ಚಾಮರಾಜ ಕ್ಷೇತ್ರದಲ್ಲಿ 18 ಸಾವಿರ ದಿನಸಿ ಕಿಟ್ ವಿತರಣೆ: ಶಾಸಕ ನಾಗೇಂದ್ರ
ಮೈಸೂರು

ಚಾಮರಾಜ ಕ್ಷೇತ್ರದಲ್ಲಿ 18 ಸಾವಿರ ದಿನಸಿ ಕಿಟ್ ವಿತರಣೆ: ಶಾಸಕ ನಾಗೇಂದ್ರ

May 3, 2020

ಮೈಸೂರು, ಮೇ 2(ಆರ್‍ಕೆಬಿ)- ಲಾಕ್ ಡೌನ್‍ನಿಂದಾಗಿ ತೊಂದರೆಗೀಡಾಗಿರುವ ಚಾಮರಾಜ ಕ್ಷೇತ್ರ ವ್ಯಾಪ್ತಿಯ ವಿಜಯ ನಗರ 1ನೇ ಹಂತದ ಕಾರ್ಮಿಕರು, ಬಡ ಜನರಿಗೆ ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ನಗರಪಾಲಿಕೆ ಸದಸ್ಯ ಸುಬ್ಬಯ್ಯ ಶುಕ್ರವಾರ ಕೊಡಗು ಗೌಡ ಸಮಾ ಜದ ಛತ್ರದ ಆವರಣದಲ್ಲಿ ಅಕ್ಕಿ, ತೊಗರಿ ಬೇಳೆ, ಸಕ್ಕರೆ, ಈರುಳ್ಳಿ, ಆಲೂಗೆಡ್ಡೆ, ಗೋಧಿಹಿಟ್ಟು, ಅಡುಗೆ ಎಣ್ಣೆ ಒಳಗೊಂಡ ದಿನಸಿ ಕಿಟ್‍ಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಲಾಕ್‍ಡೌನ್‍ನಿಂದ ತೊಂದ ರೆಗೆ ಸಿಲುಕಿರುವ ಕೂಲಿ ಕಾರ್ಮಿಕರು ಹಾಗೂ ಬಡ ಜನರು ಸೇರಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ 18 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಮೇ 17ರವರೆಗೂ ಲಾಕ್‍ಡೌನ್ ಮುಂದುವರಿಯಲಿದ್ದು, ದಿನಸಿ ಕಿಟ್ ವಿತರಣೆಯೂ ಮುಂದು ವರಿಸಲಾಗುವುದು ಎಂದು ತಿಳಿಸಿದರು.

ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕೆ.ನಾರಾಯಣಗೌಡ, ಮಾಜಿ ಉಪ ಮೇಯರ್ ಮಹದೇವಪ್ಪ, ಬಿಜೆಪಿ ಚಾಮರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಪುನೀತ್, ಮುಖಂಡ ರಾದ ಕೇಶವಮೂರ್ತಿ, ಹೇಮಾ, ಮಂಜುಳಾ, ಸತೀಶ್, ಧಶರಥ್, ಬಿ.ಎಸ್.ರಶ್ಮಿ, ಶುಭಾ, ಅನಿತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Translate »