ಅರಸೀಕೆರೆ: ಅವಿಭಕ್ತ ಕುಟುಂಬ ಗಳು ಆಧುನಿಕತೆಯ ಭರದಲ್ಲಿ ಇಬ್ಘಾಗ ವಾಗುತ್ತಿದ್ದು, ಸಾಮಾಜಿಕ ಸ್ಥಿತ್ಯಂತರ ವಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಪ್ರೇರೇ ಪಣೆ ನೀಡುವ ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಸಾಹಿತಿ ನಾಗರಾಜರಾವ್ ಕಲ್ಕಟ್ಟೆ ಅಭಿಪ್ರಾಯಪಟ್ಟರು.
ತಾಲೂಕಿನ ಜಾವಗಲ್‍ನಲ್ಲಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಕಸಾಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾ ಗದ ಸಂಯಕ್ತಾಶ್ರಯದಲ್ಲಿ ನಡೆದ ಮಲ್ಲಿ ಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಜನ್ಮದಿನಾಚರಣೆಯ ಸಮಾರಂಭ ದಲ್ಲಿ ಅವರು ಮಾತನಾಡಿದರು.
ದಾಂಪತ್ಯದಲ್ಲಿ ಸರಸ-ವಿರಸಗಳಿರು ವುದು ಸಹಜ. ವಿರಸಗಳನ್ನು ಬದಿಗೊತ್ತಿ ಸಂತಸದಿಂದ ಬದುಕು ಸಾಗಿಸುವುದು ಮುಖ್ಯ. ಗಂಡು-ಹೆಣ್ಣಿನ ನಡುವಿನ ಆಕರ್ಷ ಣೆಯು ದಾಂಪತ್ಯದ ಸಮರಸದಿಂದಾಗಿ ಆಧ್ಯಾತ್ಮದೆಡೆಗೆ ತಿರುಗಿ ಅರ್ಧನಾರೀಶ್ವರ ಪ್ರಜ್ಞೆ ಮೂಡಬೇಕು ಎನ್ನುವುದೇ ಕವಿಯ ಪ್ರಧಾನ ಆಶಯವಾಗಿತ್ತು. ಅವರ ಮೊದಲ ಕವನ ಸಂಕಲನ `ಮೈಸೂರು ಮಲ್ಲಿಗೆ’ ಯಲ್ಲಿ ಗ್ರಾಮ ಬದುಕಿನ ನೆಲೆಗಳಿವೆ. ಹಾಗೆಯೇ ಮಣ್ಣಿನ ವಾಸನೆಯಿದೆ. ಕನಸು ಕಾಣುವುದು ದಾಂಪತ್ಯದ ಒಂದು ಭಾಗ ಅಷ್ಟೇ. ವಾಸ್ತವದ ನೆಲೆಯಲ್ಲಿ ಬೇಂದ್ರೆ ಅವರು ಎಂದಂತೆ ಒಲವೇ ನಮ್ಮ ಬದುಕು ಎನ್ನುವುದನ್ನು ಕಾವ್ಯದಲ್ಲಿ ಮತ್ತು ಬದುಕಿ ನಲ್ಲಿ ಸಾಧಿಸಿ ತೋರಿಸಿದವರು ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು, ಭಾವನಾತ್ಮಕ ನೆಲೆಯಲ್ಲಿ ರೂಪುಗೊಂಡ ಕೆ.ಎಸ್.ನ ಅವರ ಕವನ ಸಂಕಲನದ ಮೂಲಕ ಚಿಂತನೆ ಗಳನ್ನು ನಿಷ್ಕರ್ಷೆಗೆ ಒಳಪಡಿಸಿ ಬದುಕನ್ನು ವಿಮರ್ಶೆಗೆ ಒಳಪಡಿಸುತ್ತಾರೆ. ಈ ಕಾರಣ ದಿಂದಾಗಿ ಇವರ ಸಾಹಿತ್ಯ ಐತಿಹಾಸಿಕ ಮಹತ್ವವುಳ್ಳದ್ದು ಎಂದು ಹಿರಿಯ ಕವಿಗಳು ಒಪ್ಪುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಂಶುಪಾಲ ಶಿವಶಂಕರಮೂರ್ತಿ, ಕೆ.ಎಸ್.ನ ಟ್ರಸ್ಟಿನ ಸದದ್ಯ ಜಾವಗಲ್ ಪ್ರಸನ್ನ ಕುಮಾರ್ ಮಾತನಾಡಿದರು. ಕಾರ್ಯ ಕ್ರಮದಲ್ಲಿ ಪರಿಷತ್ ನಿಕಟಪೂರ್ವ ಅಧ್ಯಕ್ಷ ಜೆ.ಆರ್.ಶಿವಪ್ರಕಾಶ್, ಶರಣ ಸಾಹಿತ್ಯ ಪರಿ ಷತ್ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ನೇರ್ಲಿಗೆ ಕರುಣಾಕರ್, ಉಪನ್ಯಾಸಕ ವಿರೂಪಾಕ್ಷ, ನರಸಿಂಹಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥ ವೈ.ಹೆಚ್. ಮಹೇಶ್ ತೇಜೇಶ ಕುಮಾರ್ ಅವರು ಉಪಸ್ಥಿತರಿದ್ದರು.