ರಾಮನಗರ ಜೈಲಿನಲ್ಲಿರಿಸಿದ್ದ ಪಾದರಾಯನಪುರ ಪ್ರಕರಣದ ಆರೋಪಿಗಳಲ್ಲೂ ಕೊರೊನಾ ಸೋಂಕು
ಮೈಸೂರು

ರಾಮನಗರ ಜೈಲಿನಲ್ಲಿರಿಸಿದ್ದ ಪಾದರಾಯನಪುರ ಪ್ರಕರಣದ ಆರೋಪಿಗಳಲ್ಲೂ ಕೊರೊನಾ ಸೋಂಕು

April 24, 2020

ಬೆಂಗಳೂರು, ಏ.23- ಪಾದರಾಯನಪುರ ಗಲಾಟೆ ಸಂಬಂಧ ಬಂಧಿತರಾಗಿ ರಾಮನಗರ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳಿಗೆ ಗುರುವಾರ ರಾತ್ರಿ ಕೊರೊನಾ ವೈರಸ್ ಧೃಡಪಟ್ಟಿರುವುದು ತೀವ್ರ ಆತಂಕ ಉಂಟು ಮಾಡಿದೆ. ಅಲ್ಲದೇ ಇಂದು ಬೆಂಗಳೂರಿನಲ್ಲಿ ಒಟ್ಟು 15 ಮಂದಿಗೆ ಸೋಂಕು ಧೃಡಪಟ್ಟಿದ್ದು, ರಾಜಧಾನಿಯಲ್ಲಿ ಸೋಂಕು ಇನ್ನಷ್ಟು ಹರಡುವ ಭೀತಿ ಎದುರಾಗಿದೆ.

ಪಾದರಾಯನಪುರ ಗಲಾಟೆಗೆ ಸಂಬಂಧಿಸಿದಂತೆ 121 ಆರೋಪಿಗಳನ್ನು ಬಂಧಿಸಿ, ರಾಮನಗರ ಜೈಲಿನಲ್ಲಿಡಲಾ ಗಿತ್ತು. ಅವರನ್ನು ಜೈಲಿಗೆ ಕರೆದೊಯ್ಯುವ ಮುನ್ನ ರಕ್ತ ಮತ್ತು ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ ಇಬ್ಬರಿಗೆ ಇಂದು ರಾತ್ರಿ ಸೋಂಕು ದೃಢಪಟ್ಟಿದ್ದು, ಅವರಿಬ್ಬರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರೋರಾತ್ರಿ ಬಿಗಿ ಭದ್ರತೆಯೊಂದಿಗೆ ರವಾನಿಸಲಾಗಿದೆ.

ಜೈಲಿನಲ್ಲಿರುವ ಇತರ ಆರೋಪಿಗಳಲ್ಲಿ ಇನ್ನೆಷ್ಟು ಮಂದಿಗೆ ಸೋಂಕು ತಗುಲಿದೆಯೋ ಎಂಬ ಆತಂಕದ ಜೊತೆಗೆ ಜೈಲು ಸಿಬ್ಬಂದಿ ಹಾಗೂ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕರೆತಂದ ಪೊಲೀಸರನ್ನೂ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಾದರಾಯನಪುರ ಆರೋಪಿ ಗಳನ್ನು ರಾಮನಗರ ಜೈಲಿಗೆ ರವಾನಿಸಬೇಡಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡಿದ್ದೆ. ಆದರೂ ನನ್ನ ಮಾತನ್ನು ನಿರ್ಲಕ್ಷಿಸಿ ಗ್ರೀನ್ ಜೋನ್‍ನಲ್ಲಿರುವ ರಾಮನಗರಕ್ಕೆ ಆರೋಪಿಗಳನ್ನು ಕರೆ ತರುವ ದುಸ್ಸಾಹಸವನ್ನು ಸರ್ಕಾರ ಮಾಡಿದೆ. ಈಗ ಜೈಲು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಬೇಕಿದೆ ಎಂದರು. ಸರ್ಕಾರ ಪರಿಸ್ಥಿತಿಯನ್ನು ಸರಿಯಾದ ರೀತಿ ನಿರ್ವಹಣೆ ಮಾಡಿ, ಅಮಾಯ ಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳದೇ ಇದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

Translate »