೆ, ಸಂಸ್ಕøತಿ ಯನ್ನು ಬಹಳ ಭಕ್ತಿ ಮತ್ತು ಶ್ರದ್ಧೆಯಿಂದ ಕಲಿಯುತ್ತಿದ್ದಾರೆ. ಆದರೆ, ನಮ್ಮಲ್ಲಿ ಕಲಿಯು ವಿಕೆಯ ಆಸಕ್ತಿ ಕಡಿಮೆಯಾಗುತ್ತಿದೆ ಎಂದರು.

ಭರತನಾಟ್ಯ ಹಾಗೂ ಇತರೆ ಕಲೆ ಗಳನ್ನು ಸಮಾಜ ಪ್ರೋತ್ಸಾಹಿಸಬೇಕು. ಹಣ ಎನ್ನುವುದು ಬಹಳ ಮುಖ್ಯವಾಗಿದ್ದು, ಹಿರಿಯ ಕಲಾವಿದರ ಸಹಕಾರ ಅಗತ್ಯ ವಾಗಿದೆ. ಕಲೆಗೋಸ್ಕರ ನಮ್ಮಿಂದ ಸಾಧ್ಯ ವಾದಷ್ಟು ಸೇವೆ ಮಾಡಬೇಕು. ವಿದ್ಯಾರ್ಥಿ ಗಳು ಹೆಚ್ಚಾಗಿ ಬೇರೆ ಸ್ಪರ್ಧಿಗಳ ನಾಟ್ಯವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಭರತ ನಾಟ್ಯ ನೃತ್ಯಕ್ಕೆ ದೈಹಿಕವಾಗಿ ಸದೃಢರಾಗಿರಬೇಕು. ಆದ್ದರಿಂದ ವಿದ್ಯಾರ್ಥಿಗಳು ಯೋಗಾಭ್ಯಾಸ ವನ್ನು ಅಳವಡಿಸಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.

ಉದ್ಯಮಿ ಆರ್.ಗುರು ಮಾತನಾಡಿ, ಸ್ಪರ್ಧೆ ಗಳನ್ನು ಆಯೋಜಿಸುವುದು ಬಹಳ ಕಷ್ಟ. 20 ವರ್ಷದ ನಂತರ ರಾಜ್ಯ ಮಟ್ಟದ ಸ್ಪರ್ಧೆ ಯನ್ನು ಆಯೋಜಿಸಿರುವುದು ಶ್ಲಾಘನೀಯ. ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯನ್ನು ಅಳವಡಿಸಿಕೊಳ್ಳ ಬೇಕು. ಎಲ್ಲರೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಆದರೆ, ಗೆಲ್ಲುವ ಪ್ರಯತ್ನ ಮಾಡಬೇಕು. ಹಾಗೆಯೇ ವಿದ್ಯಾರ್ಥಿಗಳಿಗೆ ಪೋಷಕರ ಪ್ರೋತ್ಸಾಹ ಮಹತ್ವದ್ದಾಗಿದೆ ಎಂದರು.

ಬಹುಮಾನ ವಿತರಣೆ: ವಿದ್ವತ್, ಸೀನಿಯರ್, ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆ ನಡೆಸ ಲಾಗಿದ್ದು, ವಿದ್ವತ್ ವಿಭಾಗದಲ್ಲಿ ಸಾಗರದ ಪ್ರದ್ಯುಮ್ನ ಪ್ರಥಮ ಸ್ಥಾನ ಪಡೆದುಕೊಂಡರು. ಬೆಂಗಳೂರಿನ ಬಿ.ಎಸ್. ಸಾಗರ ದ್ವಿತೀಯ ಸ್ಥಾನ ಹಾಗೂ ಎಂ. ಜ್ಞಾನವಿ ತೃತೀಯ ಸ್ಥಾನ ಪಡೆದರೆ, ವಿಶೇಷ ಬಹುಮಾನ ವನ್ನು ಮೌಲ್ಯ ವೆಂಕಟೇಶ್ ಮತ್ತು ಪಿ. ಹರ್ಷಿಣಿ ಪಡೆದುಕೊಂಡರು.

ಸೀನಿಯರ್ ವಿಭಾಗದಲ್ಲಿ ಮಂಗಳೂರಿನ ಸಿ.ವಿ.ಅನಂತ ಕೃಷ್ಣ ಪ್ರಥಮ ಸ್ಥಾನ, ಹಾಸನದ ಎಲ್.ಎಸ್.ಲತಾ ದ್ವಿತೀಯ ಸ್ಥಾನ ಹಾಗೂ ವೈಷ್ಣವಿ ಜಯರಾಮ್ ತೃತೀಯ ಸ್ಥಾನ ಪಡೆದರು. ಜೂನಿಯರ್ ವಿಭಾಗ ದಲ್ಲಿ ಮೈಸೂರಿನ ಬಿ.ವಿ.ಸ್ಫೂರ್ತಿ ಮತ್ತು ಜಿ.ಪಿ.ಮನನ ಪ್ರಥಮ ಸ್ಥಾನ, ಅನುಷ್ಕಾ ಸುಧಾಕರ ಉಪಾಧ್ಯ ಮತ್ತು ಎಂ.ಚೇತನ ದ್ವಿತೀಯ ಸ್ಥಾನ ಹಾಗೂ ಕೆ.ಎಸ್. ಸ್ನೇಹವಲ್ಲಿ ಮತ್ತು ಮಹೇಶ್ ತೃತೀಯ ಸ್ಥಾನ ಪಡೆದರೆ, ವಿಶೇಷ ಬಹುಮಾನವನ್ನು ಕೆ.ನಿಶಾ, ಕೆ.ನಿತ್ಯಾ, ಆರ್.ನಂದನಾ ಮತ್ತು ಬಿ.ರುಚಿರ ಪಡೆದುಕೊಂಡರು.

ಸಬ್ ಜೂನಿಯರ್ ವಿಭಾಗದಲ್ಲಿ ಸುಜಾನಿ ಜಗನ್ನಾಥ್ ಪ್ರಥಮ ಸ್ಥಾನ, ಜಿ. ಶ್ರೇಯಾ ದ್ವಿತೀಯ ಸ್ಥಾನ, ಅದ್ವೀಕ ಮೈತ್ರಿ ತೃತೀಯ ಸ್ಥಾನ ಪಡೆದರೆ, ವಿಶೇಷ ಬಹು ಮಾನವನ್ನು ವಾಹಿನಿ, ಸೌಗಂಧಿಕ ಹಾಗೂ ಎಂ.ಎ.ಪೃಥ್ವಿ ಪಡೆದರು. ತೀರ್ಪುಗಾರರಾಗಿ ಡಾ.ಮಂಗಳ ಶೇಖರ್, ಪದ್ಮಿನಿ ಅಚ್ಚೆ, ಗಿರೀಶ್ ಪುತ್ತೂರು, ಹೆಚ್.ಆರ್.ಉನ್ನತ್, ಬಿ.ಎಸ್.ಹಿಂದೂ, ಸಹನಾ ಪ್ರದೀಪ್ ಭಟ್ಟ್, ಷಡಕ್ಷರಿ, ಸಾಗರ್ ಹಾಗೂ ಮಂಗಳಾ ರೈ ಭಾಗವಹಿಸಿದ್ದರು.

ಅನನ್ಯ ಕಲಾನಿಕೇತನ ನಿರ್ದೇಶಕಿ ಕೆ. ಬೃಂದಾ, ಭಾರತೀಯ ನೃತ್ಯ ಕಲಾ ಪರಿಷತ್ ಅಧ್ಯಕ್ಷೆ ಚಂದ್ರಮತಿ, ಕಾರ್ಯದರ್ಶಿ ಡಾ.ಕುಮುದಿನಿ ಅಚ್ಚಿ ಉಪಸ್ಥಿತರಿದ್ದರು.

Translate »