ಮೈಸೂರು,ಏ.24(ಎಸ್‍ಪಿಎನ್)- ಮನೆಯ ವಾರ್ಡ್‍ರೂಬ್‍ನಲ್ಲಿ ಇಟ್ಟಿದ್ದ 35 ಗ್ರಾಂ ಚಿನ್ನದ ಮಾಂಗಲ್ಯಸರ ಕಳುವಾಗಿರುವ ಘಟನೆ ನಗರದ ಹೆಬ್ಬಾಳ 2ನೇ ಹಂತದಲ್ಲಿ 4 ದಿನದ ಹಿಂದೆ ನಡೆದಿದ್ದು, ತಡವಾಗಿ ದೂರು ದಾಖಲಾಗಿದೆ. ಇಲ್ಲಿನ ನಿವಾಸಿ ಎಂ.ಎಸ್.ಹೇಮಲತಾ ಅವರೇ ಮಾಂಗಲ್ಯ ಸರ ಕಳೆದುಕೊಂಡವರು.
ಹೇಮಲತಾ ಅವರು ಏ.20ರ ರಾತ್ರಿ 11 ಗಂಟೆಗೆ ತಮ್ಮ ಮಾಂಗಲ್ಯ ಸರವನ್ನು ಬಿಚ್ಚಿ ಬೆಡ್‍ರೂಮಿನ ವಾರ್ಡ್‍ರೂಬ್‍ನಲ್ಲಿಟ್ಟಿ ದ್ದಾರೆ. ಏ.21ರ ಬೆಳಿಗ್ಗೆ 8.30ಕ್ಕೆ ಮನೆ ಕೆಲಸದಾಕೆ ಬಂದು ಎಂದಿನಂತೆ ಕೆಲಸ ಮುಗಿಸಿ ಹೋಗಿದ್ದಾರೆ. ಬಳಿಕ ಹೇಮ ಲತಾ ವಾರ್ಡ್‍ರೂಬ್‍ನಲ್ಲಿಟ್ಟಿದ್ದ ಮಾಂಗಲ್ಯಸರ ತೆಗೆದುಕೊಳ್ಳಲು ಯತ್ನಿಸಿದಾಗ ಅಲ್ಲಿ ಚಿನ್ನದ ಸರ ಇರಲಿಲ್ಲ. ಬಳಿಕ ಮನೆಯಲ್ಲೆಲ್ಲಾ ಹುಡುಕಿದ್ದಾರೆ. ಎಲ್ಲೂ ಕಾಣಿಸದೇ ಇದ್ದಾಗ ಹೆಬ್ಬಾಳ ಪೊಲೀಸ್ ಠಾಣೆಗೆ ತೆರಳಿದ ಹೇಮಲತಾ, `ಯಾರೋ ಕಳ್ಳರು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಮನೆಯ ವಾರ್ಡ್‍ರೋಬ್‍ನಿಂದ ಕಳವು ಮಾಡಿದ್ದಾರೆ’ ಎಂದು ದೂರು ದಾಖಲಿಸಿ ದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.