ನೆರೆ ಸಂತ್ರಸ್ತ ಕುಟುಂಬಕ್ಕೆ ರೋಟರಿಯಿಂದ ಮನೆ ನಿರ್ಮಾಣ
ಕೊಡಗು

ನೆರೆ ಸಂತ್ರಸ್ತ ಕುಟುಂಬಕ್ಕೆ ರೋಟರಿಯಿಂದ ಮನೆ ನಿರ್ಮಾಣ

February 4, 2019

ಸೋಮವಾರಪೇಟೆ: ಕಳೆದ ಆಗಸ್ಟ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಪಟ್ಟಣದಲ್ಲಿ ವಾಸವಾಗಿರುವ ಬಡ ಕುಟುಂ ಬವೊಂದರ ಮನೆ ಕುಸಿದಿದ್ದು, ಲಯನ್ಸ್ ಸಂಸ್ಥೆಯ ವತಿಯಿಂದ ಮನೆಯನ್ನು ನಿರ್ಮಿ ಸಿಕೊಡಲಾಗುವುದು ಎಂದು ಸೋಮವಾರ ಪೇಟೆ ಲಯನ್ಸ್ ಅಧ್ಯಕ್ಷ ಎಸ್.ಎನ್. ಯೋಗೇಶ್ ಹೇಳಿದರು.

ಪತ್ರಕರ್ತರಾಗಿದ್ದ ದಿವಂಗತ ಪಿ.ಆರ್. ಮಂಜುನಾಥ್ ಕುಟುಂಬ ಸಂಕಷ್ಟದಲ್ಲಿತ್ತು. ಅದೇ ಸಂದರ್ಭ ವಾಸದ ಮನೆಯು ಕುಸಿದು, ಅನಾರೋಗ್ಯ ಪೀಡಿತರಾಗಿದ್ದ ಅವರ ಪತ್ನಿ ಪಿ.ವನಿತ ಹಾಗು ಮಗನಿಗೆ ವಾಸಕ್ಕೆ ಮನೆಯೂ ಇರಲಿಲ್ಲ. ಈ ವೇಳೆ ಲಯನ್ಸ್ ಜಿಲ್ಲಾ ರಾಜ್ಯಪಾಲ ದೇವದಾಸ್ ಭಂಡಾರಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭ ಸಂಕಷ್ಟದಲ್ಲಿರುವ ಕುಟುಂಬದ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಈಗಾಗಲೇ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ 2.33 ಲಕ್ಷ ರೂ. ಬಿಡು ಗಡೆಯಾಗಿದ್ದು, ಮನೆ ನಿರ್ಮಾಣದ ಕಾಮ ಗಾರಿ ಪ್ರಾರಂಭಿಸಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ಹೇಳಿದರು.

ಮನೆ ನಿರ್ಮಾಣಕ್ಕೆ 8 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿದೆ. ಹೆಚ್ಚು ವರಿ ಹಣವನ್ನು ದಾನಿಗಳಿಂದ ಸಂಗ್ರಹಿ ಸಲು ತೀರ್ಮಾನಿಸಲಾಗಿದೆ. ಇಂತಹ ಒಳ್ಳೆಯ ಕಾರ್ಯಕ್ಕೆ ದಾನಿಗಳು ಧನ ಸಹಾಯ ಮಾಡಬಹುದು. ಇಟ್ಟಿಗೆ, ಸಿಮೆಂಟು, ಮರಳು ಸೇರಿದಂತೆ ಸಾಮಗ್ರಿಗಳ ರೂಪದಲ್ಲಿಯೂ ನೀಡಬಹುದು ಎಂದು ಯೋಜನೆಯ ಮುಖ್ಯ ಸ್ಥರಾದ ಎ.ಆರ್.ಮುತ್ತಣ್ಣ ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ 7624876321, 9481927069 ಸಂಪರ್ಕಿಸಬಹುದು ಎಂದು ಹೇಳಿದರು. ಗೋಷ್ಠಿಯಲ್ಲಿ ರೋಟರಿ ಕಾರ್ಯ ದರ್ಶಿ ಮಂಜುನಾಥ ಚೌಟ, ಮಾಜಿ ಅಧ್ಯಕ್ಷರುಗಳಾದ ಎ.ಎಸ್.ಮಹೇಶ್, ಜೆ.ಸಿ.ಶೇಖರ್ ಇದ್ದರು.

Translate »