ಕೊಡಗು

ಸಾಹಿತಿ ಗೌರಮ್ಮ ಹೆಸರಿನಲ್ಲಿ ‘ಟ್ರಸ್ಟ್ ಮತ್ತು ಸ್ಮಾರಕ’ ನಿರ್ಮಾಣಕ್ಕೆ ಮನವಿ

February 4, 2019

ಕುಶಾಲನಗರ: ಕೊಡಗಿನ ಹೆಸ ರಾಂತ ಸಾಹಿತಿ ಗೌರಮ್ಮ ಹೆಸರಿನಲ್ಲಿ ‘ಗೌರಮ್ಮ ಟ್ರಸ್ಟ್’ ಆರಂಭಿಸುವಂತಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂ ಧರ ಭೂಪತಿ ಮನವಿ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವ ಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಕೊಡಗು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಸುನಿತಾ ಲೋಕೇಶ್ ಅವರು ಬರೆದಿರುವ ‘ಲಲಿತ ಪ್ರಬಂಧ ಪುಸ್ತಕ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯ ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ಕೊಡಗಿನ ಗೌರಮ್ಮ ಮೊದಲಿ ಗರು. ಗೌರಮ್ಮ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿ ಸುವುದರ ಜೊತೆಗೆ ಗೌರಮ್ಮ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವಂತಾಗಬೇಕು. ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿ ಸುವಂತೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಕ್ಕೆ ಸಲಹೆ ಮಾಡಿದ ವಸುಂಧರ ಭೂಪತಿ ರಾಜ್ಯ ಮಟ್ಟದಲ್ಲಿ ಈ ಸಂಬಂಧ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗು ವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಸಮಕಾಲೀಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡುತ್ತಿದೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಎಂಬ ವಿಷಯದಡಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ನುಡಿದರು. ಮಹಿ ಳೆಯರು ಜಾನಪದ ಸಂಸ್ಕøತಿ ಮೂಲಕ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುವುದನ್ನು ಅನಾದಿ ಕಾಲದಿಂದಲೂ ಕಾಣಬಹುದಾಗಿದೆ. ನಂತರ ಅಕ್ಕಮಹಾ ದೇವಿ, ಸತ್ಯಕ್ಕ, ಹಾಲ್ದಕ್ಕಿ ಲಕ್ಕಮ್ಮ ಸೇರಿದಂತೆ 30ಕ್ಕೂ ಹೆಚ್ಚು ಮಹಿಳೆಯರು ವಚನ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳಾ ಸಾಹಿತ್ಯದಲ್ಲಿ ಬೆಳಕಿಗೆ ಬಂದರು ಎಂದು ವಸುಂಧರ ಭೂಪತಿ ವಿವರಿಸಿದರು.

ಇತ್ತೀಚಿನ ದಿನಗಳಲ್ಲಿ ಕೊಳ್ಳುಬಾಕ ಸಂಸ್ಕøತಿ ಹೆಚ್ಚಾಗುತ್ತಿದೆ. ಶಾಪಿಂಗ್ ಎಂಬುದು ದೊಡ್ಡ ಪಿಡುಗಾಗಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದರು. ಕೊಡಗು ಜಿಲ್ಲೆ ಮಹಿಳಾ ಕನ್ನಡ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ. ಆ ದಿಸೆಯಲ್ಲಿ ವಿಮರ್ಶೆಗಳು ಸಹ ಹೆಚ್ಚಾಗ ಬೇಕು. ಆದರೆ ಮಹಿಳಾ ಸಾಹಿತ್ಯ ವಿಮರ್ಶೆ ಮೂಲೆ ಗುಂಪಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.

ಮಾಜಿ ಸಚಿವರು ಹಾಗೂ ಅಕ್ಕಮಹಾ ದೇವಿ ಅಧ್ಯಯನ ಪೀಠದ ಅಧ್ಯಕ್ಷರಾದ ಲೀಲಾದೇವಿ ಆರ್.ಪ್ರಸಾದ್ ಅವರು ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಬದುಕಿನ ಎರಡು ಕಣ್ಣು ಗಳಿದ್ದಂತೆ, ಸಾಹಿತ್ಯ ಜ್ಞಾನ ಹೆಚ್ಚಿಸಿದರೆ, ಸಂಸ್ಕøತಿ ಬದುಕು ಕಲಿಸುತ್ತದೆ ಎಂದರು.

ರಾಜ್ಯದ ರಾಜಧಾನಿಯಲ್ಲಿ ಕನ್ನಡ ಮಾತ ನಾಡುವವರ ಸಂಖ್ಯೆ ಶೇ.18 ರಷ್ಟು ಮಾತ್ರ, ಇದು ಒಳ್ಳೆಯ ಬೆಳವಣಿಗೆಯಲ್ಲ, ಸಮಾಜ ಅಭಿವೃದ್ಧಿ ಹೊಂದುವುದರ ಜೊತೆಗೆ, ಮಾತೃ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಇಲ್ಲದಿದ್ದಲ್ಲಿ ಕನ್ನಡಿಗರು ಮೂಲೆ ಗುಂಪಾ ಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭ ಬಗ್ಗೆ ಚರ್ಚೆಗಳು ನಡೆಯು ತ್ತಿದೆ. ಇಂಗ್ಲೀಷ್ ಮಾಧ್ಯಮಕ್ಕಿಂತ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡು ವುದು ಒಳ್ಳೆಯದು. ನಾನು ಸಹ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇನೆ, ನನಗೂ ನಾಲ್ಕು ಭಾಷೆ ಮಾತನಾಡಲು ಬರುತ್ತದೆ. ಇಚ್ಚಾಶಕ್ತಿ ಇದ್ದಲ್ಲಿ ಯಾವುದೇ ಭಾಷೆಯನ್ನು ಕಲಿಯಬಹುದು, ಆ ನಿಟ್ಟಿನಲ್ಲಿ ಆಂಗ್ಲ ಭಾಷೆಗೆ ಜೋತು ಬೀಳುವುದು ಬೇಡ, ಕನ್ನಡ ಭಾಷೆಯ ಶಬ್ದಗಳು ಮಾಯವಾಗದಂತೆ ನೋಡಿ ಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದು ಲೀಲಾದೇವಿ ಆರ್. ಪ್ರಸಾದ್ ಕಿವಿಮಾತು ಹೇಳಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತ ನಾಡಿ, ಕನ್ನಡ ಸಾಹಿತ್ಯ ಪರಿಷತ್ ಚಟು ವಟಿಕೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆ ಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಕೊಡಗು ಜಿಲ್ಲೆಯಲ್ಲಿ ಮಹಿಳೆಯರು ಹೆಚ್ಚಿನ ಅಧಿಕಾರ ಹೊಂದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

ಮಾತೃ ಭಾಷೆಯನ್ನು ಎಂದಿಗೂ ಮರೆ ಯಬಾರದು, ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ, ಜೊತೆಗೆ ಜೀವನ ರೂಪಿಸಿಕೊಳ್ಳಲು ಇಂಗ್ಲೀಷ್ ಭಾಷೆ ಕಲಿಯುವುದು ಅಗತ್ಯ ಎಂದರು.

ಜಿಪಂ ಸಿಇಒ ಕೆ.ಲಕ್ಷ್ಮಿಪ್ರಿಯ ಮಾತನಾಡಿ, ಕನ್ನಡ ಭಾಷೆ ಕಲಿಯಲು ಎಲ್ಲರೂ ಉತ್ತೇ ಜನ ನೀಡುತ್ತಾರೆ. ತಪ್ಪಾದರೂ ತಿದ್ದಿಕೊ ಳ್ಳಲು ಸಲಹೆ ಮಾಡುತ್ತಾರೆ. ಆದರೆ ನಾವು ಕನ್ನಡ ಮಾತನಾಡಲು ಪ್ರಯತ್ನಿಸಿದರೂ ಸಹ, ಇಂದಿನ ಮಕ್ಕಳು ಇಂಗ್ಲೀಷ್ ಭಾಷೆ ಯಲ್ಲಿ ಮಾತನಾಡುತ್ತಾರೆ ಎಂದರು.

ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮ್ಮೇಳನಾಧ್ಯಕ್ಷ ವಿಜಯ ವಿಷ್ಣುಭಟ್ ಭಾಷಣ ಓದಿದರು. ಕನ್ನಡಿ ಗರಾದ ನಮಗೆ ಮಾತೃಭಾಷಾ ಪ್ರೀತಿ ಇರಬೇಕು. ಕನ್ನಡ ಶ್ರೀಮಂತ ಭಾಷೆಯಾ ಗಿದ್ದು, ಕನ್ನಡವನ್ನು ಇನ್ನೂ ಹೆಮ್ಮರವಾಗಿ ಬೆಳೆಸಬೇಕು ಎಂದರು. ಕನ್ನಡ ಭಾಷೆಗೆ ಲಿಪಿ ಇದ್ದು, ಸರಳ, ಸುಂದರ ನುಡಿದಂತೆ, ಬರೆದಂತೆ, ಓದಿದಂತೆ ಮಾತನಾಡಬಹುದಾ ಗಿದೆ. ಕನ್ನಡ ಭಾಷೆಗೆ ಲಿಪಿಗಳ ರಾಣಿ ಎಂದು ವಿನೋಬಭಾವೆ ಅವರು ಹೇಳಿ ದ್ದರು ಎಂದು ಅಧ್ಯಕ್ಷರು ಸ್ಮರಿಸಿದರು.

ಇಂಗ್ಲೀಷ್ ಬದುಕು ಕಟ್ಟಿಕೊಡುವ ಭಾಷೆ ಯಾಗಿದ್ದರೂ ಸಹ ಮಾತೃ ಭಾಷೆಯನ್ನು ಬದಿಗೊತ್ತಬಾರದು, ಪ್ರಾರಂಭಿಕ ಶಿಕ್ಷಣ ಅಮ್ಮ ನನ್ನು ಅಪ್ಪಿಕೊಂಡಂತೆ ಎಂದು ಅವರು ನುಡಿದರು. ಸಾಹಿತಿ ಕಸ್ತೂರಿ ಗೋವಿಂದಮ್ಮ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಪೂರ್ಣಿಮಾ ಗೋಪಾಲ್, ಕೆ.ಆರ್. ಮಂಜುಳಾ ಇತರರು ಇದ್ದರು.

Translate »