ಲಾಕ್‍ಡೌನ್‍ನಿಂದ ಮೃಗಾಲಯ ಪ್ರಾಧಿಕಾರಕ್ಕೆ 16 ಕೋಟಿ ನಷ್ಟ ಮೃಗಾಲಯ ಪುನರಾರಂಭ ಸಂಬಂಧ ಸರ್ಕಾರಕ್ಕೆ ಮಾರ್ಗಸೂಚಿ ಸಲ್ಲಿಕೆ
ಮೈಸೂರು

ಲಾಕ್‍ಡೌನ್‍ನಿಂದ ಮೃಗಾಲಯ ಪ್ರಾಧಿಕಾರಕ್ಕೆ 16 ಕೋಟಿ ನಷ್ಟ ಮೃಗಾಲಯ ಪುನರಾರಂಭ ಸಂಬಂಧ ಸರ್ಕಾರಕ್ಕೆ ಮಾರ್ಗಸೂಚಿ ಸಲ್ಲಿಕೆ

May 31, 2020

ಮೈಸೂರು, ಮೇ 30(ಎಸ್‍ಬಿಡಿ)- ಲಾಕ್‍ಡೌನ್ ಪರಿಣಾಮ ಮೃಗಾಲಯ ಪ್ರಾಧಿಕಾರಕ್ಕೆ ಸುಮಾರು 16 ಕೋಟಿ ರೂ. ನಷ್ಟವಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.

ಮೈಸೂರು ಮೃಗಾಲಯ ಆವರಣ ದಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿದ ಅವರು, ಲಾಕ್‍ಡೌನ್ ಸಂದರ್ಭ ದಲ್ಲಿ ಮೈಸೂರು ಮೃಗಾಲಯದಲ್ಲಿ 6-7 ಕೋಟಿ ರೂ. ಹಾಗೂ ಬನ್ನೇರುಘಟ್ಟ ಮೃಗಾಲಯದಲ್ಲಿ 8 ಕೋಟಿ ರೂ. ನಷ್ಟ ವಾಗಿದೆ. ಆದರೆ ಈ ವೇಳೆಯಲ್ಲೇ ಪ್ರಾಣಿ ಗಳ ದತ್ತು ಸ್ವೀಕಾರದಲ್ಲಿ ದಾಖಲೆ ಮೊತ್ತ ಸಂಗ್ರಹವಾಗಿದೆ. ಜಿಲ್ಲಾ ಉಸ್ತುವಾರಿ ಸಚಿ ವರ ಮುಖೇನ ಮೈಸೂರು ಮೃಗಾಲಯ ದಲ್ಲಿ ಸುಮಾರು 2.90 ಕೋಟಿ ರೂ. ಹಾಗೂ ಬನ್ನೇರುಘಟ್ಟದಲ್ಲಿ 3 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಎಂದರು.

ಎಲ್ಲಾ 9 ಮೃಗಾಲಯಗಳ ಕಾರ್ಯಾ ಚರಣೆ ಸಂಬಂಧ ಮೇ 21ರಂದು ಪ್ರಾಧಿ ಕಾರದ ಸಭೆ ನಡೆಸಿ, ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲು ನಿರ್ಣಯಿಸಲಾಯಿತು. ಹಾಗೆಯೇ ಮೈಸೂರು ಮೃಗಾಲಯ ಸಿದ್ಧಪಡಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‍ಓಪಿ) ಮಾರ್ಗಸೂಚಿಯನ್ನು ಪರಿಶೀಲನೆಗಾಗಿ ಸಲ್ಲಿಸಲಾಗಿದೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಮೃಗಾಲಯಗಳನ್ನು ತೆರೆಯುವ ಸಂಬಂಧ ಸರ್ಕಾರದ ತೀರ್ಮಾನವೇ ಅಂತಿಮ. ಆದರೆ ಕಾರ್ಯಾಚರಣೆ ಆರಂಭಿಸಲು ಪ್ರಾಧಿಕಾರ ಸನ್ನದ್ಧವಾಗಿದೆ ಎಂದು ಹೇಳಿದರು.

ಲಾಕ್‍ಡೌನ್‍ಗಿಂತ ಹಿಂದೆ ಮೈಸೂರು ಮೃಗಾಲಯಕ್ಕೆ ಪ್ರತಿನಿತ್ಯ 5-10 ಸಾವಿರ ವೀಕ್ಷ ಕರು ಬರುತ್ತಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೃಗಾಲಯ ತೆರೆದರೂ 500-1000 ಜನ ಬರಬಹುದು. ಹಾಗಾಗಿ ಮಾರ್ಗಸೂಚಿ ಪಾಲನೆಗೆ ಕಷ್ಟವಾಗುವುದಿಲ್ಲ. ಕಾರ್ಯಾ ರಂಭದ ನಂತರ ಪರಿಸ್ಥಿತಿ ಅವಲೋಕಿಸಿ, ಅಗತ್ಯ ಮಾರ್ಪಾಡು ಮಾಡಿ ಕೊಳ್ಳಲು ಹಾಗೂ ಸರ್ಕಾರ ವಿಧಿಸುವ ನಿರ್ಬಂಧ ಪರಿಪಾಲನೆಗೆ ನಾವು ಸಿದ್ಧವಿದ್ದೇವೆ. ಪ್ರಾಣಿಗಳ ಮೇಲೆ ಕೊರೊನಾ ಪರಿಣಾಮ ಬೀರಿರುವ ಬಗ್ಗೆ ಸ್ಪಷ್ಟವಾಗಿಲ್ಲ. ಅದರಲ್ಲೂ ಭಾರತದ ಮೃಗಾಲಯಗಳು ಹೆಚ್ಚು ಸುರಕ್ಷಿತ. ಪ್ರಾಣಿಗಳಿಗೂ ವೀಕ್ಷಕರಿಗೂ ಸುಮಾರು ಆರೇಳು ಮೀಟರ್ ಅಂತರವಿರುತ್ತದೆ. ಪ್ರಾಣಿ ವಿನಿಮಯ ಯೋಜನೆಯಡಿ ಯಾವುದಾದರೂ ಪ್ರಸ್ತಾವನೆ ಯಿದ್ದರೆ ಆರೇಳು ತಿಂಗಳು ಮುಂದೂಡುವ ಅವಕಾಶವಿದೆ ಎಂದರು. ಕೊರೊನಾ ವಿರುದ್ಧ ಸಂಘಟಿತವಾಗಿ ಹೋರಾಡಬೇಕಿದೆ. ಮೃಗಾಲಯ ಪುನಾರಂಭಕ್ಕೆ ಸರ್ಕಾರ ಅನುಮತಿ ಸಿದರೆ ವೀಕ್ಷಕರನ್ನು ಸ್ವಾಗತಿಸುತ್ತೇವೆ. ವೈಯಕ್ತಿಕ ರಕ್ಷಣೆ ಜೊತೆಗೆ ಸಮುದಾಯ ಹಾಗೂ ಮೃಗಾಲಯದ ಹಿತದೃಷ್ಟಿಯಿಂದ ಮಾರ್ಗಸೂಚಿ ಅನುಸರಿಸಬೇಕೆಂದು ಮನವಿ ಮಾಡಿದರು.

Translate »