2.53 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸಾರಾ ಚಾಲನೆ
ಮೈಸೂರು

2.53 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸಾರಾ ಚಾಲನೆ

July 18, 2021

ಕೆ.ಆರ್.ನಗರ, ಜು.17- ಪಟ್ಟಣದ ಕನಕ ನಗರದಲ್ಲಿ 2ನೇ ಹಂತದ ಒಳಚರಂಡಿ ಯೋಜನೆಯಡಿ ತೇವಬಾವಿ ಹಾಗೂ ಡಿ.ಜಿ.ರೂಂ ನಿರ್ಮಾಣ, ಒಳಚರಂಡಿ ಕೊಳವೆ ಮಾರ್ಗಗಳ ಲಿಂಕಿಂಗ್ ಸೇರಿದಂತೆ 2.53 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಾ.ರಾ. ಮಹೇಶ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಈ ಕೆಲಸ ಪ್ರಾರಂಭವಾಗಿದ್ದು, ಈ ಕಾಮಗಾರಿ ಜೊತೆಗೆ ಸ್ಟೇಡಿಯಂ ಹತ್ತಿರ 150 ಕೆಎಲ್‍ಡಿ ಹಾಗೂ ಕಂಠೇನಹಳ್ಳಿಯಲ್ಲಿ 250 ಕೆಎಲ್‍ಡಿ ಸಾಮಥ್ರ್ಯದ ಎಸ್‍ಬಿಆರ್ ತಾಂತ್ರಿಕತೆಯ ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ನಗರಾ ಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು 2ನೇ ಹಂತದ ಒಳಚರಂಡಿ ಯೋಜನೆಗೆ 16 ಕೋಟಿ ರೂ. ನೀಡಿದ್ದರು. ಎರಡು ತೇವಬಾವಿ ನಿರ್ಮಾಣಕ್ಕೆ ಅವ ಕಾಶ ನೀಡಲಾಗಿದ್ದು, ಆದರೆ ಭೂ ವಿವಾದ ದಿಂದ ಈ ಸ್ಥಳದ ಕಾಮಗಾರಿಯನ್ನು ಗುತ್ತಿಗೆದಾರರು ತೆರವು ಮಾಡಿಸಿಕೊಂಡು ಹೋಗಿದ್ದರು. ಕಾರಣ ಈ ಲೇಔಟ್ ಅಭಿ ವೃದ್ಧಿ ಪಡಿಸಲು 1 ಕೋಟಿ ಬಿಟ್ಟು ಬಿಲ್ ಆಗಿತ್ತು. ನ್ಯಾಯಾಲಯದ ಆದೇಶದ ನಂತರ ಮತ್ತೆ ಸರ್ಕಾರದ ಮೇಲೆ ಒತ್ತಡ ತಂದು 2 ಕೋಟಿ ಬಿಡುಗಡೆ ಮಾಡಿಸಲಾಯಿತು ಎಂದರು.
ಖಾಸಗಿ ಲೇಔಟ್ ಅಭಿವೃದ್ಧಿ ಹೊಂದಿ ದ್ದರೂ ತಾಲೂಕು ಸೇರಿದಂತೆ ಬೇರೆಡೆಯಿಂದ ಬಂದವರು ನಿವೇಶನ ಖರೀದಿಸಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಅಲ್ಲದೇ ಈ ನಗರಕ್ಕೆ ಹೊಂದಿಕೊಂಡಿರುವ ಗ್ರಾಪಂ ವ್ಯಾಪ್ತಿಯ ಎಲ್ಲಾ ಬಡಾವಣೆಗಳ ನಿವಾಸಿ ಗಳಿಗೆ ಅನುಕೂಲವಾಗಲಿ ಎಂದು 40 ಕೋಟಿ ವೆಚ್ಚದ 3ನೇ ಯೋಜನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಮಂಜೂರು ಹಂತದಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ಸಂತೋಷ್, ಇಓ ಹೆಚ್.ಕೆ.ಸತೀಶ್, ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಪುರಸಭಾ ಅಧ್ಯಕ್ಷ ಕೆ.ಜಿ.ಸುಬ್ರಮಣ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜ್, ಸದಸ್ಯ ರಾದ ಕೆ.ಎಲ್.ಜಗದೀಶ್, ಶಂಕರ್, ಶಿವುನಾಯಕ್, ಸಂತೋಷ್‍ಗೌಡ, ಕೆ.ಪಿ.ಪ್ರಭುಶಂಕರ್, ಶಂಕರ್, ಮುಖ್ಯಾಧಿಕಾರಿ ಪುಟ್ಟರಾಜು ಸೇರಿದಂತೆ ಇನ್ನಿತರರಿದ್ದರು.

Translate »