ಸಿಡಿಲು ಬಡಿದು ಮಹಿಳೆಗೆ ಗಾಯ
ಮಂಡ್ಯ

ಸಿಡಿಲು ಬಡಿದು ಮಹಿಳೆಗೆ ಗಾಯ

April 19, 2018

ಕೆ.ಆರ್.ಪೇಟೆ:  ತಾಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಇಂದು ಸಂಜೆ ಗುಡುಗು ಮಿಂಚು ಸಹಿತ ಸುರಿದ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಜಮೀನಿನ ಬಳಿ ಹಸು ಮೇಯಿಸುತ್ತಿದ್ದ ರೈತ ಮಹಿಳೆಗೆ ಸುಟ್ಟ ಗಾಯಗಳಾಗಿದ್ದರೆ, ಹಸು ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಸಿಂಧುಘಟ್ಟ ಗ್ರಾಮದ ಶಿವಣ್ಣ ಅವರ ಪತ್ನಿ ತುಳಸಮ್ಮ ಸಿಡಿಲಿನಿಂದ ಗಾಯಗೊಂಡು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 40 ಸಾವಿರ ರೂ. ಬೆಲೆ ಬಾಳುವ ಹಸು ಸಿಡಿಲು ಬಡಿದ ತೀವ್ರತೆಗೆ ಸಿಲುಕಿ ಜಮೀನಿನಲ್ಲಿಯೇ ಮೃತಪಟ್ಟಿದೆ ಎಂದು ತುಳಸಮ್ಮ ಅವರ ಪತಿ ಶಿವಣ್ಣ ಇಲ್ಲಿನ ಪಟ್ಟಣ ಪೊಲೀಸ ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Translate »