ಸಮ್ಮೇಳನಾಧ್ಯಕ್ಷರ ವರ್ಣರಂಜಿತ ಮೆರವಣಿಗೆ
ಕೊಡಗು

ಸಮ್ಮೇಳನಾಧ್ಯಕ್ಷರ ವರ್ಣರಂಜಿತ ಮೆರವಣಿಗೆ

February 4, 2019

ಕುಶಾಲನಗರ: ಸೋಮವಾರ ಪೇಟೆ ತಾಲೂಕಿನ ರಾಂಪುರ ಕಣಿವೆಗೆ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಂಗ ವಾಗಿ ನಡೆದ ಸಮ್ಮೇಳನಾಧ್ಯಕ್ಷರ ಮೆರ ವಣಿಗೆ ಎಲ್ಲರ ಗಮನ ಸೆಳೆಯಿತು.

ಹುಲುಸೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯಿಂದ ಆರಂಭ ಗೊಂಡ ವರ್ಣರಂಜಿತ ಮೆರವಣಿಗೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಲಕ್ಷ್ಮೀಪ್ರಿಯ ಕನ್ನಡ ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು.
ಮಹಿಳಾ ಸಮ್ಮೇಳನಾಧ್ಯಕ್ಷರಾದ ವಿಜಯ ವಿಷ್ಣಭಟ್ ಅವರಿಗೆ ಪರಿಷತ್ ಪದಾಧಿ ಕಾರಿಗಳು ಪುಷ್ಪಾಹಾರ ಹಾಕಿ ಸ್ವಾಗತಿಸಿ ದರು. ನಂತರ ಮಂಗಳವಾಧ್ಯಗಳೊಂದಿಗೆ ಅಲಂಕೃತ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ರನ್ನು ಮೆರವಣಿಗೆ ಮೂಲಕ ಸಭಾ ಕಾರ್ಯಕ್ರಮಕ್ಕೆ ಕರೆತರಲಾಯಿತು. ವಾಹನ ದಲ್ಲಿ ಇವರೊಂದಿಗೆ ಕನ್ನಡ ಸಾಹಿತ್ಯ ಪರಿ ಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಹಾಗೂ ಜಿಪಂ ಸಿಇಒ ಲಕ್ಷ್ಮೀಪ್ರಿಯ ಸಾಥ್ ನೀಡಿದರು.

ಮೆರವಣಿಗೆಯಲ್ಲಿ ವಿವಿಧ ಸ್ತ್ರೀಶಕ್ತಿ, ಸ್ವಸಹಾಯ ಸಂಘದ ಸದಸ್ಯರು ತಮ್ಮ ಸಂಘಗಳ ಸಮವಸ್ತ್ರ ಧರಿಸಿ ಪೂರ್ಣ ಕುಂಭ ಕಳಶವನ್ನು ಹೊತ್ತು ಸಾಗುವ ಮೂಲಕ ಮೆರವಣಿಗೆಗೆ ಮೆರಗು ನೀಡಿ ದರು. ಕೇರಳದ ಚಂಡೇವಾದ್ಯ ಕಲಾವಿ ದರು ತಮ್ಮ ಕಲಾ ಪ್ರದರ್ಶನವನ್ನು ಪ್ರದ ರ್ಶಿಸಿ ರಂಗೇರಿಸಿದರು. ಮೆರವಣಿಗೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ವಸ ಹಾಯ ಸಂಘದ ಸದಸ್ಯರು ಸಾಗಿದರು. ಮೆರವಣಿಗೆ ಸಂದರ್ಭ ವಿದ್ಯಾರ್ಥಿಗಳು ಕನ್ನಡ ಪರ ಘೋಷಣೆಗಳನ್ನು ಕೂಗುತ್ತ ಎಲ್ಲರ ಗಮನ ಸೆಳೆದರು. ಕಣಿವೆ, ಹಕ್ಕೆ, ಹಲುಸೆ, ಭುವನಗಿರಿ, ಕೂಡಿಗೆ ಹಾಗೂ ಹೆಬ್ಬಾಲೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂ ಡಿದ್ದರು. ಮೆರವಣಿಗೆಯು ಹುಲುಸೆ ಬಸವೇಶ್ವರ ದೇವಸ್ಥಾನದಿಂದ ಆರಂಭ ಗೊಂಡು ಹಾಸನ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಸಾಗಿ ರಾಂಪುರ ಕಣಿವೆ ಮೂಲಕ ಶ್ರೀರಾಮಲಿಂಗೇಶ್ವ ದೇವಸ್ಥಾನದ ಬಳಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಸಾಹಿತ್ಯಾ ಭಿಮಾನಿಗಳು ವಾದ್ಯಗೋಷ್ಠಿಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

Translate »