ಪಿಎಂ ಕೇರ್ಸ್ ಫಂಡ್‍ಗೆ 1 ಲಕ್ಷ ರೂ. ದೇಣಿಗೆ
ಮೈಸೂರು

ಪಿಎಂ ಕೇರ್ಸ್ ಫಂಡ್‍ಗೆ 1 ಲಕ್ಷ ರೂ. ದೇಣಿಗೆ

May 12, 2020

ಮೈಸೂರು,ಮೇ11(ಪಿಎಂ)- ಮೈಸೂರಿನ ಸಿದ್ಧಾರ್ಥನಗರದ ಗಾಯತ್ರಿ ಎಜುಕೇಷನ್, ಕಲ್ಚರಲ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕೇರ್ಸ್ ಫಂಡ್‍ಗೆ 1 ಲಕ್ಷ ರೂ. ಹಾಗೂ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 30 ಸಾವಿರ ರೂ. ದೇಣಿಗೆ ನೀಡಲಾಯಿತು. ಮೈಸೂರಿನ ಕಾಡಾ ಕಚೇರಿಯಲ್ಲಿ ಇತ್ತೀಚೆಗೆ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಸಂಘದ ಪದಾಧಿಕಾರಿಗಳು ಚೆಕ್‍ಗಳನ್ನು ಹಸ್ತಾಂತರಿಸಿದರು.

ಇದೇ ವೇಳೆ ಟ್ರಸ್ಟ್ ಕಾರ್ಯದರ್ಶಿ ವೀಣಾ ಡೋಂಗರೆ ಮಾತನಾಡಿ, ಟ್ರಸ್ಟ್ ಅಧ್ಯಕ್ಷೆ ವನಜಾ ಬಿ.ಪಂಡಿತ್ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಈ ದೇಣಿಗೆ ಸಂಗ್ರಹಿಸಿದ್ದೇವೆ. ಜೊತೆಗೆ ಲಾಕ್‍ಡೌನ್ ಅವಧಿಯಲ್ಲಿ ಟ್ರಸ್ಟ್ ವತಿಯಿಂದ ನಗರದ ಕೆಲ ವಿಪ್ರರಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿ ದರು. ಟ್ರಸ್ಟ್ ಉಪಾಧ್ಯಕ್ಷ ವೆಂಕಟರಾಮು, ನಿರ್ದೇಶಕ ಗೋವಿಂದ ಕುಲಕರ್ಣಿ, ಚಿತ್ಪಾವನ ಸಂಘದ ರಾಜ್ಯಾಧ್ಯಕ್ಷ ಬಾಲಚಂದ್ರ ಡೋಂಗರೆ ಮತ್ತಿತರರು ಹಾಜರಿದ್ದರು.

 

 

 

Translate »