ತ್ರಿಮತಸ್ಥರ ಸಂಘಟನೆಗಾಗಿ ಏ. 21 ರಂದು ‘ಮೈಸೂರು ವಿಪ್ರ ಸೈನ್ಯ’ಜಾಥಾ
ಮೈಸೂರು

ತ್ರಿಮತಸ್ಥರ ಸಂಘಟನೆಗಾಗಿ ಏ. 21 ರಂದು ‘ಮೈಸೂರು ವಿಪ್ರ ಸೈನ್ಯ’ಜಾಥಾ

April 19, 2018

ಮೈಸೂರು:  ತ್ರಿಮತಸ್ಥ ಬ್ರಾಹ್ಮಣರನ್ನೊಳಗೊಂಡ `ಮೈಸೂರು ವಿಪ್ರ ಸೈನ್ಯಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದ್ದು, .21ರಂದು ತ್ರಿಮತಸ್ಥರ ಸಂಘಟನೆಗಾಗಿ ಜಾಥಾ ಹಮ್ಮಿಕೊಳ್ಳ ಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದುವರೆದ ಜನಾಂಗವೆಂಬ ಹಣೆಪಟ್ಟಿ ಹೊಂದಿರುವ ಬ್ರಾಹ್ಮಣ ಸಮುದಾಯವನ್ನು ಸರ್ಕಾರ ಸೇರಿದಂತೆ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಮಾಡಿವೆ. ಆದ್ದರಿಂದ ಒಗ್ಗಟ್ಟಾಗಿ ಸಮುದಾಯದ ಶಕ್ತಿ ಪ್ರದರ್ಶನ ಮಾಡಲಿ ದ್ದೇವೆ. ತ್ರಿಮತಸ್ಥ ಬ್ರಾಹ್ಮಣರು ಭಿನ್ನತೆ ಮರೆತು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದು ಕೊಳ್ಳಬೇಕು ಎಂದರು. ಅಂದು ಸಂಜೆ ಜಾಥಾವು ಅರಮನೆ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದಿಂದ ಹೊರಟು ದೇವರಾಜ ಅರಸು ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕೊನೆಯಾಗಲಿದೆ ಎಂದರು.

Translate »